ಕರಾವಳಿ

ವೈಯಕ್ತಿಕ ವಿಚಾರ ಕೆದಕುವ ಕೀಳು ರಾಜಕಾರಣ ನಾವು ಮಾಡಲ್ಲ: ಭೋಜೇಗೌಡ

Pinterest LinkedIn Tumblr

ಕುಂದಾಪುರ: ಬಂಗಾರಪ್ಪನವರು ನಿಧನರಾಗಿದ್ದ ವೇಳೆಯಲ್ಲಿ ಅವರು ನಮ್ಮ ಪಕ್ಷದ ಸದಸ್ಯರಾಗಿದ್ದರು. ಬಂಗಾರಪ್ಪನವರ ಕೆಲಸ ಕಾರ್ಯಗಳ ಬಗ್ಗೆ ಕುಮಾರಸ್ವಾಮಿಯವರು ಹೇಳುವುದರಲ್ಲಿ ತಪ್ಪೇನಿದೆ. ಬಂಗಾರಪ್ಪನವರ ಮಗನಾಗಿ ಕುಮಾರಬಂಗಾರಪ್ಪ ಏನು ಮಾಡಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಭೋಜೇಗೌಡ ಕಿಡಿಕಾರಿದರು.

ಯಾರು ತೊಂದರೆಗೊಳಗಾಗಿದ್ದಾರೆ ಅವರೇ ಬಂದು ಹೇಳಿಕೆ ನೀಡುತ್ತಾರೆ. ಬೇರೆಯವರ ಉಸಾಬಾರಿ ಇವರಿಗ್ಯಾಕೆ. ಮೀಟೂ ಹೇಳಿಕೆ ಓರ್ವ ಮಾಜಿ ಮುಖ್ಯಮಂತ್ರಿಯ ಮಗನಿಗೆ ಶೋಭೆ ತರಲ್ಲ ಎಂದರು.

ಕುಮಾರಸ್ವಾಮಿಯವರ ವೈಯಕ್ತಿಕ ವಿಚಾರಗಳನ್ನು ಚರ್ಚೆಗೆಳೆದರೆ ನಾವೂ ನಿಮ್ಮ ಮತ್ತು ನಿಮ್ಮ ಮುಖಂಡರ ವೈಯಕ್ತಿಕ ವಿಚಾರಗಳನ್ನು ಕೆದುಕಬೇಕಾಗುತ್ತೆ. ಅಂತಹ ಕೀಳು ಮಟ್ಟದ ರಾಜಕಾರಣ ನಾವು ಮಾಡೋದಿಲ್ಲ. ಕೀಳು ಮಟ್ಟದ ರಾಜಕಾರಣ ಮಾಡುವವರಿಗೆ ಮುಂದಿನ ದಿನಗಳಲ್ಲಿ ರಾಜ್ಯದ ಜನ ಉತ್ತರ ನೀಡಲಿದ್ದಾರೆ ಎಂದು ಪರಿಷತ್ ಸದಸ್ಯ ಭೋಜೇಗೌಡ ಕುಮಾರಬಂಗಾರಪ್ಪನವರ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದರು.

Comments are closed.