ಕರಾವಳಿ

ಈ ಹಣ್ಣಿನ ಎಲೆ, ತೊಗಟೆ, ಬೀಜಗಳಿಂದ ಹಲವು ಸಮಸ್ಯೆಗಳು ನಿವಾರಣೆ

Pinterest LinkedIn Tumblr

ಇತ್ತೀಚಿನ ಸಂಶೋಧನೆಗಳ ಪ್ರಕಾರ, ನೇರಳೆ ಹಣ್ಣಿನಲ್ಲಿ ಕ್ಯಾನ್ಸರನ್ನು ತಡೆಗಟ್ಟಬಲ್ಲ ಅಂಶಗಳು ಹೇರಳವಾಗಿವೆ ಎಂದು ಸಂಶೋದಕರು ಹೇಳಿದ್ದಾರೆ.

ಖನಿಜಾಂಶಗಳಾದ ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣ ಹಾಗೂ ‘ಸಿ’ ಜೀವಸತ್ವಗಳು ಸಮೃದ್ಧವಾಗಿರುತ್ತವೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮೂಳೆಗಳೂ ಬಲಿಷ್ಠಗೊಳ್ಳುತ್ತವೆ.
ಹಿಮೋಗ್ಲೋಬಿನ್ ಪ್ರಮಾಣ ಹೆಚ್ಚು ಮಾಡಲು ಉಪಯೋಗವಾಗುತ್ತದೆ.
ಮಧುಮೇಹಕ್ಕೆ ನೇರಳೆಹಣ್ಣು ರಾಮಬಾಣ. ಇದರ ಬೀಜಗಳಿಂದ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಶೇ.30ರಷ್ಟು ಕಡಿಮೆಗೊಳಿಸಬಹುದು.
ನೇರಳೆಯ ಎಲೆಗಳನ್ನು ಅರೆದು ಸುಟ್ಟ ಗಾಯಗಳಿಗೆ ಹಚ್ಚುತ್ತಾ ಬಂದರೆ ಗಾಯಗಳು ಗುಣವಾಗುತ್ತವೆ.
ರಕ್ತಹೀನತೆ ಕಾಯಿಲೆಗೆ ಒಳ್ಳೆಯ ಔಷಧಿ ನೇರಳೆ ಹಣ್ಣು.
ನೇರಳೆಯಲ್ಲಿ ಶಕ್ತಿಶಾಲಿ ಆಯಂಟಿಆಕ್ಸಿಡೆಂಟ್ಸ್ ಇರುವುದರಿಂದ ಹೃದ್ರೋಗ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸಬಹುದು.
ನೇರಳೆ ಎಲೆ, ತೊಗಟೆ, ಬೀಜಗಳನ್ನು ಬ್ಯಾಕ್ಟೀರಿಯಾಗಳಿಂದ ಹರಡುವ ಸೋಂಕುಗಳ ನಿವಾರಣೆಗೆ ಬಳಸಲಾಗುತ್ತದೆ.
ನೇರಳೆ ಹಣ್ಣು ಸೇವಿಸಿದರೆ ಅತಿಸಾರ ಕಾಯಿಲೆ ಕಡಿಮೆಯಾಗುತ್ತದೆ.
ನೇರಳೆ ಹಣ್ಣು ತಿನ್ನುವುದರಿಂದ ಜೀರ್ಣ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತವೆ.
ಕ್ಯಾನ್ಸರ್ ಬರದಂತೆ ಮಾಡುವಲ್ಲಿ ನೇರಳೆ ಹಣ್ಣು ಮುಖ್ಯ ಪಾತ್ರವಹಿಸುತ್ತದೆ.
ಈ ಹಣ್ಣಿನ ಸೇವನೆಯಿಂದ ದೇಹದ ಉಷ್ಣತೆ ಕಡಿಮೆಯಾಗುತ್ತದೆ.
ನೇರಳೆ ಎಲೆಗಳನ್ನು ಜಗಿಯುವುದರಿಂದ ಬಾಯಿಯ ದುರ್ಗಂಧ ನಿರ್ಮೂಲನೆ ಆಗುತ್ತದೆ. ಹಲ್ಲುಗಳು ಗಟ್ಟಿಗೊಳ್ಳುತ್ತವೆ.

Comments are closed.