ಕರಾವಳಿ

ನೀರಿಗೆ ಯಾವ ರೀತಿಯಾ ಸಾಮಾಗ್ರಿಗಳನ್ನು ಹಾಕಿ ಸ್ನಾನ ಮಾಡಿದರೆ ಉತ್ತಮ..

Pinterest LinkedIn Tumblr

ಮಾನವ ಸ್ನಾನ ಮಾಡುವುದರಿಂದ ತನ್ನ ಅಂದ ಮತ್ತು ದೇಹ ಶುದ್ದಿಗೆ ಮಾಡುತ್ತಾನೆ. ಹಾಗೆಯೆ ಸಾಮಾನ್ಯವಾಗಿ ನಿವು ಸ್ನಾನ ಮಾಡುವಾಗ ಹಲುವು ರೀತಿಯ ರೋಗ ನಿರೋಧಕ ಶಕ್ತಿಗಳನ್ನು ನಾವು ಬೆಳೆಸಿಕೊಳ್ಳಬಹುದು. ನಾವು ಸ್ನಾನ ಮಾಡುವಾಗ ಕೆಲವೊಂದು ಸಾಮಾಗ್ರಿಗಳನ್ನು ನೀರಿನಲ್ಲಿ ಬೆರೆಸಿ ಸ್ನಾನ ಮಾಡಿದರೆ ಅದರ ಅಂದ ಚಂದನೇ ಬೇರೆ ಕಣ್ರೀ. ಹಾಗಿದ್ರೆ ನೀವು ನೀರಿಗೆ ಯಾವ ಸಾಮಾಗ್ರಿಗಳನ್ನು ಹಾಕಿ ಸ್ನಾನ ಮಾಡಿಡಬೇಕು ಅಂತೀರಾ ಇಲ್ಲಿವೆ ನೋಡಿ.

ಸ್ನಾನದ ನೀರಿಗೆ ಹಾಕುವ ಸಾಮಾಗ್ರಿಗಳು.

ಜೇನು ತುಪ್ಪ:
ಸಾಮಾನ್ಯವಾಗಿ ಜೇನು ತುಪ್ಪದಲ್ಲಿ ಹೆಚ್ಚಿನ ಕಾಂತಿಯ ಹುಣಗಳನ್ನು ಹೊಂದಿರುತ್ತದೆ. ಹಾಗೆಯೆ ಇದು ನಿಮ್ಮ ತ್ವಚೆಯನ್ನು ಹಲವು ಖಾಯಿಲೆಗಳಿಂದ ತಡೆಗಟ್ಟುತ್ತದೆ. ಮತ್ತು ನಿಮ್ಮ ತ್ವಚೆಯನ್ನು ಒಣಗದಂತೆ ನೋಡಿಕೊಳ್ಳುತ್ತದೆ. ಹಾಗಾಗಿ ನೀವು ಸ್ನಾನ ಮಾಡು ವಾಗ ನಿಮ್ಮ ನೀರಿಗೆ ಜೇನು ತುಪ್ಪ ಹಾಕಿಕೊಂಡು ಸ್ನಾನ ಮಾಡುವುದು ಒಳಿತು.

ಹಾಲು..
ಹಾಲು ಸಹ ಮಾನವ ದೇಹಕ್ಕೆ ತುಂಬ ಸಹಾಯಕಾರಿಯಾಗಿರುವ ಒಂದು ಸಾಮಾಗ್ರಿಯಾಗಿದೆ.ಈ ಹಾಲಿನಲ್ಲಿ ಸಾಕಷ್ಟು ರೀತಿ ಯಾದ ರೋಗ ನಿರೋಧಕ ಗುಣಗಳನ್ನು ಹೊಂದಿದೆ. ನಿಮ್ಮ ತ್ವಚೆ ಉರಿತ ಮತ್ತು ತುರಿಕೆ ನಿವಾರಿಸುತ್ತದೆ ಮತ್ತು ಮಾಡುವೆ ಗುಳ್ಳೆಗಳು ಇದ್ರೆ ತುಂಬ ಪರಿಣಾಮಕಾರಿಯಾಗಿ ಹೋಗಲಾಡಿಸಲು ಸಹಾಯವಾಗುತ್ತದೆ.

ಗ್ರೀನ್ ಟೀ:
ಗ್ರೀನ್ ಟೀ ಪ್ಯಾಕೆಟ್ ತೆಗೆದುಕೊಂಡು ಅದನ್ನು ಬಿಸಿ ನೀರಿನಲ್ಲಿ ನೆನೆಸಿದರೆ ಅದರಲ್ಲಿರುವ ಪೋಷಕಾಂಶಗಳು ನೀರಿನಲ್ಲಿ ಮಿಕ್ಸ್ ಆಗುತ್ತವೆ. ಹದಿನೈದು ನಿಮಿಷ ಬಿಟ್ಟು ಆ ನೀರಿನಲ್ಲಿ ಸ್ನಾನ ಮಾಡುವುದರಿಂದ ತ್ವಚೆಯ ಮೇಲೆ ಉಂಟಾಗಿರುವ ಹಾನಿಯನ್ನು ತಪ್ಪಿಸಬಹುದು. ಮತ್ತು ನಿಮಗೆ ಸುಕ್ಕು ಬರುವುದನ್ನು ತಡೆಗಟ್ಟಬಹುದು.

ತೆಂಗಿನ ಎಣ್ಣೆ:
ಸಾಮಾನ್ಯವಾಗಿ ತೆಂಗಿನ ಎಣ್ಣೆ ಅಂದ್ರೆ ಒಂದು ಅಡುಗೆಗೆ ಮತ್ತು ತಲೆಗೆ ಹಚ್ಚಲು ಮಾತ್ರ ಅನುವು ಜನರು ಇದಾರೆ ಆದರೆ ತೆಂಗಿನ ಎಣ್ಣೆಯನ್ನು ನೀವು ಸ್ನಾನದಲ್ಲಿ ಕೂಡ ಬಳಸಬಹುದು. ಇದರಿಂದ ನಿಮ್ಮ ತ್ವಚೆ ಮೃದವಾಗುತ್ತದೆ ಹಾಗೆಯೆ ನಿಮ್ಮ ಕೂದಲುಗಳು ಹೊಳೆಯಲು ಕಾರಣವಾಗುತ್ತೆ.

ಆಲೀವ್ ಎಣ್ಣೆ:
ಆಲೀವ್ ಎಣ್ಣೆಯು ತ್ವಚೆಯನ್ನು ಮೃದು ಮಾಡುತ್ತದೆ. ಮತ್ತು ನಿಮ್ಮ ತ್ವಚೆಯ ಒಣಗುವಿಕೆ ಮತ್ತು ತ್ವಚೆಯು ಆಕ್ಟಿವ್ ಆಗಿರುತ್ತೆ. ನಿಮ್ಮ ಕೂದಲು ಮೀರಿ ಮೀರಿ ಮಿಂಚಲು ಪ್ರಾಂಭಿಸುತ್ತವೆ.

ನಿಂಬೆರಸ:
ನೀವು ಸ್ನಾನಕ್ಕೆ ನಿಂಬೆ ರಸ ಹಾಕಿಕೊಂಡು ಸ್ನಾನ ಮಾಡಿದರೆ ನಿಮ್ಮ ಚರ್ಮದಲ್ಲಿನ ರಂಧ್ರಗಳು ಮುಚ್ಚಿಕೊಂಡು ಬಿಗಿಯಾಯಾಗಿ ರುತ್ತದೆ. ಮತ್ತು ಮೊಡವೆ ಗುಳ್ಳೆ ಹಾಗು ಯಾವುದೇ ಚರ್ಮ ಖಾಯಿಲೆಗಳು ಬರುವುದನ್ನು ತಡೆಗಟ್ಟುತ್ತದೆ.

Comments are closed.