ಉಡುಪಿ: ಮೈದಾನದಲ್ಲಿ ನಿಲ್ಲಿಸಿದ್ದ ಟಾಟಾ ಸುಮೋ ವ್ಯಾನೊಂದು ಏಕಾಏಕಿ ಚಲಿಸಿದ ಪರಿಣಾಮ ಆ ವಾಹನದಡಿಗೆ ಬಿದ್ದು ಬಾಲಕಿಯೋರ್ವಳು ದಾರುಣವಾಗಿ ಮೃತಪಟ್ಟ ಘಟನೆ ಕಾಪು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಆಫಿಯಾ ಬಾನು (5) ಮೃತ ಬಾಲಕಿ. ಈಕೆ ಅಲ್ಲಿಗೆ ಸಮೀಪದ ನಿವಾಸಿಯಾಗಿದ್ದಳು.

ಕಾಪು ಸಮೀಪದ ಕಟಪಾಡಿಯ ಸರಕಾರಿ ಗುಡ್ಡೆಯಲ್ಲಿ ಸುಮೋ ವ್ಯಾನನ್ನು ಪಾರ್ಕ್ ಮಾಡಲಾಗಿತ್ತು. ಚಾಲಕ ಕೆಲಸದ ನಿಮಿತ್ತ ಹೊರಗಡೆ ತೆರಳಿದ್ದು ಅಲ್ಲೇ ಆಟವಾಡುತ್ತಿದ್ದ 5 ವರ್ಷದ ಬಾಲಕಿ ಸುಮೋ ವಾಹನದ ಬಳಿ ತೆರಳಿದ್ದಳು. ಈ ಸಂದರ್ಭ ಏಕಾಏಕಿ ವಾಹನ ಚಲಿಸಿದೆ. ಈ ಸಂದರ್ಭ ಏನೂ ತಿಳಿಯದ ಬಾಲಕಿ ಸುಮೋದಡಿಗೆ ಸಿಲುಕಿ ದಾರುಣವಾಗಿ ಮೃತಪಟ್ಟಿದ್ದಾಳೆ
ಈ ಬಗ್ಗೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Comments are closed.