ಕರಾವಳಿ

ಜ್ವರ ಜಾಸ್ತಿ ಇದ್ದರೆ ಕಡಿಮೆ ಮಾಡುವ ಜ್ಯೂಸ್‌ಗಳು.

Pinterest LinkedIn Tumblr

ಜ್ವರ ಬಂದಾಗ ಸರಿಯಾಗಿ ಆಹಾರ ಸೇವಿಸದೆ ಮೈಕೈ ನೋವು, ಸುಸ್ತು ಕಾಡುತ್ತಿರುತ್ತದೆ. ಅಂತಹ ಸಮಯದಲ್ಲಿ ಹೆಚ್ಚು ಹೆಚ್ಚು ಪಾನೀಯಗಳನ್ನು ಸೇವಿಸುವುದರಿಂದ ದೇಹಕ್ಕೆ ಹೊಸ ಚೈತನ್ಯ ಹಾಗೂ ದೇಹಕ್ಕೆ ಹೊಸ ಶಕ್ತಿಯನ್ನೂ ನೀಡಬಹುದು. ಇದರಿಂದ ಜ್ವರವೂ ಕಡಿಮೆಯಾಗಿ ಬೇಗ ಗುಣಮುಖರಾಗುತ್ತಾರೆ. ಹಾಗಿದ್ದರೆ ಇಲ್ಲಿವೆ ನೋಡಿ ಜ್ವರ ಕಡಿಮೆ ಮಾಡುವ ಜ್ಯೂಸ್‌ಗಳು.

* ಆ್ಯಪಲ್‌, ಕ್ಯಾರೆಟ್‌ ಮತ್ತು ಆರೇಂಜ್ ಜ್ಯೂಸ್

ಈ ಮೂರನ್ನು ಮಿಕ್ಸ್ ಮಾಡಿ ಜ್ಯೂಸ್‌ ಮಾಡಿ ಕುಡಿದರೆ ಸುಸ್ತು ಬೇಗನೆ ನಿವಾರಣೆಯಾಗುವುದು.

* ಕಿತ್ತಳೆ ಅಥವಾ ಮೂಸಂಬಿ ಜ್ಯೂಸ್‌

ಇವುಗಳಲ್ಲಿ ವಿಟಮಿನ್‌ ಸಿ ಇರುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚುವುದು. ಸೋಂಕುಗಳ ವಿರುದ್ಧ ಹೋರಾಡುವಲ್ಲಿ ಈ ಆಹಾರ ತುಂಬಾ ಸಹಕಾರಿ.* ಬೀಟ್‌ರೂಟ್‌, ಕ್ಯಾರೆಟ್, ಅರಿಶಿಣ, ನಿಂಬೆರಸ ಜ್ಯೂಸ್‌

1 ಬೀಟ್‌ ರೂಟ್‌, 3 ಕ್ಯಾರೆಟ್‌, ಒಂದು ಕಿತ್ತಳೆ, 2 ಇಂಚಿನಷ್ಟು ದೊಡ್ಡದಿರುವ ಅರಿಶಿಣ, ಸ್ವಲ್ಪ ಶುಂಠಿ , ಚಿಟಿಕೆಯಷ್ಟು ಕಾಳು ಮೆಣಸಿನ ಪುಡಿ, ಅರ್ಧ ಚಮಚ ನಿಂಬೆ ರಸ ಹಾಕಿ ಮಿಶ್ರಣ ಮಾಡಿ ಜ್ಯೂಸ್‌ ಮಾಡಿ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುವುದು.

* ಸ್ಟ್ರಾಬೆರಿ ಮತ್ತು ಕಿವಿ ಫ್ರೂಟ್ ಜ್ಯೂಸ್

ಸ್ಟ್ರಾಬೆರಿ ಮತ್ತು ಕಿವಿಫ್ರೂಟ್‌ ಜತೆ ಎರಡು ಪುದೀನಾ ಎಲೆ ಹಾಕಿ ಜ್ಯೂಸ್‌ ಮಾಡಿ ಕುಡಿದರೆ ಸುಸ್ತು ಬೇಗನೆ ಕಡಿಮೆಯಾಗುವುದು. ಕಿವಿಫ್ರೂಟ್‌ ದೇಹದಲ್ಲಿ ಬಿಳಿ ರಕ್ತಕಣಗಳು ಹೆಚ್ಚಲು ಸಹಕಾರಿ.* ಕುಂಬಳಕಾಯಿ ಬೀಜದ ಜ್ಯೂಸ್

ಹಾಲಿಗೆ ಕುಂಬಳಕಾಯಿ ಬೀಜ ಹಾಕಿ ಜ್ಯೂಸ್ ಮಾಡಿ ಕುಡಿಯುವುದರಿಂದ ನಿಶ್ಯಕ್ತಿ ಕಡಿಮೆಯಾಗುವುದು.

Comments are closed.