ಕರಾವಳಿ

ಎಸ್‌ಕೆ ಬಾರ್ಡರ್ ಬಳಿ ಗ್ಯಾಸ್ ಟ್ಯಾಂಕರ್‌ ಪಲ್ಟಿ : ಕುದುರೆಮುಖ-ಕಾರ್ಕಳ-ಶೃಂಗೇರಿ ರಸ್ತೆಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತ

Pinterest LinkedIn Tumblr

ಕಾರ್ಕಾಳ, ಆಗಸ್ಟ್.29: ಬೃಹತ್ ಗ್ಯಾಸ್ ಟ್ಯಾಂಕರ್‌ವೊಂದು ರಸ್ತೆಗೆ ಅಡ್ಡಲಾಗಿ ಉರುಳಿಬಿದ್ದ ಪರಿಣಾಮ ಕಾರ್ಕಾಳ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್.ಕೆ. ಬಾರ್ಡರ್‌ನ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ.

ಕುದುರೆಮುಖ ಸಮೀಪದ ಎಸ್.ಕೆ.ಬಾರ್ಡರ್‌ನಲ್ಲಿ ನಿನ್ನೆ ರಾತ್ರಿ ಅನಿಲ ಸಾಗಾಟದ ಟ್ಯಾಂಕರ್‌ವೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಮಧ್ಯೆಯೇ ಉರುಳಿಬಿದ್ದಿದೆ. ಇದರಿಂದ ಯಾವುದೇ ಅನಾಹುತ ಸಂಭವಿಸಿಲ್ಲವಾದರೂ ಕುದುರೆಮುಖ-ಕಾರ್ಕಳ-ಶೃಂಗೇರಿ-ಮಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿದೆ.

ಶೃಂಗೇರಿಯ ಸಮೀಪದ ಎಸ್.ಕೆ. ಬಾರ್ಡರ್‌ನಿಂದ ಸುಮಾರು 10 ಕಿ.ಮೀ. ದೂರದವರೆಗೂ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ದಟ್ಟಣೆ ವಿಪರೀತವಾಗಿದೆ. ಕುದುರೆಮುಖದಲ್ಲಿ ಐರಾವತ ಬಸ್‌ಗಳು ಸಾಲುಗಟ್ಟಿ ನಿಂತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ. ಘಟನಾ ಸ್ಥಳಕ್ಕೆ ಕಾರ್ಕಳ ಪೊಲೀಸರು ಭೇಟಿ ನೀಡಿದ್ದು, ಟ್ರಾಫಿಕ್ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದ್ದಾರೆ.ಈ ನಡುವೆ ಟ್ಯಾಂಕರ್ ತೆರವು ಕಾರ್ಯಾಚರಣೆ ಕೂಡಾ ಮುಂದುವರಿದಿದೆ.

_VB

Comments are closed.