ಕರಾವಳಿ

ಅತಿಯಾದರೆ ಅಮೃತವೂ ವಿಷ ಎನ್ನುವ ಗಾದೆ ಮಾತಿನಂತೆ ಅರಶಿನದ ಬಳಕೆ..!

Pinterest LinkedIn Tumblr

ನೀವು ಅಡುಗೆಗೆ ಅರಿಶಿನವನ್ನು ಹೆಚ್ಚು ಬಳಸಿದರೆ ಅಪಾಯ ಇದರಿಂದ ಹಲವು ರೋಗಗಳು ಬರುತ್ತವೆ. ಅರಸಿನ ಪುಡಿ ಹಲವು ರೋಗಗಳಿಗೆ ಪರಿಹಾರ ಎಂದು ನಾವೆಲ್ಲರೂ ತಿಳಿದಿದ್ದೇವೆ. ಆದರೆ ಅತಿಯಾದರೆ ಅಮೃತವೂ ವಿಷ ಎನ್ನುವಂತೆ ಅರಸಿನವೂ ಹೆಚ್ಚು ಸೇವಿಸಿದರೆ ತೊಂದರೆ ಉಂಟುಮಾಡಬಹುದು.

ಜ್ವರ; ಹೌದು ನಾವು ಅರಿಶಿನವನ್ನು ಮಿತಕ್ಕಿಂತ ಹೆಚ್ಚಾಗಿ ಬಳಸಿದರೆ ಅದು ನಮಗೆ ಅನೇಕ ರೋಗಗಳನ್ನು ತರುವುದು ಖಂಡಿತಾ.
ನೀವು ಅರಿಶಿನವನ್ನು ಹೆಚ್ಚಾಗಿ ಬಳಸಿದರೆ ನಿಮಗೆ ಜ್ವರದ ಸಮಸ್ಯೆ ಕಾಣಿಸಿಕೊಳ್ಳಬಹುದು ಆದೊಷ್ಟು ಮಿತವಾಗಿ ಬಳಸಿ.

ಹೊಟ್ಟೆ ಹಾಳು:ಒಂದು ದಿನಕ್ಕೆ 1 ಚಮಚಕ್ಕಿಂತ ಹೆಚ್ಚು ಅರಸಿನ ಪುಡಿ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಇದು ಹೊಟ್ಟೆ ಹಾಳು ಮಾಡುತ್ತದೆ. ಹೆಚ್ಚು ಅರಸಿನ ಪುಡಿ ಸೇವಿಸುವುದರಿಂದ ಕೆಳಹೊಟ್ಟೆ ನೋವಿನಂತಹ ಸಮಸ್ಯೆ ಕಾಣಿಸಿಕೊಳ್ಳಬಹುದು.

ಮೂತ್ರಪಿಂಡ ಕಲ್ಲು: ಅರಸಿನದಲ್ಲಿರುವ ಆಕ್ಸಾಲೇಟ್ ಗಳು ಕಿಡ್ನಿ ಕಲ್ಲಿಗೆ ಕಾರಣವಾಗಬಹುದು. ಈ ಆಕ್ಸಲೇಟ್ ಗಳು ಕ್ಯಾಲ್ಶಿಯಂ ಕಲ್ಲುಗಳಾಗಿ ಪರಿವರ್ತಿತವಾಗಬಹುದು.

ಬೇಧಿ, ತಲೆಸುತ್ತು: ಅರಸಿನದಲ್ಲಿ ಕರ್ಕ್ಯುಮಿನ್ ಎಂಬ ಅಂಶವಿದ್ದು, ಇದರಿಂದ ಜೀರ್ಣಸಂಬಂಧಿ ಸಮಸ್ಯೆಗಳುಂಟಾಗಬಹುದು. ಇದರಿಂದ ತಲೆಸುತ್ತು, ಬೇಧಿ ಸಮಸ್ಯೆ ಕಾಣಿಸಿಕೊಳ್ಳಬಹುದು.

ಅಲರ್ಜಿ ಸಮಸ್ಯೆ:ಅರಸಿನದಲ್ಲಿರುವ ಕೆಲವು ಅಂಶಗಳಿಂದ ಅಲರ್ಜಿ ಸಮಸ್ಯೆ ಉಂಟಾಗಬಹುದು. ಕಜ್ಜಿ, ಮತ್ತು ಉಸಿರಾಟದ ತೊಂದರೆ ಉಂಟಾಗಬಹುದು.

Comments are closed.