ಕರಾವಳಿ

ಶಾಕಾಹಾರ v/s ಮಾಂಸಾಹಾರ… ಆರೋಗ್ಯಕ್ಕೆ ಉತ್ತಮ ಯಾವುದು…?

Pinterest LinkedIn Tumblr

ಮಾಂಸಾಹಾರ ಪದಾರ್ಥ ಗಳಿಗಿಂತಲೂ ಶಾಕಾಹಾರ ಪದಾರ್ಥಗಳಲ್ಲಿ ಹೆಚ್ಚು ಕನಿಜ ವಿಟಮಿನ್ ಗಳು ಇರುತ್ತದೆ ಆದುದರಿಂದ ಶಾಕಾಹಾರವೇ ಶ್ರೇಷ್ಠರ ಶಾಕಾಹಾರ ಪದಾರ್ಥಗಳನ್ನು ಸೇವಿಸುವುದರಿಂದ ಮನುಜನಿಗೆ ಅನೇಕ ಬಗೆಯ ಅನುಕೂಲಗಳು ದೊರೆಯುತ್ತದೆ ಮಾಂಸಾಹಾರ ಸೇವನೆಯಿಂದ ಬಗೆ ಬಗೆಯ ಅನಾನುಕೂಲತೆಗಳು ಉಂಟಾಗುತ್ತವೆ ಅವುಗಳ ವಿವರಣೆಯನ್ನು ಈ ಕೆಳಗಿನ ಅಂಶಗಳಲ್ಲಿ ಅರಿತುಕೊಳ್ಳೋಣ.

ಮಾಂಸಾಹಾರ ಸೇವನೆಯಿಂದ ಆಗುವ ದುಷ್ಪರಿಣಾಮಗಳು.
ಮಾಂಸಾಹಾರ ಸೇವನೆಯಿಂದ ಒಂದು ಪ್ರಾಣಿಯನ್ನು ಕೊಂದು ಅದರ ಪಾಪವನ್ನು ಹೊತ್ತಿಕೊಳ್ಳುವ ದೌರ್ಭಗ್ಯವು ಸಂಭವಿಸುತ್ತದೆ, ಮಾಂಸಾಹಾರ ಸೇವನೆಯಿಂದ ದೇಹವು ದಟ್ಟವಾಗಿ ಬೆಳೆಯಬಹುದು, ಪುಷ್ಟಿಕರವಾಗಿ ಇರಬಹುದು ಆದರೆ ಬುದ್ದಿ ಮಂಕಾಗುತ್ತದೆ, ಮಾಂಸಾಹಾರ ಹೆಚ್ಚು ಸೇವಿಸುವ ವ್ಯಕ್ತಿಗಳಲ್ಲಿ ಬುದ್ದಿಯು ಕಡಿಮೆ ಇರುತ್ತದೆ, ಮಾಂಸಾಹಾರ ಸೇವನೆಯಿಂದ ಮನಸ್ಸು ಮಲಿನವಾಗಿ ಸಂಕುಚಿತವಾಗುತ್ತದೆ.

ಈ ಹಿಂದಿನ ಮಹಾವ್ಯಕ್ತಿಗಳನ್ನು ನೋಡುವುದಾದರೆ ಮಾಂಸವನ್ನು ಸೇವಿಸುತ್ತಿದ್ದ ಮಹಾನ್ ವ್ಯಕ್ತಿಗಳು ಯಾರೂ ಇಲ್ಲವೆಂದೇ ಹೇಳಬೇಕು, ಋಷಿಗಳು, ಮುನಿಗಳು, ತಪಸ್ವಿಗಳು ಹೀಗೆ ಮಹತ್ತರವಾದ ಸಾಧನೆಗಳನ್ನು ಸಾಧಿಸುವ ಶ್ರೇಷ್ಠ ಪುರುಷರು ಎಲ್ಲರೂ ಶಾಕಾಹಾರಿಗಳು ಆಗಿದ್ದರು.

ಒಂದು ಜೀವಿಯನ್ನು ಕೊಂಡು ಅದರ ಮಾಂಸವನ್ನು ತಿನ್ನುವುದರಿಂದ ನಮ್ಮ ಹೊಟ್ಟೆಯು ಸ್ಮಶಾಣದಂತಾಗುತ್ತದೆ, ಸ್ಮಶಾನಕ್ಕೆ ಹೋಗಿ ಬಂದ ಕೂಡಲೇ ನಾವು ಸ್ನಾನವನ್ನು ಮಾಡುತ್ತೇವೆ, ಸ್ಮಶಾನವನ್ನು ಕೆಟ್ಟದೆಂದು ಭಾವಿಸುತ್ತೇವೆ, ಆದರೆ ಮಾಂಸಾಹಾರ ಸೇವನೆಯಿಂದ ನಮ್ಮ ಹೊಟ್ಟೆಯನ್ನೇ ಸ್ಮಶಾಣವನ್ನಾಗಿ ಮಾಡಿಕೊಂಡು, ಸ್ಮಶಾಣವನ್ನು ಹೊತ್ತು ತಿರುಗುವ ದೌಭಾಗ್ಯವು ನಮಗೆ ಆವರಿಸುತ್ತದೆ, ಮಾಂಸಾಹಾರ ಸೇವನೆಯಿಂದ ಪಾಪ ಆವರಿಸುತ್ತದೆ, ಬುದ್ದಿ ಮಂಕಾಗುತ್ತದೆ, ಮನಸ್ಸು ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ, ದಯೆ ಕರುಣೆಗಳು ಉದಯಿಸದೇ ಹೋಗುತ್ತದೆ, ಒಟ್ಟಾರೆ ಒಂದೇ ಮಾತಿನಲ್ಲಿ ಹೇಳುವುದಾದರೆ ಮಾಂಸಾಹಾರ ಸೇವನೆಯಿಂದ ಮನುಜ ಶಕ್ತಿವಂತ ಮೂರ್ಖನಾಗುತ್ತಾನೆ ಜೊತೆಗೆ ಪಾಪಿ ಸಹ ಆಗುತ್ತಾನೆ ಆದುದರಿಂದ ಮಾಂಸಾಹಾರ ಸೇವನೆ ಉತ್ತಮವಲ್ಲ..

ಶಾಕಾಹಾರ ಸೇವನೆಯಿಂದ ದೊರೆಯುವಂತಹ ಉತ್ತಮ ಪ್ರತಿಫಲಗಳು.
ಶಾಕಾಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಮ್ಮ ದೇಹವು ಆರೋಗ್ಯಕರವಾಗಿ ಶಕ್ತಿಯುತವಾಗಿ ಇರುವುದರ ಜೊತೆಗೆ ನಮ್ಮ ಬುದ್ಧಿಯು ಚುರುಕಾಗುತ್ತದೆ, ಮನಸ್ಸು ವಿಶಾಲವಾಗುತ್ತದೆ, ಉತ್ತಮ ಪ್ರತಿಭೆ ಉದಯಿಸಲು ಸಾಧ್ಯವಾಗುತ್ತದೆ, ಮನದಲ್ಲಿ ಜ್ಞಾನವು ಉದಯಿಸಲು ಮಾರ್ಗ ದೊರೆಯುತ್ತದೆ, ಯಾವುದೇ ರೀತಿಯ ಪಾಪಗಳು ಮನುಜನನ್ನು ಆವರಿಸುವುದಿಲ್ಲ, ಬಹುತೇಕ ಜನರು ಮಾಂಸಾಹಾರ ಪುಷ್ಟಿಕರ ಎಂದು ಬಾವಿಸುತ್ತಾರೆ ಆದರೆ ಈ ಭಾವನೆಯು ಸಂಪೂರ್ಣ ತಪ್ಪು ಭಾವನೆ, ಮಾಂಸ ಆಹಾರಕ್ಕಿಂತ ಹೆಚ್ಚು ವಿಟಮಿನ್ ಗಳು ಹೆಚ್ಚು ಖನಿಜ ಪದಾರ್ಥಗಳು ಶಾಕಾಹಾರದಲ್ಲಿ ಸಿಗುತ್ತದೆ.

ಮನಸ್ಸುಗಳನ್ನು ಚುರುಕಾಗಿ ಕಾರ್ಯ ನಿರ್ವಹಿಸುತ್ತವೆ, ಆಧ್ಯಾತ್ಮಿಕ ಸಾಧನೆಗಳನ್ನು ಮಾಡಲು ಶಾಕಾಹಾರ ಸೇವನೆ ಹೆಚ್ಚು ಸಹಾಯಕಾರಿಯಾಗುತ್ತದೆ, ಜನ್ಮವನ್ನು ಸಾರ್ಥಕ ಮಾಡಿಕೊಳ್ಳಬೇಕು ಎಂಬ ಮನೋಭಾವನೆ ಇರುವ ವ್ಯಕ್ತಿಗಳು ಯಾವ ಜೀವಿಗೂ ನೋವು ಉಂಟಾಗಬಾರದು ಎಂಬ ಶ್ರೇಷ್ಠ ಮನೋಭಾವವುಳ್ಳ ವ್ಯಕ್ತಿಗಳು ಶಾಖಆಹಾರವನ್ನು ಸೇವಿಸುತ್ತಾ ಬಂದರೆ ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ಬುದ್ಧಿ ಮನಸ್ಸು ಮೂರು ಆರೋಗ್ಯವಂತವಾಗಿರುತ್ತದೆ, ಆದುದರಿಂದ ಶಾಖಹಾರ ಪದಾರ್ಥಗಳ ಸೇವನೆ ರೂಡಿ ಮಾಡಿಕೊಳ್ಳಬೇಕು.

Comments are closed.