ಕರಾವಳಿ

ಮಣ್ಣಗುಡ್ಡೆ ಬಳಿ ಗಾಂಜಾ ಮಾರಾಟಕ್ಕೆ ಯತ್ನ : 1 ಕೆಜಿ ಗಾಂಜಾ ಸಹಿತಾ ಬಳ್ಳಾಲ್ ಭಾಗ್‌ನ ಆರೋಪಿ ಸೆರೆ

Pinterest LinkedIn Tumblr

ಮಂಗಳೂರು, ನವೆಂಬರ್.15 : ಮಂಗಳೂರಿನ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ವ್ಯಕ್ತಿಯನ್ನು ಬುಧವಾರ ಮಂಗಳೂರಿನ ಎಕಾನಾಮಿಕ್ & ನಾರ್ಕೋಟಿಕ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಯನ್ನು ನಗರದ ಬಳ್ಳಾಲ್ ಭಾಗ್‌ನ ಭಗವತಿ ನಗರದ ನಿವಾಸಿ ಕೆ.ಮಿಥುನ್ ಶೆಟ್ಟಿ (41)ಎಂದು ಗುರುತಿಸಲಾಗಿದೆ.

ಮಂಗಳೂರು ಎಕಾನಾಮಿಕ್ & ನಾರ್ಕೋಟಿಕ್ ಕ್ರೈಂ ಪೊಲೀಸ್ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿಗಳು ಮಾದಕ ದ್ರವ್ಯಗಳ ಸಾಗಾಟ/ ಮಾರಾಟ ಮಾಡುವವರ ಪತ್ತೆಯ ಬಗ್ಗೆ ಕೈಗೊಂಡಿರುವ ಕಾರ್ಯಾಚರಣೆ ಸಂದರ್ಭ ನಗರದ ಮಣ್ಣಗುಡ್ಡೆ ವೇರ್ ಹೌಸ್ ಜಂಕ್ಷನ್ ಬಳಿ ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಸೆರೆ ಹಿಡಿದಿದ್ದಾರೆ.

ಬಂಧಿತ ಆರೋಪಿ ಬಳಿ ಇದ್ದ ಸುಮಾರು 1 ಕೆಜಿ 300 ಗ್ರಾಂ ತೂಕದ 53000/- ರೂ ಮೌಲ್ಯದ ಗಾಂಜಾ, ಯಮಹಾ RX-100 ಬೈಕ್ ಹಾಗೂ 1- ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದ್ದು, ಸ್ವಾಧೀನ ಪಡಿಸಿದ ಒಟ್ಟು ಸ್ವತ್ತುಗಳ ಮೌಲ್ಯ 90,000/- ಆಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಆಯುಕ್ತರಾದ ಟಿ.ಆರ್. ಸುರೇಶ್ ರವರ ಆದೇಶದಂತೆ ಕಾನೂನು ಸುವ್ಯವಸ್ಥೆಯ ಡಿಸಿಪಿ ಹನುಮಂತ ರಾಯ ಅವರ ನಿರ್ದೇಶನದಂತೆ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಶ್ರೀಮತಿ ಉಮಾ ಪ್ರಶಾಂತ್ ರವರ ಮಾರ್ಗದರ್ಶನ ದಲ್ಲಿ ಪತ್ರಾಂಕಿತ ಅಧಿಕಾರಿಯಾದ, ಕೇಂದ್ರ ಉಪ ವಿಭಾಗದ ಎಸಿಪಿ ಭಾಸ್ಕರ ಒಕ್ಕಲಿಗ ಇವರ ನೇತೃತ್ವದಲ್ಲಿ, ಪೊಲೀಸ್ ನಿರೀಕ್ಷಕರಾದ ಮಹಮ್ಮದ್ ಶರೀಫ್ ಪೊಲೀಸ್ ಸಿಬ್ಬಂದಿಗಳಾದ ಎ.ಎಸ್.ಐ ಶ್ಯಾಮ್ ಸುಂದರ್, ಲಕ್ಷ್ಮೀಶ, ಜಗದೀಶ್, ಶಾಜು ನಾಯರ್, ಪ್ರಶಾಂತ್ ಶೆಟ್ಟಿ ಜಾಯ್ಸ್ ಡಿಸೋಜ, ಕಿಶೋರ್ ಪೂಜಾರಿ, ಹಾಗೂ ಭಾಸ್ಕರ್ ಮುಂತಾದವರು ಭಾಗವಹಿಸಿರುತ್ತಾರೆ.

Comments are closed.