ಕರಾವಳಿ

ಪ್ರತಿಯೊಬ್ಬರು ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆ ತೆರೆಯುವಂತೆ ಶಾಸಕ ವೇದವ್ಯಾಸ್ ಕಾಮತ್ ಕರೆ

Pinterest LinkedIn Tumblr

ಅಂಚೆ ಡಿಜಿಟಲೀಕರಣ ಮೋದಿ ಕನಸು ನನಸು : ಶಾಸಕ ವೇದವ್ಯಾಸ್ ಕಾಮತ್

ಮಂಗಳೂರು : ಕೇಂದ್ರ ಸರಕಾರದ ದೂರದೃಷ್ಟಿಯ ಯೋಜನೆ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್ ನಲ್ಲಿ ಖಾತೆ ತೆರೆಯುವ ಮೂಲಕ ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಅವರು ಪ್ರಧಾನಿ ನರೇಂದ್ರ ಮೋದಿ ಅವರ ಅಂಚೆ ಇಲಾಖೆಯ ಡಿಜಿಟಲೀಕರಣದ ಕಸನಸನ್ನು ಸಾಕಾರಗೊಳಿಸುವಲ್ಲಿ ಬೇರೆಯವರಿಗೆ ಮಾದರಿಯಾಗಿದ್ದಾರೆ.

ಶನಿವಾರ ಬೆಳಿಗ್ಗೆ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ತಮ್ಮ ಖಾತೆ ತೆರೆಯುವ ಪ್ರಕ್ರಿಯೆ ನಡೆಸಿ ಮಾತನಾಡಿದ ಶಾಸಕರು ಅಂಚೆ ಇಲಾಖೆಯ ಪ್ರತಿಯೊಬ್ಬ ಗ್ರಾಹಕನೂ ಪೋಸ್ಟ್ ಪೇಮೆಂಟ್ ಬ್ಯಾಂಕ್ ಖಾತೆಯನ್ನು ತೆರೆದು ಅಂಚೆ ಕಚೇರಿಯ ಖಾತೆಯ ಜೊತೆಗೆ ಜೋಡಿಸುವುದರಿಂದ ರೂಪಾಯಿ ಒಂದು ಲಕ್ಷದವರೆಗೆ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಮೂಲಕ ಮತ್ತು ಅದಕ್ಕಿಂತ ಹೆಚ್ಚಿನ ವ್ಯವಹಾರವನ್ನು ಅಂಚೆ ಕಚೇರಿಯ ಮೂಲಕ ಸುಗಮವಾಗಿ ವ್ಯವಹರಿಸಬಹುದಾಗಿದೆ ಎಂದರು.

ರೈಲ್ವೆ ಟಿಕೆಟ್ ಬುಕ್ಕಿಂಗ್, ವಿಮಾನ ಟಿಕೆಟ್ ಬುಕ್ಕಿಂಗ್, ಎನ್ ಈಪಿಟಿ, ಆರ್ಟಿಜಿಎಸ್, ಈಎಂಪಿಎಸ್ ಸೌಲಭ್ಯಗಳನ್ನು ಪಡೆಯಬಹುದು. ನೇರ ನಗದು ಸೌಲಭ್ಯಗಳಾದ ಗ್ಯಾಸ್ ಸಬ್ಸಿಡಿ, ಸಾಮಾಜಿಕ ಭದ್ರತಾ ಪಿಂಚಣಿ, ವಿದ್ಯಾರ್ಥಿ ವೇತನ ಇತರ ಸೌಲಭ್ಯಗಳನ್ನು ಪಡೆಯಬಹುದು ಎಂದು ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದರು.

Comments are closed.