ಕರಾವಳಿ

ಅತಿವೃಷ್ಠಿ ಅಧ್ಯಯನಕ್ಕೆ ಜಿಲ್ಲೆಗೆ ಆಗಮಿಸಿದ ಕೇಂದ್ರ ತಂಡದಿಂದ ವಿವಿಧೆಡೆ ಹಾನಿ ಪರಿಶೀಲನೆ

Pinterest LinkedIn Tumblr

ಮಂಗಳೂರು ಸೆಪ್ಟಂಬರ್ 13 : ಅತಿವೃಷ್ಠಿ, ಪ್ರವಾಹದಿಂದ ಸಂಭವಿಸಿದ ಹಾನಿ ಕುರಿತ ಪರಿಶೀಲನೆಗೆ ಆಗಮಿಸಿರುವ ಕೇಂದ್ರ ಸರ್ಕಾರದ ಉನ್ನತ ಅಧಿಕಾರಿಗಳ ಅಧ್ಯಯನ ತಂಡ ಮುಲ್ಕಿ ಹೋಬಳಿಯಲ್ಲಿ ಪಂಜ, ಕಿಲಿಂಜಾರು, ಅದ್ಯಪಾಡಿ, ಮಳವೂರು ಪ್ರದೇಶ ಗಳಿಗೆ ಭೇಟಿ ನೀಡಿ ನೆರೆನೀರಿನಿಂದ ಸಂಭವಿಸಿದ ಕೃಷಿ ಹಾನಿಯನ್ನು ಪರಿಶೀಲಿಸಿತು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್, ಅಪರ ಜಿಲ್ಲಾಧಿಕಾರಿ ಕುಮಾರ್, ಮುಲ್ಕಿ ತಹಸೀಲ್ದಾರ್ ಮಾಣಿಕ್ಯ, ಕೃಷಿ ಇಲಾಖೆ ಜಂಟಿ ನಿರ್ದೇಶಕರಾದ ಆಂಟನಿ, ಕಂದಾಯ ನಿರೀಕ್ಷಕರು, ಗ್ರಾಮ ಕರಣಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಸಮಿತಿ ಸದಸ್ಯರು :

ಉಪಕಾರ್ಯದರ್ಶಿ ಭರತೇಂದು ಕುಮಾರ್ ಸಿಂಗ್, ಆರ್ಥಿಕ ಸಚಿವಾಲಯ (ಐಡಿ‌ಎ ಎಸ್) , ಮಾಣಿಕ್ ಚಂದ್ರ ಪಂಡಿತ್ ಉಪ ಕಾರ್ಯದರ್ಶಿ ಗ್ರಾಮೀಣಾಭಿವೃದ್ಧಿ ಸಚಿವಾಲಯ, ಸದಾನಂದ ಬಬಾಬು ಪ್ರಾದೇಶಿಕ ವಿಭಾಗ ಸಂಪರ್ಕ ಮತ್ತು ಹೈವೇಸ್ ಇವರು ಸಮಿತಿಯಲ್ಲಿದ್ದರು.

Comments are closed.