ಉಡುಪಿ: ಧರ್ಮಾಂಧನ ಜಯಂತಿ ಮಾಡಿದರೆ ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುತ್ತೆ ಎಂದು ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸರಕಾರ ಟಿಪ್ಪು ಜಯಂತಿ ಕೈ ಬಿಡಬೇಕು. ಸಿದ್ದರಾಮಯ್ಯ ಸವಾಲು ಹಾಕಿ ಟಿಪ್ಪು ಜಯಂತಿ ಆಚರಿಸಿದ್ರು.ಜನರು ಚುನಾವಣೆಯಲ್ಲಿ ಅವರನ್ನು ತಿರಸ್ಕರಿಸಿದರು ಎಂದರು.

ಟಿಪ್ಪು ಜಯಂತಿ ಆಚರಿಸಿದ್ರೆ ರಾಜ್ಯಾದ್ಯಂತ ವಿರೋಧ ಎದುರಿಸಬೇಕಾಗುತ್ತೆ ಅಂತ ರಾಜ್ಯ ಮುಖ್ಯ ಕಾರ್ಯದರ್ಶಿ ಗೆ ಪತ್ರ ಬರೆದಿದ್ದೇನೆ. ಟಿಪ್ಪು ಜಯಂತಿ ಆಮಂತ್ರಣದಲ್ಲಿ ನನ್ನ ಹೆಸರು ಪ್ರಕಟಿಸಬೇಡಿ. ಆಮಂತ್ರಣ ಪತ್ರಿಕೆಯಲ್ಲಿ ಬಿಜೆಪಿ ನಾಯಕರ್ಯಾರ ಹೆಸರು ಬೇಡ ಅಂತ ಉಡುಪಿ ಜಿಲ್ಲಾಡಳಿತಕ್ಕೂ ಸೂಚನೆ ನೀಡಿದ್ದೇನೆ ಎಂದರು. ರಾಜ್ಯ ಸರ್ಕಾರದ ಮಾನಸಿಕತೆ ವಿಚಿತ್ರವಾಗಿದೆ. ಟಿಆರ್ ಶಾಮಣ್ಣ ರಸ್ತೆಯನ್ನ ಗಫೂರ್ ರಸ್ತೆ ಅಂತ ಬಿಬಿಎಂಪಿ ಬದಲಾಯಿಸುತ್ತದೆ. ಅಲ್ಪಸಂಖ್ಯಾತರ ಮತ ಪಡೆಯಲು ಟಿಪ್ಪು ಜಯಂತಿಯ ನಾಟಕವಾಡ್ತಿದೆ. ಅಲ್ಪಸಂಖ್ಯಾತ ರ ಬಗ್ಗೆ ಒಳ್ಳೇ ಅಭಿಪ್ರಾಯ ಇದ್ರೆ ಸಾಚಾರ್ ವರದಿಗೆ ಗಮನ ಕೊಡಿ ಎಂದು ಸಲಹೆ ನೀಡಿದರು. ಟಿಪ್ಪು ಜಯಂತಿ ಮಾಡ್ದೆ ಇದ್ರೆ ಸಿದ್ದರಾಮಯ್ಯ ಬೆಂಬಲ ಹಿಂದೆ ಪಡಿತಾರೆ ಅಂತ ಕುಮಾರಸ್ವಾಮಿಗೆ ಹೆದರಿಕೆ ಎಂದು ಟಾಂಗ್ ಕೊಟ್ಟರು.
ಪ್ರಕಾಶ್ ರೈ ವಿರುದ್ದ ಪೂಜಾರಿ ಗುಡುಗು!
ಅಯ್ಯಪ್ಪ ದೇವರೇ ಅಲ್ಲ- ನಟ ಪ್ರಕಾಶ್ ರೈ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ರಕಾಶ್ ರೈ ಗೌರಿಯ ಮಾನಸಿಕತೆಯಿಂದ ಇನ್ನೂ ಹೊರಬಂದಿಲ್ಲ. ಗೌರಿಯ ಹತ್ಯೆ ಬಗ್ಗೆ ನಮಗೆಲ್ಲಾ ನೋವಿದೆ. ಯಾವ ಹಿಂಸೆಯನ್ನೂ ಸಹಿಸಲು ನಮಗೆ ಸಾಧ್ಯವಿಲ್ಲ. ಗೌರಿ ಹಿಂದೂ ಧರ್ಮ ಧರ್ಮವೇ ಅಲ್ಲ ಅಂದಿದ್ದರು.,ಹಿಂದೂ ದೇವರು ದೇವರೇ ಅಲ್ಲ ಅಂದಿದ್ದಳು. ಆ ಮಾನಸಿಕತೆಯಿಂದ ಪ್ರಕಾಶ್ ರೈ ಹೊರ ಬಂದಿಲ್ಲ ಅನ್ನೋದೇ ದುಃಖ. ಬುದ್ದಿಜೀವಿಗಳು, ನಗರ ನಕ್ಸಲರ ಮಾತಿಗೆ ಅವರೇ ಸ್ಪಷ್ಟನೆ ಕೊಡಬೇಕು.ಇತರ ಧರ್ಮಗಳ ವಿಚಾರವನ್ನು ಆಯಾ ಧರ್ಮಗಳು ನಿರ್ಧರಿಸುತ್ತೆ. ಹಿಂದೂ ಧರ್ಮದ ವಿಚಾರದಲ್ಲಿ ನ್ಯಾಯಾಲಯ, ಸರ್ಕಾರ ಹಸ್ತಕ್ಷೇಪ ಮಾಡುತ್ತೆ. ಶಬರಿಮಲೆ ವಿಚಾರದಲ್ಲಿ ಧಾರ್ಮಿಕ ನಂಬಿಕೆಗೆ ಬೆಲೆ ಕೊಡಬೇಕು. ನ್ಯಾಯಾಲಯಕ್ಕೆ ಮೇಲ್ಮನವಿ ಮಾಡಿದ ನಂತರವೂ ಪಿಣರಾಯಿ ವಿಜಯನ್ ವರ್ತನೆ ಸರಿಯಾಗಿಲ್ಲ. ನಂಬಿಕೆಯ ಮೇಲಿನ ಬಲಾತ್ಕಾರ, ದಬ್ಬಾಳಿಕೆ ಸಹಿಸಲು ಸಾಧ್ಯವಿಲ್ಲ ಎಂದರು.
Comments are closed.