ಕರಾವಳಿ

ನೀವು ಅತಿಯಾಗಿ ಬೇವರುತ್ತಿದ್ದಿರಾ ?ಹಾಗದರೆ.. ಯಾವ ಅನಾರೊಗ್ಯ ಸಮಸ್ಯೆ ನಿಮ್ಮಲಿದೆ ತಿಳಿಯಿರಿ

Pinterest LinkedIn Tumblr

ಸಾಮಾನ್ಯವಾಗಿ ನಮ್ಮಲ್ಲಿ ಬಹಳಷ್ಟು ಮಂದಿಗೆ ಕೆಲವು ನಿರ್ದಿಷ್ಟ ಪರಿಸ್ಥಿತಿಗಳಲ್ಲಿ ಬೆವರು ಬರುತ್ತಿರುತ್ತದೆ. ದೈಹಿಕ ಶ್ರಮ, ವ್ಯಾಯಾಮ ಹೆಚ್ಚಾಗಿ ಮಾಡಿದರೂ ಇಲ್ಲದಿದ್ದರೆ ಬಿಸಿಯಾದ ವಾತಾವರಣದಲ್ಲಿದ್ದರೂ, ಗಾಳಿಯಾಡದೆ ಕಡೆ ಹೆಚ್ಚು ಹೊತ್ತು ಇದ್ದರೂ, ಬಿಸಿಲಲ್ಲಿದ್ದರೂ ಬೆವರು ಬರುವುದು ಸರ್ವೇ ಸಾಮಾನ್ಯ. ಆದರೆ ಇದಲ್ಲದೆ ಹಲವು ಅನಾರೋಗ್ಯ ಸಮಸ್ಯೆಗಳು ಇದ್ದರೂ ಬೆವರು ಬರುತ್ತದೆ. ಹಲವು ರೀತಿಯ ಅನಾರೋಗ್ಯ ಸಮಸ್ಯೆಗಳಿಂದ ಅಥವಾ ದೇಹದ ಚಯಾಪಚಯ ಕ್ರಿಯೆಗಳಿಂದ ಸಹ ಬಹಳಷ್ಟು ಮಂದಿಗೆ ಬೆವರು ಬರುತ್ತದೆ. ಆದರೆ ಈ ಬಗ್ಗೆ ಬಹಳಷ್ಟು ಮಂದಿಗೆ ಗೊತ್ತಿಲ್ಲ. ಹಾಗಿದ್ದರೆ ಯಾವ ಯಾವ ಸಂದರ್ಭಗಳಲ್ಲಿ ಈ ರೀತಿ ಬೆವರು ಬರುತ್ತದೆ ಎಂಬುದನ್ನು ಈಗ ತಿಳಿದುಕೊಳ್ಳೋಣ.

ನಮ್ಮ ದೇಹದಲ್ಲಿ ಥೈರಾಯಿಡ್ ಗ್ರಂಥಿ ಜೀವಕ್ರಿಯೆಗಳನ್ನು ನಿಯಂತ್ರಿಸುತ್ತದೆ ಎಂದು ಎಲ್ಲರಿಗೂ ಗೊತ್ತು. ಇದರಿಂದ ದೇಹದ ಉಷ್ಣತೆ ನಿಯಂತ್ರಣದಲ್ಲಿರುತ್ತದೆ. ಆದರೆ ಕೆಲವು ಸಲ ಥೈರಾಯಿಡ್ ಇನ್ನೂ ಚೆನ್ನಾಗಿ ಕೆಲಸ ಮಾಡುತ್ತದೆ. ಅದೇ ರೀತಿ ಥೈರಾಯಿಡ್ ಸಮಸ್ಯೆಗಳಿರುವವರು, ಅದಕ್ಕಾಗಿ ಮೆಡಿಸಿನ್ ಬಳಸುತ್ತಿರುರ್ವವರಲ್ಲಿ ಥೈರಾಯಿಡ್ ಹೆಚ್ಚಾಗಿ ಕೆಲಸ ಮಾಡುತ್ತದೆ. ಇದರಿಂದ ದೇಹದ ಉಷ್ಣತೆ ಹೆಚ್ಚುತ್ತದೆ. ಆ ಉಷ್ಣತೆಯನ್ನು ನಿಯಂತ್ರಿಸಲು ದೇಹವನ್ನು ತಣ್ಣಗೆ ಮಾಡಲು ಬೆವರು ಬರುತ್ತದೆ. ಅದೇ ರೀತಿ ಬೆವರಲು ಇರುವ ಇನ್ನೊಂದು ಕಾರಣ… ನರಗಳ ವ್ಯವಸ್ಥೆಗೆ ಹಾನಿಯಾಗಿರುವುದು. ಇದರಿಂದ ಸಹ ಕೆಲವರಿಗೆ ಬೆವರು ವಿಪರೀತ ಬರುತ್ತದೆ.

ಮಧುಮೇಹ ಸಮಸ್ಯೆ ದೀರ್ಘಕಾಲದಿಂದ ಇದ್ದರೆ ಅಂತಹವರಲ್ಲಿ ಡಯಾಬಿಟೆಕ್ ನ್ಯೂರೋಪತಿ, ಬೆನ್ನುಮೂಳೆಗೆ ಹೊಡೆತ ಬಿದ್ದಿರುವುದು. ನರಗಳ ಮೇಲೆ ಒತ್ತಡ ಉಂಟಾಗುವಂತಹ ಸಮಸ್ಯೆಗಳೂ ಬರುತ್ತವೆ. ಇದರಿಂದಾಗಿ ವಿಪರೀತ ಬೆವರು ಬರುತ್ತದೆ. ಅದೇ ರೀತಿ ದೇಹದಲ್ಲಿ ಸೋಂಕು ಹೆಚ್ಚಾಗಿದ್ದರೂ ಬೆವರು ಬರುತ್ತದೆ. ಜ್ವರ ಸಹ ಇರುತ್ತದೆ. ಇನ್ನು ಕೆಲವರು ಮಹುಮೇಹ ನಿಯಂತ್ರಿಸಿಕೊಳ್ಳಲು ಮೆಡಿಸಿನ್ ಬಳಸುತ್ತಿರುತ್ತಾರೆ. ಅಂತಹವರಲ್ಲಿ ಇನ್ಸುಲಿನ್ ಪ್ರಮಾಣ ಹೆಚ್ಚಾದರೂ ಆಗ ಸಕ್ಕರೆ ಅಂಶ ಕಡಿಮೆಯಾಗಿ ಬೆವರು ಬರುತ್ತದೆ. ಆದರೆ ಇದ್ಯಾವುದೋ ಗೊತ್ತಿಲ್ಲದ ಕೆಲವರು ಮಾತ್ರ ಬೆಸಿಗೆ ಅಲ್ಲವೇ, ಹಾಗಿಗಿಯೇ ಬೆವರು ಬರುತ್ತಿದೆ ಎಂದುಕೊಂಡು ಭ್ರಮಿಸುತ್ತಿರುತ್ತಾರೆ. ಹಾಗಾಗಿ ಯಾರೇ ಆಗಲಿ ವಿಪರೀತ ಬೆವರುತ್ತಿದ್ದರೆ ಅವರು ಮೇಲೆ ತಿಳಿಸಿದ ಸಮಸ್ಯೆಗಳಿವೆಯೇನೋ ಎಂದು ಒಮ್ಮೆ ಪರೀಕ್ಷಿಸಿಕೊಳ್ಳಬೇಕು. ವೈದ್ಯರ ಬಳಿಗೆ ಹೋಗಿ ತೋರಿಸಿಕೊಂಡು ಔಷಧಿ ಬಳಸಬೇಕು. ಅಷ್ಟೇ ಹೊರತು ಅತಿಯಾಗಿ ಬೆವರುತ್ತಿದ್ದರೆ ಹಾಗೆಯೇ ಸುಮ್ಮನಿರಬಾರದು. ಇಲ್ಲದಿದ್ದರೆ ಅನಾರೋಗ್ಯ ಸಮಸ್ಯೆಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ..

Comments are closed.