ಕರಾವಳಿ

ನಾಳೆ ಮಂಗಳೂರು ಪುರಭವನದಲ್ಲಿ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನ,ಯಕ್ಷ ವೈಭವ

Pinterest LinkedIn Tumblr

ಮಂಗಳೂರು- ಭ್ರಾಮರೀ ಯಕ್ಷಮಿತ್ರರು (ರಿ.) ಮಂಗಳೂರು ಇದರ ಮೂರನೇ ವರ್ಷದ ಯಕ್ಷವೈಭವ ಹಾಗೂ ಭ್ರಾಮರೀ ಯಕ್ಷಮಣಿ ಪ್ರಶಸ್ತಿ ಪ್ರದಾನ ಸಮಾರಂಭ ಸೆಪ್ಟಂಬರ್ ಒಂದು ಶನಿವಾರ ರಾತ್ರಿ 7.30 ರಿಂದ ಮಂಗಳೂರು ಪುರಭವನದಲ್ಲಿ ಜರಗಲಿದೆ.

ಯಕ್ಷಗಾನದ ವಿಷಯಕ್ಕಾಗಿಯೇ ಮೀಸಲಿಟ್ಟ ವಾಟ್ಸಪ್ ಬಳಗವಾಗಿ ಆರಂಭಗೊಂಡು ನೋಂದಾಯಿಸಲ್ಪಟ್ಟ ಬಳಗವಾಗಿ ಭ್ರಾಮರೀ ಯಕ್ಷಮಿತ್ರರು ಗುರುತಿಸಿಕೊಂಡಿದೆ.ಯಕ್ಷಗಾನದಲ್ಲಿ ಸಾಧನೆಯನ್ನು ಮಾಡಿದವರನ್ನು ಪ್ರಶಸ್ತಿ ನೀಡಿ ಗುರುತಿಸುವುದರ ಜತೆಗೆ ರಂಗದ ನೇಪಥ್ಯದಲ್ಲಿ ದುಡಿದು ಯಕ್ಷಗಾನದ ಉಳಿವಿಗೆ ಶ್ರಮಿಸಿರುವ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವ ಸದುದ್ದೇಶವನ್ನು ಬಳಗ ಮಾಡುತ್ತಬಂದಿದೆ.

ಸೆಪ್ಟಂಬರ್ ಒಂದರಂದು ಜರಗುವ ಯಕ್ಷವೈಭವ ಕಾರ್ಯಕ್ರಮದಲ್ಲಿ ಖ್ಯಾತ ಹಿಮ್ಮೇಳ ಕಲಾವಿದ ಮೋಹನ ಶೆಟ್ಟಿಗಾರ್ ಮಿಜಾರು,ನೇಪಥ್ಯ ಕಲಾವಿದರಾದ ಬಿ.ಐತ್ತಪ್ಪ ಟೈಲರ್,ರಘು ಶೆಟ್ಟಿ ನಾಳ ಅವರನ್ನು ಗೌರವಿಸಲಾಗುವುದು.ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿಯವರ ಯಕ್ಷಸೇವೆಯನ್ನು ಗುರುತಿಸಿ ಅವರಿಗೆ ಗೌರವ ಸನ್ಮಾನ ಇದೇ ವೇದಿಕೆಯಲ್ಲಿ ಜರಗಿಲಿದೆ.

ಕಾರ್ಯಕ್ರಮವನ್ನು ಮಂಗಳೂರು ದಕ್ಷಿಣದ ಶಾಸಕ ವೇದವ್ಯಾಸ್ ಕಾಮತ್ ಉದ್ಘಾಟಿಸಲಿದ್ದಾರೆ.ಹಿರಿಯ ಸಾಹಿತಿ ,ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಅಧ್ಯಕ್ಷತೆ ವಹಿಸಲಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಬಾಸ್ಕರ್ ಕೆ,ಎಸ್.ಸಿ.ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕ ಟಿ.ಜಿ ರಾಜಾರಾಮ್ ಭಟ್,ಧಾರ್ಮಿಕ ಪರಿಷತ್ ನ ಸದಸ್ಯ ಪದ್ಮನಾಭ ಕೋಟ್ಯಾನ್ , ಬ್ರಿಟಿಷ್ ಬಯಲೋಜಿಕಲ್ಸ್ ನ ವಲಯ ಪ್ರಬಂದಕ ಸಿ.ಎಸ್ ಭಂಡಾರಿ, ಮಂಗಳೂರು ಮಹಾನಗರ ಪಾಲಿಕೆಯ ಮುಖ್ಯ ಸಚೇತಕ ಶಶಿಧರ ಹೆಗ್ಡೆ,ಉದ್ಯಮಿ ರಮೇಶ್ ಶೆಟ್ಟಿ ಕಾರ್ಕಳ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ತದನಂತರ ತೆಂಕು ಹಾಗೂ ಬಡಗುತ್ತಿಟ್ಟಿನ ಹೆಸರಾಂತ ಕಲಾವಿದರ ಕೂಡುವಿಕೆಯಲ್ಲಿ ಸತ್ಯ ಹರಿಶ್ಚಂದ್ರ,ಶೂರ್ಪನಖಾ ವಿವಾಹ ಮತ್ತು ಮಕರಾಕ್ಷ ಕಾಳಗ ಯಕ್ಷಗಾನ ಉಚಿತವಾಗಿ ಪ್ರದರ್ಶನಗೊಳ್ಳಲಿದೆ ಎಂದು‌ ಬಳಗದ ಪ್ರಕಟಣೆ ತಿಳಿಸಿದೆ

Comments are closed.