ಕರಾವಳಿ

ವ್ಯವಹಾರದಲ್ಲಿ ನಷ್ಟ; ಆರ್ಥಿಕ ಸಂಕಷ್ಟದಿಂದ ಜಿಗುಪ್ಸೆಗೊಂಡು ಜ್ಯುವೆಲ್ಲರ್‍ಸ್ ಮಾಲಕ ಆತ್ಮಹತ್ಯೆ

Pinterest LinkedIn Tumblr

ಕುಂದಾಪುರ: ಕುಂದಾಪುರ ನಗರದಲ್ಲಿ ವಿಜಯಾ ಜುವೆಲ್ಲರ್‍ಸ್ ಹೆಸರಿನ ಚಿನ್ನದಂಗಡಿ ನಡೆಸುತ್ತಿದ್ದ ಶ್ರೀನಿವಾಸ ಶೇಟ್ (56) ಎನ್ನುವವರು ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಹೊಳೆಗೆ ಹಾರಿ ಆತ್ಮಹತ್ಯೆಗೆ ಶರಣಾದ ಶ್ರೀನಿವಾಸ್ ಶರೀರವು ಕುಂದಾಪುರದ ಆನಗಳ್ಳಿ ಸೇತುವೆಯ ಬಳಿ ವಾರಾಹಿ ಹೊಳೆಯಲ್ಲಿ ಪತ್ತೆಯಾಗಿದೆ. ವ್ಯವಹಾರದಲ್ಲಿ ಉಂಟಾದ ನಷ್ಟದಿಂದ ಆರ್ಥಿಕ ಮುಗ್ಗಟ್ಟು ಹೊಂದಿದ ಶ್ರೀನಿವಾಸ್ ಖಿನ್ನರಾಗಿದ್ದು ಇದೇ ಜಿಗುಪ್ಸೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾಗಿದೆ.

ಸ್ಥಳಕ್ಕೆ ಕುಂದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪ್ರಕರಣ ದಾಖಲಾಗಿದೆ.

Comments are closed.