ಕರಾವಳಿ

ತೆಕ್ಕಟ್ಟೆ: ಮಾಲಾಡಿಯಲ್ಲಿ ಚಿರತೆಗಳೆರಡು ಪ್ರತ್ಯಕ್ಷ; ಬೋನಿಟ್ಟ ಇಲಾಖೆ!

Pinterest LinkedIn Tumblr

ಕುಂದಾಪುರ: ಕಳೆದ ಮೂರು ತಿಂಗಳಿನ ಹಿಂದಷ್ಟೇ ಚಿರತೆ ಸೆರೆಯಾಗಿದ್ದ ತಾಲೂಕಿನ ತೆಕ್ಕಟ್ಟೆ ಗ್ರಾಮಪಂಚಾಯತಿ ವ್ಯಾಪ್ತಿಯ ಮಾಲಾಡಿ ಎಂಬಲ್ಲಿ ಮತ್ತೆ ಎರಡು ಚಿರತೆಗಳು ಸ್ಥಳೀಯರ ಎದುರು ಪ್ರತ್ಯಕ್ಷವಾಗಿದ್ದು ಭೀತಿ ಸ್ರಷ್ಟಿಯಾಗಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡುತ್ತಲೇ ಸ್ಥಳಕ್ಕೆ ದೌಡಾಯಿಸಿದ ಅರಣ್ಯ ಇಲಾಖೆ ಬೋನು ಇಟ್ಟು ಚಿರತೆ ಸೆರೆ ಕಾರ್ಯಾಚರಣೆಗೆ ಮುಂದಾಗಿರುವ ಘಟನೆ ಬುಧವಾರ ನಡೆದಿದೆ.

ಮಾಲಾಡಿಯ ತೋಟವೊಂದರಲ್ಲಿ ಈ ಚಿರತೆಗಳು ಕಂಡುಬಂದಿದೆ ಎನ್ನಲಾಗಿದೆ. ಜನವಸತಿ ಪ್ರದೇಶ, ಅಂಗನವಾಡಿ ಹಾಗೂ ಶಾಲೆಗೆ ಈ ಸ್ಥಳ ಸನಿಹವಿದೆ. ಕಳೆದ ಮೂರು ತಿಂಗಳ ಹಿಂದೆ ಈ ಭಾಗದಲ್ಲಿ ಚಿರತೆ ಸಂಚಾರದ ಬಗ್ಗೆ ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ವಾರಗಳ ಕಾಲ ಬೋನ್ ಇಟ್ಟಿದ್ದು ಮೇಕೆ, ನಾಯಿ ಮರಿ ಇಟ್ಟು ಚಿರತೆ ಸೆರೆಗೆ ಮುಂದಾಗಿತ್ತು. ಬೋನು ಇಟ್ಟ ವಾರಗಳ ಬಳಿಕ (ಆ.3 ರಾತ್ರಿ) ಹೆಣ್ಣು ಚಿರತೆ ಬೋನಿನಲ್ಲಿ ಸೆರೆಯಾಗಿದ್ದು ಸುರಕ್ಷಿತವಾಗಿ ರಕ್ಷಿತಾರಣ್ಯಕ್ಕೆ ಬಿಡಲಾಗಿತ್ತು. ಇದಾದ ಬಳಿಕವೂ ಒಂದೆರಡು ಬಾರಿ ಚಿರತೆ ಓಡಾಟದ ಬಗ್ಗೆ ಸ್ಥಳೀಯರಿಂದ ದೂರು ಕೇಳಿಬಂದಿದ್ದು ಮಂಗಳವಾರ ಸಂಜೆ ಆ ಮಾರ್ಗದಲ್ಲಿ ಸಾಗುವ ಬೈಕ್ ಸವಾರರೋರ್ವರು ಚಿರತೆಗಳೆರಡನ್ನು ನೋಡಿ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: 

ತೆಕ್ಕಟ್ಟೆ ಮಾಲಾಡಿಯಲ್ಲಿ ‘ಆಪರೇಶನ್ ಚೀತಾ’ ಸಕ್ಸಸ್; ಬೋನಿಗೆ ಬಿದ್ದ ಹೆಣ್ಣು ಚಿರತೆ!

ತೆಕ್ಕಟ್ಟೆ ಮಾಲಾಡಿಯಲ್ಲಿ ಚಿರತೆ ಪ್ರತ್ಯಕ್ಷ: ಸೆರೆಗಾಗಿ ಬೋನಿಟ್ಟು ಮೇಕೆ ಕಟ್ಟಿದ ಇಲಾಖೆ!

Comments are closed.