ಕರಾವಳಿ

ಯಾವ ವಯಸ್ಸಿಗೆ ಎಷ್ಟು ನಿದ್ದೆ ಅಗತ್ಯ ಗೋತ್ತೆ..?

Pinterest LinkedIn Tumblr

ಮನುಷ್ಯನಿಗೆ ನಿದ್ದೆ ಅನ್ನುವುದು ಆಹಾರ ನೀರು ಮತ್ತು ಗಾಳಿಯಷ್ಟೇ ಮುಖ್ಯ. ಆದರೆ ಈ ಆಧುನಿಕ ಮಾನವನಿಗೆ ಕೆಲಸದ ಒತ್ತಡ, ಸಾಮಾಜಿಕ ಜಾಲತಾಣಗಳಂತಹ ಅಭ್ಯಾಸಗಳಿಂದ ನಿದ್ದೆಯ ಮಹತ್ವವನ್ನೇ ಮರೆತು ಬಿಟ್ಟಿದ್ದಾನೆ. ಒಂದು ದಿನ ನಾವು ಸರಿಯಾಗಿ ನಿದ್ದೆ ಮಾಡಿಲ್ಲ ಎಂದರೆ ಆ ದಿನ ನಮಗೆ ಆರಾಮದಾಯಕವಾಗಿರುವುದಿಲ್ಲ ಮತ್ತು ಕೆಲವರಿಗೆ ಎಷ್ಟು ಗಂಟೆ ನಿದ್ದೆ ಮಾಡಬೇಕು ಯಾವಾಗ ನಿದ್ದೆ ಮಾಡಬೇಕು ಹಾಗು ಎಷ್ಟು ವಯಸ್ಸಿಗೆ ಎಷ್ಟು ನಿದ್ದೆ ಮಾಡಬೇಕು ಅನ್ನುವುದೇ ಗೊತ್ತಿರುವುದಿಲ್ಲ ಆದ್ದರಿಂದ ಅದನ್ನು ನಾವು ನಿಮಗೆ ತಿಳಿಸಿಕೊಡುತ್ತೇವೆ ನೋಡಿ.

ನಾವು ಆದಷ್ಟು ರಾತ್ರಿಯ ಸಮಯದಲ್ಲಿ ನಿದ್ದೆ ಮಾಡಿದರೆ ಆರೋಗ್ಯಕ್ಕೆ ಒಳಿತು, ತಡರಾತ್ರಿ ಮಲಗುವುದು ಬೆಳಗ್ಗೆ ಲೇಟಾಗಿ ಹೇಳುವುದು ಆರೋಗ್ಯಕ್ಕೆ ಒಳ್ಳೆಯದಲ್ಲ.ಹೀಗೆ ನಮ್ಮ ವಯಸ್ಸಿನ ತಕ್ಕ ಹಾಗೆ ನಿದ್ದೆ ಮಾಡಿದರೆ ನಮ್ಮ ಅರೋಗ್ಯ ತುಂಬಾ ಚೆನ್ನಾಗಿರುತ್ತದೆ.

ನವಜಾತ ಶಿಶುವು ಮೂರು ತಿಂಗಳವರೆಗೆ ದಿನಕ್ಕೆ ೧೪ ರಿಂದ 17 ಗಂಟೆ ನಿದ್ದೆ ಮಾಡಿದರೆ ಮಗುವಿನ ಬೆಳವಣಿಗೆಗೆ ತುಂಬಾ ಒಳಿತು. ನಾಲ್ಕರಿಂದ ಒಂದು ವರ್ಷದ ವರೆಗಿನ ಮಕ್ಕಳು 12 ರಿಂದ 15 ಗಂಟೆಗಳ ಕಾಲ ನಿದ್ದೆ ಮಾಡಬೇಕು.

ಒಂದರಿಂದ ಎರಡು ವರ್ಷದ ಒಳಗಿನ ಮಕ್ಕಳು 11 ರಿಂದ 14 ಗಂಟೆಗಳ ಕಾಲ ನಿದ್ದೆ ಮಾಡಬೇಕು.

ಮೂರರಿಂದ ಐದು ವರ್ಷದ ಮಕ್ಕಳು 10 ರಿಂದ 14 ಗಂಟೆಗಳ ಕಾಲ ನಿದ್ದೆ ಮಾಡಬೇಕು.

ಆರರಿಂದ ಹದಿಮೂರು ವರ್ಷದ ಒಳಗಿನ ಮಕ್ಕಳು 9 ರಿಂದ 11 ಗಂಟೆ ನಿದ್ದೆ ಮಾಡಬೇಕು.

14 ರಿಂದ 17 ವರ್ಷದೊಳಗಿನವರು ದಿನಕ್ಕೆ 8 ರಿಂದ 9 ಗಂಟೆ ನಿದ್ದೆ ಮಾಡಿದರೆ ಒಳಿತು.

18 ವರ್ಷದಿಂದ ಮೇಲ್ಪಟ್ಟ ವಯಸ್ಕರು ದಿನದಲ್ಲಿ 7 ರಿಂದ 8 ಗಂಟೆ ನಿದ್ದೆ ಮಾಡಬೇಕು.

ಹೀಗೆ ನಮ್ಮ ವಯ್ಯಸ್ಸಿಗೆ ಅನುಗುಣವಾಗಿ ಅಷ್ಟು ಗಂಟೆಗಳ ಕಾಲ ತಪ್ಪದೆ ನಿದ್ದೆ ಮಾಡಿದರೆ ನಮ್ಮಗೆ ನಿದ್ರಾಹೀನತೆಯಂತಹ ಮತ್ತು ಮಾನಸಿಕ ಖಿನ್ನತೆಯಂತಹ ಸಮಸ್ಯೆಗಳಿಂದ ದೂರ ಉಳಿದು ಅತ್ತಮ ಆರೋಗ್ಯದಿಂದ ಇರಬಹುದಾಗಿದೆ.

Comments are closed.