ಕರಾವಳಿ

ಶಾಸಕರಿಂದ ಉಚಿತ ಆರೋಗ್ಯ ಸುರಕ್ಷಾ ಯೋಜನೆಯ ನೊಂದಾವಣೆ ಅಭಿಯಾನಕ್ಕೆ ಚಾಲನೆ

Pinterest LinkedIn Tumblr

ಮಂಗಳೂರು : ವಿಶ್ವ ಹಿಂದೂ ಪರಿಷತ್, ಬಜರಂಗದಳ, ದುರ್ಗಾವಾಹಿನಿ ಛತ್ರಪತಿ ಶಾಖೆ ಮರೋಳಿ ಮತ್ತು ಕೆಎಂಸಿ ಆಸ್ಪತ್ರೆ ಅತ್ತಾವರ ಇದರ ಸಹಯೋಗದಲ್ಲಿ ಬಿಪಿಎಲ್ ಕುಟುಂಬಗಳಿಗೆ 25 ಸಾವಿರ ರೂಪಾಯಿಗಳ ಉಚಿತ ಮಣಿಪಾಲ ಆರೋಗ್ಯ ಸುರಕ್ಷಾ ಯೋಜನೆಯ ನೊಂದಾವಣೆ ಅಭಿಯಾನವನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಮುಖಂಡರಾದ ವಸಂತ ಜೆ ಪೂಜಾರಿ, ಬಜರಂಗದಳ ವಿಭಾಗ ಸಂಚಾಲಕ ಭುಜಂಗ ಕುಲಾಲ್, ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಕಾರ್ಯದರ್ಶಿ ಉಮೇಶ್ ಜಪ್ಪಿನಮೊಗರು, ವಿಶ್ವ ಹಿಂದೂ ಪರಿಷತ್ ನಾಗುರಿ ಪ್ರಖಂಡ ಸಾಪ್ತಾಹಿಕ್ ಪ್ರಮುಖ್ ದೀಪಕ್ ಮರೋಳಿ, ಹಿಂದೂ ಜಾಗರಣಾ ವೇದಿಕೆಯ ಪ್ರಮುಖರಾದ ನರಸಿಂಹ ಮರೋಳಿ, ದುರ್ಗಾ ವಾಹಿನಿ ಪ್ರಖಂಡ ಸಂಚಾಲಕಿ ಪ್ರಿಯಾ, ವಿಹಿಂಪ ಅಧ್ಯಕ್ಷ ವಿಠಲ ಶೆಣೈ, ಬಜರಂದಳದ ಛತ್ರಪತಿ ಶಾಖೆಯ ಸಂಚಾಲಕ ಸಂಜೀವ ಮರೋಳಿ, ದುರ್ಗಾ ವಾಹಿನಿ ಸಂಚಾಲಕಿ ಲತಾ ಮರೋಳಿ, ಬಿಜೆಪಿ ವಾರ್ಡ್ ಅಧ್ಯಕ್ಷ ಜಗನ್ನಾತ ಆಡು ಮರೋಳಿ ಮಂತಾದವರು ಉಪಸ್ಥಿತರಿದ್ದರು.

Comments are closed.