ಕರಾವಳಿ

ಬಿಜೆಪಿ ಶಾಸಕರ ನಿಧಿಯಿಂದ ಸೂಟರ್ ಪೇಟೆಯಲ್ಲಿ ಮುಖ್ಯರಸ್ತೆ ಕಾಂಕ್ರೀಟಿಕರಣಕ್ಕೆ ಗುದ್ದಲಿ ಪೂಜೆ

Pinterest LinkedIn Tumblr

ಮಂಗಳೂರು ; ಮಂಗಳೂರು ಮಹಾನಗರ ಪಾಲಿಕೆಯ 59ನೇ ಜೆಪ್ಪು ವಾರ್ಡಿನ ಸೂಟರ್ ಪೇಟೆಯ ಮೂರನೇ ಮುಖ್ಯರಸ್ತೆ ಕಾಂಕ್ರೀಟಿಕರಣಗೊಳ್ಳಲಿದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಈ ರಸ್ತೆ ಕಾಂಕ್ರೀಟಿಕರಣದಿಂದ ಸುಮಾರು 500 ಜನರಿಗೆ ಉಪಯೋಗವಾಗಲಿದೆ. ರಸ್ತೆ ಸಾಕಷ್ಟು ಹಾಳಾಗಿರುವುದರಿಂದ ಅದನ್ನು ಕಾಂಕ್ರೀಟಿಕರಣ ಮಾಡಬೇಕೆನ್ನುವುದು ಸ್ಥಳೀಯರ ಬಹುದಿನಗಳ ಬೇಡಿಕೆಯಾಗಿತ್ತು. ಅದು ಈಗ ಈಡೇರಿದೆ ಎಂದು ಶಾಸಕರು ತಿಳಿಸಿದರು.
ಶಾಸಕರ ನಿಧಿಯಿಂದ ಎಂಟು ಲಕ್ಷ ರೂಪಾಯಿ ವೆಚ್ಚದಲ್ಲಿ ರಸ್ತೆ ಕಾಂಕ್ರೀಟಿಕರಣಗೊಳ್ಳಲಿದೆ. ಸ್ಥಳೀಯರಾದ ಪದ್ಮನಾಭ ಹಾಗೂ ತಿಮ್ಮಪ್ಪ ಅಡ್ಯಾರ್ ಅವರು ತೆಂಗಿನ ಕಾಯಿ ಒಡೆದು ಗುದ್ದಲಿ ಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್ ಅವರನ್ನು ಸ್ಥಳೀಯರು ಅಭಿನಂದಿಸಿದರು.

ಪಾಲಿಕೆ ಸದಸ್ಯ ದಿವಾಕರ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ವಸಂತ ಜೆ ಪೂಜಾರಿ, ಮುಖಂಡರಾದ ಭರತ್ ಕುಮಾರ್ ಎಸ್, ಸಂಜೀವ, ಗಣೇಶ್, ಗಿರೀಶ್ ಕುಮಾರ್, ದೇವಾನಂದ ಸನಿಲ್, ದಿಲೀಪ್, ಚರಿತ್ ಪೂಜಾರಿ, ರಘು, ಮುಖೇಶ್ ಕುಮಾರ್, ರಾರಾಮಣಿ, ಸಿರಿಲ್ ಡಿಸೋಜಾ, ಸಂದೀಪ್ ಸಹಿತ ಅನೇಕ ಕರು ಉಪಸ್ಥಿತರಿದ್ದರು.

Comments are closed.