ರಾಷ್ಟ್ರೀಯ

ಅಮೃತಸರ ದುರಂತದಲ್ಲಿ ಬಲಿಯಾದವರಿಗೆ ಯಾವುದೇ ಪರಿಹಾರ ಇಲ್ಲ: ರೈಲ್ವೆ ಇಲಾಖೆ

Pinterest LinkedIn Tumblr


ನವದೆಹಲಿ: ಅಮೃತಸರ ದುರಂತದಲ್ಲಿ ಬಲಿಯಾದವರಿಗೆ ಯಾವುದೇ ಪರಿಹಾರ ಇಲ್ಲ ಏಕೆಂದರೆ ಅವರು ರೈಲು ಅಪಘಾತಗಳ ಪಟ್ಟಿಯಲ್ಲಿ ಸೇರಿಲ್ಲ ಎಂದು ಭಾರತೀಯ ರೇಲ್ವೆ ತಿಳಿಸಿದೆ.

ಈ ಕುರಿತಾಗಿ ಪ್ರತಿಕ್ರಿಯಿಸಿದ ರೈಲ್ವೆ ರಾಜ್ಯ ಸಚಿವ ಮನೋಜ್ ಸಿನ್ಹಾ” ದುರಂತದ ಕುರಿತಾಗಿ ರೈಲ್ವೆ ತನಿಖೆ ನಡೆಸುವ ಯಾವುದೇ ಅಗತ್ಯವಿಲ್ಲ ಎಂದು ಹೇಳಿದ್ದಾರೆ. “ಚಾಲಕನಿಗೆ ಎಲ್ಲಿ ರೈಲ್ವೆಯನ್ನು ನಿಧಾನಗೊಳಿಸಬೇಕೆಂದು ನಿರ್ದಿಷ್ಟ ಸೂಚನೆಗಳನ್ನು ನೀಡಲಾಗಿದೆ. ಮಾರ್ಗದಲ್ಲಿ ಒಂದು ಕರ್ವ್ ಇದೆ, ಇದನ್ನು ಚಾಲಕನು ನೋಡಿಲ್ಲ. ಇದಕ್ಕೇಕೆ ನಾವು ತನಿಖೆಗೆಗೆ ಆದೇಶಿಸಬೇಕು? ರೈಲುಗಳು ವೇಗದಲ್ಲಿಯೇ ಸಂಚರಿಸುತ್ತವೆ ” ಎಂದು ಸಿನ್ಹಾ ಹೇಳಿದರು. ಅಲ್ಲದೆ ರೈಲ್ವೆ ಟ್ರಾಕ್ ಬಳಿ ಅಂತಹ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ತಡೆಹಿಡಿಯಬೇಕೆಂದು ಎಂದು ಸಚಿವರು ತಿಳಿಸಿದರು.

ಇದೆ ವೇಳೆ ದುರಂತದಲ್ಲಿ ಬಲಿಯಾದ 13 ವರ್ಷದ ಮಗುವಿನ ಕುಟುಂಬವು ಅಮೃತಸರ್ ಮತ್ತು ಜಲಂದರ ಹೆದ್ದಾರಿಯಲ್ಲಿ ಮಗುವಿನ ಮೃತದೇಹವಿಟ್ಟು ಸಂಭಂದಪಟ್ಟ ರೈಲ್ವೆಯ ಅಧಿಕಾರಿಗಳು ಪರಿಹಾರಧನ ನೀಡಬೇಕೆಂದು ಈಗ ಪ್ರತಿಭಟನೆ ನಡೆಸುತ್ತಿದ್ದಾರೆ.

ಇನ್ನೊಂದೆಡೆ ರೈಲ್ವೆ ಬೋರ್ಡ್ ಚೇರ್ಮನ್ ಅಶ್ವನಿ ಲೋಹಾನಿ ಅವರು ಪ್ರತಿಕ್ರಿಯಿಸಿ “ರೈಲ್ವೆ ಇಲಾಖೆಗೆ ಟ್ರಾಕ್ ಬಳಿ ದಸರಾ ಕಾರ್ಯಕ್ರಮ ಆಯೋಜಿಸಿದ್ದ ಕುರಿತು ಯಾವುದೇ ಪೂರ್ವ ಮಾಹಿತಿ ನೀಡಿರಲಿಲ್ಲ” ಎಂದು ತಿಳಿಸಿದ್ದಾರೆ.

Comments are closed.