ಕರಾವಳಿ

ಬಂಟರ ಸಂಘ ವಸಾಯಿ – ದಹಾಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಹಳದಿ ಕುಂಕುಮ, ನವರಾತ್ರಿ

Pinterest LinkedIn Tumblr

ಮುಂಬಯಿ – ಬಂಟರ ಸಂಘದ ವಸಾಯಿ – ದಹಾಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ಹಳದಿ ಕುಂಕುಮ ಹಾಗೂ ನವರಾತ್ರಿ ಆಚರಣೆಯು ನಾಲಾಸೋಪಾರ ಪೂರ್ವ ದ ರೀಜೆನ್ಶಿ ಬ್ಯಾಂಕ್ವೆಟ್ ಹಾಲ್ ನ ಸಭಾಗೃಹದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಗಾಯತ್ರಿ ಪರಿವಾರದವರಿಂದ ದೀಪ ಯಜ್ನ ಬಳಿಕ ಮಹಿಳಾ ಸದಸ್ಯರಿಂದ ಭಜನೆ ನಡೆಯಿತು. ಅಪರಾಹ್ನ ನಡೆದ ಸಭಾ ಕಾರ್ಯಕ್ರಮ ವನ್ನು ಬಂಟರ ಸಂಘದ ಮಹಿಳಾ ವಿಭಾಗದ ನಿಕಟ ಪೂರ್ವ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು.

ಅ ಬಳಿಕ ಮಾತನಾಡುತ್ತಾ ಸ್ತ್ರೀ ಗೆ ವಿಶೇಷವಾದ ಸ್ಥಾನ ಮಾನವಿದೆ. ಆಕೆ ತ್ಯಾಗದ ಸ್ವರೂಪ. ಹಳದಿ ಕುಂಕುಮ ದೇವರಿಗೆ ಎಷ್ಟು ಪ್ರಿಯವೇ ಹೆಣ್ಣು ಮಕ್ಕಳಿಗೂ ಶೋಭಿತ. ಇಂತಹ ಕಾರ್ಯಕ್ರಮದಲ್ಲಿ ಮಕ್ಕಳನ್ನು ಹೆಚ್ಚು ತೊಡಗಿಸಿಕೊಳ್ಳಬೇಕು. ಮಕ್ಕಳು ನಮ್ಮ ಸಂಸ್ಕಾರವನ್ನು, ಸಂಸ್ಕೃತಿಯನ್ನು ಅನುಕರಣೆ ಮಾಡಲು ಸಾಧ್ಯವಾಗುತ್ತದೆ. ಈ ಪ್ರಾದೇಶಿಕ ಸಮಿತಿ ಉತ್ತಮ ಕೆಲಸಗಳನ್ನು ಮಾಡಿ ಮಹಿಳೆಯರನ್ನು ಅಧಿಕ ಸಂಖ್ಯೆಯಲ್ಲಿ ಸೇರಿಸುತ್ತಾರೆ. ನವರಾತ್ರಿ ಮಹಿಳಾ ಶಕ್ತಿ ಯ ಆರಾಧ್ಯ ಪೂಜೆ. ದುರ್ಗಾಂಬೆಯ ಶಕ್ತಿಯನ್ನು ಹೊಂದಿರುವವರು ಸ್ತ್ರೀಯರು ಎಂದರು.

ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಲತಾ ವಿ ಶೆಟ್ಟಿ ಕರ್ನಿರೆ ಮಾತನಾಡುತ್ತಾ ಈ ಪರಿಸರದಲ್ಲೇ ನಾನು ದಾಂಪತ್ಯ ಬದುಕನ್ನು ಪ್ರಾರಂಬಿಸಿಕೊಂಡವಳು. ಒಗ್ಗಟ್ಟಿನಲ್ಲಿ ಮಹಿಳೆಯರು ಇಲ್ಲಿ ಕೆಲಸಮಾಡುತ್ತಿರುವರು. ನಿರಂತರವಾಗಿ ನಾನು ಈ ಸಮಿತಿಯೊಂದಿಗೆ ಸಂಪರ್ಕದಲ್ಲಿರುವೆನು ಎಂದು ನುಡಿದರು.

ಸಂಘದ ಪ್ರಾದೇಶಿಕ ಸಮಿತಿಗಳ ಸಮನ್ವಯಕ ಡಾ. ಬೋಳ ಪ್ರಭಾಕರ ಶೆಟ್ಟಿಯವರು ತನ್ನ ಅಭಿಪ್ರಾಯವನ್ನು ತಿಳಿಸುತ್ತಾ ಮಹಿಳೆಯರಿಗಾಗಿ ಕಾಳ್ಚೆಂಡು ಕ್ರೀಡೆಯನ್ನು ಪ್ರಥಮ ಬಾರಿ ಆಯೋಜಿಸಿಕೊಂಡದ್ದು ಈ ಪರಿಸರದ ಮಹಿಳಾ ವಿಭಾಗ. ಇಲ್ಲಿ ಸಮಿತಿಯ ಕಾರ್ಯಾಧ್ಯಕ್ಷರುಗಳು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷರುಗಳು ಅಧಿಕಾರದಿಂದ ನಿರ್ಗಮಿಸಿದ ಬಳಿಕವೂ ಅವರ ಮಾರ್ಗದರ್ಶನ, ಕೊಡುಗೆ ಅಪಾರವಾಗಿದೆ. ನವರಾತ್ರಿ ಎಲ್ಲರಿಗೂ ಶುಭವಾಗಲಿ ಎಂದರು.

ಪ್ರಾದೇಶಿಕ ಸಮಿತಿಯ ಸಂಚಾಲಕ ಶಶಿಧರ ಕೆ. ಶೆಟ್ಟಿ ಯವರು ಮಾತನಾಡುತ್ತಾ ತಿಂಗಳಿಗೆ ಒಮ್ಮೆ ಯಾದರೂ ಪ್ರಾದೇಶಿಕ ಸಮಿತಿಯ ಕಾರ್ಯಕ್ರಮ ಆಗಬೇಕು ಆ ಮೂಲಕ ಸಮಾಜ ಬಾಂಧವರು ಒಗ್ಗಟ್ಟಾಗಬೇಕು. ನನ್ನ ಸಭಾಗೃಹದಲ್ಲಿ ನಡೆಯುವ ಕಾರ್ಯಕ್ರಮ ಗಳಿಂದಾಗಿ ನನಗೆ ಬಹಳ ಪುಣ್ಣ್ಯ ದೊರಕಿದಂತಾಗುತ್ತದೆ. ದೀಪ ಯಜ್ನ,ಭಜನೆ, ಉತ್ತಮ ರೀತಿಯಲ್ಲಿ ನಡೆದಿದೆ. ನಮ್ಮ ಸಮಿತಿಗೆ ಮಾರ್ಗದರ್ಶಕರಾಗಿದ್ದ ಕರ್ನಿರೆ ಶ್ರೀಧರ ಶೆಟ್ಟಿಯವರ ಮಾರ್ಗದರ್ಶನದಂತೆ ಸಮಿತಿಯು ಬೆಳೆಯುತ್ತಿದೆ ಎಂದರು.

ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಜಯಂತ್ ಆರ್.ಪಕ್ಕಳ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಮಹಿಳೆಯರು ಶಿಸ್ತಿನ ಚೌಕಟ್ಟಿನಲ್ಲಿ ಬೆಳೆದವರು. ಯಾವುದೇ ಜವಾಬ್ಧಾರಿಯನ್ನು ನೀಡಿದರೂ ತಾಳ್ಮೆ ಮತ್ತು ಶಿಸ್ತಿನಿಂದ ಮುನ್ನಡೆಸುತ್ತಾರೆ. ಹಳದಿಕುಂಕುಮ ಮಹಿಳೆಯ ಸುಮಂಗಳತ್ವಕ್ಕೆ ಪೂರಕವಾದಂತೆ ಪುರುಷರ ಆತ್ಮರಕ್ಷಣೆಗೂ ಶಕ್ತಿತುಂಬಿದೆ ಎಂದರು.

ವೇದಿಕೆಯಲ್ಲಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜಯ ಆಶೋಕ್ ಶೆಟ್ಟಿ, ಯ್ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಮಂಜುಳ ಆನಂದ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಪದಾಧಿಕಾರಿಗಳಾದ ಶಶಿಕಲ ಎಸ್. ಶೆಟ್ಟಿ, ಉಮಾ ಎಸ್.ಶೆಟ್ಟಿ, ಸಂಧ್ಯಾ ಶೆಟ್ಟಿ, ವೀಣಾ ಶೆಟ್ಟಿ, ಸುಜಾತಾ ಶೆಟ್ಟಿ ಯುವ ವಿಭಾಗದ ಕಾರ್ಯಾಧ್ಯಕ್ಷ ಸುಪ್ರಿತ್ ಶೆಟ್ಟಿ ಉಪಸ್ಥಿತರಿದ್ದರು.

ಮಂಜುಳಾ ಎ. ಶೆಟ್ಟಿ ಸ್ವಾಗತಿಸಿದರು. ಜಯ ಎ. ಶೆಟ್ಟಿ ಅತಿಥಿಗಳನ್ನು ಪರಿಚಯಿಸಿದರು. ಚಿತ್ರ ವಿಶ್ವನಾಥನ್ ಅವರು ಹಳದಿ ಕುಂಕುಮ ಬಗ್ಗೆ ತಿಳಿಸಿದರು. ವೇದಿಕೆಯ ಅತಿಥಿ ಗಣ್ಯರ ಉಪಸ್ಥಿತಿಯಲ್ಲಿ ಉಷಾ ಶ್ರೀಧರ ಶೆಟ್ಟಿ ಕರ್ನಿರೆ ಮತ್ತು ಸರಳಾ ಹೆಗ್ಡೆ ಅವರನ್ನು ಗೌರವಿಸಲಾಯಿತು.

ಕಾರ್ಯಕ್ರಮವನ್ನು ಸಮಿತಿಯ ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಕಣಂಜಾರು ನಿರೂಪಿಸಿದರು.ಲೀಲಾವತಿ ಆಳ್ವ ಪ್ರಾರ್ಥನೆಗೈದರು. ಉಮಾ ಶೆಟ್ಟಿ ಯವರು ಅಬಾರ ಮನ್ನಿಸಿದರು. ಬಳಿಕ ದೇವಿಗೆ ಮಂಗಳಾರತಿ ನಂತರ ದಾಂಡಿಯಾ ರಾಸ್ ನಡೆಯಿತು.

ವರದಿ : ಈಶ್ವರ ಎಂ. ಐಲ್   / ಚಿತ್ರ: ದಿನೇಶ್ ಕುಲಾಲ್

Comments are closed.