ಕರಾವಳಿ

ಸೆ.4ರಂದು ಮಂಗಳೂರಿನಲ್ಲಿ ತುಳು ಲಿಪಿ ಕಲಿಕಾ ತರಗತಿ ಉದ್ಘಾಟನೆ

Pinterest LinkedIn Tumblr

(ಸಾಂದರ್ಭಿಕ ಚಿತ್ರ)

ಮಂಗಳೂರು ಆಗಸ್ಟ್.30 : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ‘ತುಳು ಲಿಪಿ ಕಲ್ಪುಗ’ ಯೋಜನೆಯಡಿ ಉಚಿತ ತುಳು ಲಿಪಿ ಕಲಿಕಾ ತರಗತಿಯನ್ನು ನಡೆಸುವ ಸಲುವಾಗಿ ಸೆ.4ರಂದು ಮಧ್ಯಾಹ್ನ 3 ಗಂಟೆಗೆ ಅಕಾಡೆಮಿಯ ‘ಸಿರಿಚಾವಡಿ’ಯಲ್ಲಿ ತುಳು ಲಿಪಿ ಕಲಿಕಾ ತರಗತಿಯ ಉದ್ಘಾಟನಾ ಸಮಾರಂಭ ಜರಗಲಿದೆ.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಎ. ಸಿ. ಭಂಡಾರಿ ಸಮಾರಂಭದ ಅಧ್ಯಕ್ಷತೆ ವಹಿಸಲಿರುವರು, ಸಾರ್ವಜನಿಕ ಶಿಕ್ಷಣ ಇಲಾಖೆ, ಉಡುಪಿಯ ಉಪನಿರ್ದೇಶಕರಾದ ಶೇಷಶಯನ ಕಾರಿಂಜ ತುಳು ಲಿಪಿ ಕಲಿಕಾ ತರಗತಿಯನ್ನು ಉದ್ಘಾಟಿಸಲಿದ್ದಾರೆ. ಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಧರ್ಮಸ್ಥಳದ ನಿರ್ದೇಶಕರಾದ ಡಾ| ಎಸ್. ಆರ್. ವಿಘ್ನರಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು.

ತುಳು ಲಿಪಿ ಕಲಿಯಲಿಚ್ಚಿಸುವ ಆಸ್ತಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಅವಕಾಶವನ್ನು ಸದುಪಯೋಗ ಪಡಿಸಿ ಕೊಳ್ಳಲು ಮುಂದೆ ಬರಬೇಕಾಗಿ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ವಿನಂತಿಸಿದ್ದಾರೆ.

Comments are closed.