ಕರಾವಳಿ

ಮರೋಳಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

Pinterest LinkedIn Tumblr

ಇತಿಹಾಸ ಪ್ರಸಿದ್ಧ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ನವರಾತ್ರಿ ಉತ್ಸವವು ದಿನಾಂಕ 10.10.2018ನೇ ಬುಧವಾರ ಮೊದಲ್ಗೊಂಡು 19.10.2018ನೇ ಶುಕ್ರವಾರ ತನಕ ಶ್ರೀ ಕ್ಷೇತ್ರದಲ್ಲಿ ಬ್ರಹ್ಮಶ್ರೀ ಕೆ.ಯು.ನೀಲೇಶ್ವರ ಪದ್ಮನಾಭ ತಂತ್ರಿಗಳ ಮಾರ್ಗದರ್ಶನದಲ್ಲಿ ವಿವಿಧ ಪೂಜೆ ಪುನಸ್ಕಾರಗಳಿಂದ ವಿಜೃಂಭಣೆಯಿಂದ ಜರಗಲಿರುವುದು.

ಪ್ರತಿದಿನ ಬೆಳಿಗ್ಗೆ ಉಷಾ ಪೂಜೆ, ಗಣಪತಿ ಹೋಮ, ಮಧ್ಯಾಹ್ನ ಮಹಾಪೂಜೆ ಅನ್ನಸಂತರ್ಪಣೆ ನಡೆಯಲಿರುವುದು. ಪ್ರತಿದಿನ ಸಂಜೆ.6.00ರಿಂದ ನಾನಾ ಭಜನಾ ತಂಡಗಳಿಂದ ಭಜನಾ ಕಾರ್ಯಕ್ರಮ ಹಾಗೂ ರಾತ್ರಿ ಗಂ.8.00ಕ್ಕೆ ಮಹಾಪೂಜೆಯು ಜರಗಲಿರುವುದು. ತಾ. 17.10.2018ನೇ ಬುಧವಾರ ತುಲಾಸಂಕ್ರಮಣದಂದು ಬೆಳಿಗ್ಗೆ 7.30ರಿಂದ “ಚಂಡಿಕಾ ಹವನ” ಹಾಗೂ 10.30ರಿಂದ ಶ್ರೀ ಎಂ ಎಸ್ ಗಿರಿಧರ್ ಹಾಗೂ ವಸುಧಾ ಗಿರಿಧರ್ ಇವರಿಂದ “ದಾಸಸಿಂಚನ” ಕಾರ್ಯಕ್ರಮವು ಜರಗಿ ಮಹಾಅನ್ನಸಂತರ್ಪಣೆ ನಡೆಯಲಿರುವುದು. ಸಮಸ್ತ ಭಗವದ್ಭಕ್ತರು ಈ ಪುಣ್ಯಕಾರ್ಯದಲ್ಲಿ ಭಾಗವಹಿಸಿ ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕೆಂದು ಶ್ರೀಕ್ಷೇತ್ರದ ಪ್ರಕಟಣೆ ತಿಳಿಸಿದ್ದಾರೆ.

Comments are closed.