ಕರಾವಳಿ

ಮಂಗಳೂರಿನಲ್ಲಿ ವೆಲ್ತ್‌ಹಬ್ ಉದ್ಘಾಟನೆ : ಎಸ್‌ಬಿ‌ಐನಿಂದ ವೆಲ್ತ್ ಬ್ಯುಸಿನೆಸ್ ಸೇವೆಗೆ ಚಾಲನೆ

Pinterest LinkedIn Tumblr

ಮಂಗಳೂರು: ದೇಶದ ಅತಿದೊಡ್ಡ ಬ್ಯಾಂಕ್ ಆದ ಭಾರತೀಯ ಸ್ಟೇಟ್ ಬ್ಯಾಂಕ್ ನಗರದಲ್ಲಿ ವೆಲ್ತ್‌ಹಬ್ ಉದ್ಘಾಟಿಸುವ ಮೂಲಕ ತನ್ನ ವೆಲ್ತ್ ಬ್ಯುಸಿನೆಸ್ ಸೇವೆಗೆ ಮಂಗಳೂರಿನಲ್ಲಿ ಚಾಲನೆ ನೀಡಿದೆ. ಬ್ಯಾಂಕಿನ ಅಧ್ಯಕ್ಷ ರಜನೀಶ್ ಕುಮಾರ್ ಅವರು, ಎಸ್‌ಬಿ‌ಐ ಲಾಲ್‌ಬಾಗ್ ಶಾಖೆಯಲ್ಲಿ ನೂತನ ಸೇವೆಗೆ ಚಾಲನೆ ನೀಡಿದ್ದಾರೆ.

ಬಳಿಕ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ರಜನೀಶ್ ಕುಮಾರ್ ಅವರು, ವೆಲ್ತ್‌ಹಬ್ ಆರಂಭದ ಮೂಲಕ ಸಮಗ್ರ ವೆಲ್ತ್ ಬ್ಯುಸಿನೆಸ್ ಸೇವೆಯನ್ನು ತನ್ನ ಗ್ರಾಹಕರಿಗಾಗಿ ಆರಂಭಿಸಿರುವ ಮೊಟ್ಟಮೊದಲ ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಎಸ್‌ಬಿ‌ಐ ಪಾತ್ರವಾಗಿದೆ.. ಬ್ಯಾಂಕ್ ಇದೀಗ ತನ್ನ ವೆಲ್ತ್ ಬ್ಯುಸಿನೆಸ್ ಸೇವೆಯನ್ನು ಎಸ್‌ಬಿ‌ಐ ವೆಲ್ತ್ ಎಂದು ಮರುನಾಮಕರಣ ಮಾಡಿದೆ. ಇದು ಅತ್ಯುತ್ಕೃಷ್ಟ ದರ್ಜೆಯ ವೈಯಕ್ತಿಕ ಬ್ಯಾಂಕಿಂಗ್ ಮತ್ತು ಹೂಡಿಕೆ ಸೇವೆಗಳನ್ನು ಇದಕ್ಕಾಗಿಯೇ ಇರುವ ವಿಶೇಷ ಸಂಬಂಧ ವ್ಯವಸ್ಥಾಪಕರ (ರಿಲೇಶನ್‌ಶಿಪ್ ಮ್ಯಾನೇಜರ್) ಮೂಲಕ ಎಚ್‌ಎನ್‌ಐ ಗ್ರಾಹಕರಿಗೆ ಒದಗಿಸಲಿದೆ ಎಂದು ಹೇಳಿದರು.

ಎಸ್‌ಬಿ‌ಐ ವೆಲ್ತ್ 20 ಪ್ರಮುಖ ಕೇಂದ್ರಗಳನ್ನು ಹೊಂದಿದ್ದು, ಇದು ದೇಶದ ಒಟ್ಟು 90 ವೆಲ್ತ್ ಹಬ್‌ಗಳ ಜತೆ ಸಂಪರ್ಕ ಹೊಂದಿರುತ್ತದೆ. 2020ರ ಒಳಗಾಗಿ ದೇಶಾದ್ಯಂತ ಇಂಥ 50 ಎಸ್‌ಬಿ‌ಐ ವೆಲ್ತ್ ಸೆಂಟರ್‌ಗಳನ್ನು ಆರಂಭಿಸುವ ಮೂಲಕ ವೆಲ್ತ್ ಬ್ಯುಸಿನೆಸ್‌ನಲ್ಲಿ ತನ್ನ ಹೆಜ್ಜೆಗುರುತನ್ನು ವಿಸ್ತರಿಸಲು ನಿರ್ಧರಿಸಿದೆ. ಎಸ್‌ಬಿ‌ಐ ಇದೀಗ 35000 ಗ್ರಾಹಕರಿಗೆ ಈ ಸೇವೆ ಒದಗಿಸುತ್ತಿದ್ದು, ಮುಂದಿನ ಎರಡು ವರ್ಷಗಳಲ್ಲಿ ಈ ಗ್ರಾಹಕ ನೆಲೆಯನ್ನು ಮೂರು ಪಟ್ಟು ಹೆಚ್ಚಿಸಿ 1.25 ಲಕ್ಷಕ್ಕೆ ವಿಸ್ತರಿಸಲು ನಿರ್ಧರಿಸಲಾಗಿದೆ. ಒಟ್ಟು 1 ಲಕ್ಷ ಕೋಟಿ ರೂಪಾಯಿ ಸಂಪತ್ತು ನಿರ್ವಹಿಸುವ ಗುರಿ ಹೊಂದಿದೆ.

ಮಂಗಳೂರಿನಲ್ಲಿ ಎಸ್‌ಬಿ‌ಐ ವೆಲ್ತ್‌ಗೆ ಚಾಲನೆ ನೀಡಲು ಅತೀವ ಸಂತಸ ಎನಿಸುತ್ತಿದೆ. ನಮ್ಮ ಬ್ಯಾಂಕ್ ಒದಗಿಸುವೀ ವಿನೂತನ ಸೇವೆಯು ನಮ್ಮ ಮೇಲ್ವರ್ಗದ ಗ್ರಾಹಕರಿಗೆ, ಬ್ಯಾಂಕ್ ಜತೆ ಸಂವಾದ ನಡೆಸಲು ಸಂಪೂರ್ಣ ಹೊಸ ದೃಷ್ಟಿಕೋನವನ್ನು ಒದಗಿಸಲಿದೆ. ವಿಶೇಷ ಅಗತ್ಯದ ಸೇವೆಗಳನ್ನು ಬಯಸುವ ಅಸಂಖ್ಯಾತ ಎಚ್‌ಎನ್‌ಐ ಗ್ರಾಹಕರನ್ನು ಹೊಂದಿರುವುದರಿಂದವೆಲ್ತ್ ಬ್ಯುಸಿನೆಸ್ ಆರಂಭಿಸುವುದು ಬ್ಯಾಂಕಿನ ಪ್ರಮುಖ ವ್ಯವಹಾರ ಆದ್ಯತೆಗಳಲ್ಲಿ ಒಂದಾಗಿದೆ” ಎಂದು ಅಧ್ಯಕ್ಷರು ಹೇಳಿದರು.

Comments are closed.