ಮಂಗಳೂರು, ನವೆಂಬರ್.02 : ಭಾರತದ ಅಗ್ರಮಾನ್ಯ ಎಕ್ಸ್‌ಪ್ರೆಸ್ ಪಾರ್ಸೆಲ್ ಸೇವೆ ನೀಡುವ ಸಂಸ್ಥೆ “ಡಿಟಿಡಿಸಿ ಎಕ್ಸ್‌ಪ್ರೆಸ್ ಲಿಮಿಟೆಡ್ ಕಂಪನಿ”ಯ ವಿಶಾಲವಾದ ನೂತನ ಕಚೇರಿಯು ಮಂಗಳೂರಿನ ಉರ್ವಾ ಮಾರ್ಕೆಟ್ ಸಮೀಪದ ಅಕ್ಷಯ ಪಾತ್ರೆ ಮತ್ತು ಕೊರಗಜ್ಜ ಗುಡಿಯ ಹತ್ತಿರವಿರುವ ಪೈ ಕಂಪೌಂಡ್‌ನಲ್ಲಿ ಶುಕ್ರವಾರ ಶುಭಾರಂಭಗೊಂಡಿತ್ತು. “ಡಿಟಿಡಿಸಿ ಎಕ್ಸ್‌ಪ್ರೆಸ್ ಲಿಮಿಟೆಡ್ ಕಂಪನಿ”ಯ CMD ಸುಭಾಶಿಶ್ ಚಕ್ರವರ್ತಿ ಹಾಗೂ ನಿರ್ವಾಹಕ ನಿರ್ದೇಶಕ ಅಭಿಷೇಕ್ ಚಕ್ರವರ್ತಿ ಅವರು ನೂತನ ಕಚೇರಿಯನ್ನು ಉದ್ಘಾಟಿಸಿದರು.
ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ CMD ಸುಭಾಶಿಶ್ ಚಕ್ರವರ್ತಿ ಅವರು, ಡಿಟಿಡಿಸಿ ಇಂಡಿಯಾವು ಎಕ್ಸ್‌ಪ್ರೆಸ್ ಪಾರ್ಸೆಲ್ ಸೇವೆಯನ್ನು ಒದಗಿಸುತ್ತಿದೆ. ಮಂಗಳೂರಿನ ವಲಯದಲ್ಲಿ ತಮ್ಮ ಸೇವೆಯನ್ನು ವಿಸ್ತರಿಸುವ ಸಲುವಾಗಿ ತನ್ನ ವಿಸ್ತಾರವಾದ ಕಚೇರಿಯನ್ನು ಇಲ್ಲಿಗೆ ಸ್ಥಳಕ್ಕೆ ಸ್ಥಳಾಂತಿಸುತ್ತಿದೆ.. ಈ ಹೊಸ ಕಚೇರಿಯು 4000 ಚ.ಅ ಆಳತೆಯನ್ನು ಹೊಂದಿರುತ್ತದೆ. ಇಲ್ಲಿ ಎಸ್.ಸಿ.ಎಸ್ ಮತ್ತು ಡೊಟ್ ಝೊಟ್ ಎಕ್ಶ್‌ಪ್ರೆಸ್ ಸೇವೆಯನ್ನು ನೀಡುತ್ತದೆ ಎಂದು ತಿಳಿಸಿದರು.
ಡಿಟಿಡಿಸಿ ಎಕ್ಸ್‌ಪ್ರೆಸ್ ಲಿಮಿಟೆಡ್ ಕಂಪನಿಯು ಮಂಗಳೂರು ಮತ್ತು ಉಡುಪಿಯಲ್ಲಿ ಇ-ಕೋಮರ್ಸ್ ವ್ಯವಹಾರದಲ್ಲಿ ಈಗಾಗಲೇ ಹೆಜ್ಜೆ ಗುರುತನ್ನು ಇಟ್ಟಿರುತ್ತದೆ. ಮುಂದೆ ಶಿರಸಿ, ಸುಳ್ಯ, ದಾವಣಗೆರೆ ಇತ್ಯಾದಿ ಕಡೆಗಳಲ್ಲೂ ಸಹ ತನ್ನದೇ ಆದ ನೇರ ಸಂಪರ್ಕ ಸ್ಥಾಪಿಸಲಿದೆ. ಹೊಸ ಕಚೇರಿ ಹ್ಯಾಂಡ್ ಹೆಲ್ಡ್ ಸ್ಕ್ಯಾನರ್ ನಂತಹ ಕಲಾತ್ಮಕ ಉಪಕರಣಗಳಿಂದ ಸುಸಜ್ಜಿತವಾಗಿದೆ. ಅಲ್ಲದೇ ಮಂಗಳೂರನ್ನು ಸಂಪೂರ್ಣವಾಗಿ ಸಂಪರ್ಕಿಸುವ ಉದ್ದೇಶಕ್ಕಾಗಿ ವಾಹನ ಆಧಾರಿತ ಜಾಲವನ್ನು ಹೊಂದಿದ್ದು , ಶಿರಸಿ, ಸುಳ್ಯ ಹಾಗೂ ದಾವಣಗೆರೆಯನ್ನು ಸಹ ಸಂಪರ್ಕಿಸಲಿದೆ ಎಂದು ಹೇಳಿದರು.
ಭಾರತದ ಅತೀ ದೊಡ್ಡ ಪಾರ್ಸೆಲ್ ಡೆಲಿವರಿ ಜಾಲ :
ಸಂಸ್ಥೆಯ ಕಾರ್ಯಕಾರಿ ನಿರ್ದೇಶಕರಾದ ಅಭಿಷೇಕ್ ಚಕ್ರವರ್ತಿ ಅವರು ಮಾತನಾಡಿ, ಕಳೆದ ಎರಡು ವರ್ಷಗಳಲ್ಲಿ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇ-ಕಾಮರ್ಸ್ ಸೇವೆಗೆ ಬೇಡಿಕೆ ಇರುವುದರಿಂದಾಗಿ ರಾಜ್ಯದಲ್ಲಿ ಹೊಸ ಕಚೇರಿಯ ಅಗತ್ಯವಿತ್ತು. ಮಂಗಳೂರು ಒಂದು ಸೂಕ್ತವಾದ ಪ್ರದೇಶವಾಗಿದ್ದು. ಇದು ಹೆಚ್ಚಿನ ಸ್ಥಳಗಳಿಗೆ ಹತ್ತಿರ ಸಂಪರ್ಕ ಕೊಂಡಿಯಾಗಿರುತ್ತದೆ. ಇದರಿಂದಾಗಿ ಪ್ರದೇಶದ ಎಲ್ಲಾ ಪಿನ್‌ಕೋಡ್ ಗಳಿಗೆ ಡಿಟಿಡಿಸಿಯು ರಾಜ್ಯದಾದ್ಯಂತ ಕೊನೆ ಮೈಲಿನವರೆಗೂ ಸೇವೆಯನ್ನು ನೀಡಲು ಬದ್ಧವಾಗಿರುತ್ತದೆ. ದೃಢವಾದ ಲಾಜಿಸ್ಟಿಕ್ ಜಾಲ ಸ್ಥಾಪಿಸಿ ದೇಶದಲ್ಲಿ ಉತ್ತಮ ಸೇವೆಯನ್ನು ನೀಡಲಿದೆ ಎಂದರು.
ಸಂಸ್ಥೆಯು 1990ರಲ್ಲಿ ಸ್ಥಾಪಿಸಲ್ಪಟ್ಟಿದ್ದು, ಇದರ ಮುಖ್ಯ ಕಚೇರಿಯು ಬೆಂಗಳೂರಿನಲ್ಲಿರುತ್ತದೆ. ಭಾರತದ ಅತೀ ದೊಡ್ಡ ಪಾರ್ಸೆಲ್ ಡೆಲಿವರಿ ಜಾಲವಾಗಿರುವ ಡಿಟಿಡಿಸಿಯು ಕೈಗಾರಿಕೆಗಳಲ್ಲಿ ಪ್ರಾಂಚೈಸಿಂಗ್ ಕಾನ್ಸೆಪ್ಟನ್ನು ಹೊಂದಿದೆ. ಇದು ಯುರೋಪಿನ ಡಿ.ಪಿ.ಡಿ ಯೊಂದಿಗೆ ಪಾಲುದಾರಿಕೆ ಹೊಂದಿದೆ. ಇದರ ವಿಸ್ಕ್ರತ ಜಾಲವು ಯು.ಎ.ಇ, ಯು.ಕೆ, ಕೆನಡಾ,ಯು.ಎಸ್.ಎ, ಆಸ್ಟ್ರೇಲಿಯಾ, ಚೈನಾ, ಸಿಂಗಾಪುರ ಹಾಗೂ ಎಷ್ಯಾದ ಹೆಚ್ಚಿನ ದೇಶಗಳಿಗೆ ಸಂಪರ್ಕವನ್ನು ಹೊಂದಿದೆ.
ಡಿಟಿಡಿಸಿಯ ಸೇವೆಗಾಗಿ ಸುಮಾರು 35,000 ಜನರನ್ನು ನೇಮಿಸಿದ್ದು, 7 ಝೋನಲ್ ಕಛೇರಿ, 20 ರಿಜನಲ್ ಕಚೇರಿಗಳು ಮತ್ತು 522 ಉಪಕಚೇರಿಗಳು ಭಾರತಾದ್ಯಂತ ತಮ್ಮ ಕೆಲಸವನ್ನು ನಿರ್ವಹಿಸುತ್ತದೆ. ಡಿಟಿಡಿಸಿ ಎಕ್ಸ್‌ಪ್ರೆಸ್ ಸಂಸ್ಥೆಯು ಸುಮಾರು 500 ಜಿಲ್ಲೆಗಳಲ್ಲಿ ಇದರ ಜಾಲವನ್ನು ಹರಡಿರುವುದು, ಅಲ್ಲದೇ 10.700ಕ್ಕಿಂತಲೂ ಹೆಚ್ಚು ಪ್ರಾಂಚೈಸಿಗಳನ್ನು ಹೊಂದಿದೆ ಎಂದು ಅಭಿಷೇಕ್ ಚಕ್ರವರ್ತಿ ಅವರು ವಿವರಿಸಿದರು.
ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್ ( Mob: 9035089084)
Comments are closed.