ಕರಾವಳಿ

ದೇಶಕ್ಕಾಗಿ ಪ್ರಾಣರ್ಪಣೆಗೈದವರನ್ನು ನೆನಪಿಸುವ ಅವಶ್ಯಕತೆ ಇದೆ : ಯೋಗೀಶ್ ಭಟ್

Pinterest LinkedIn Tumblr

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ

ಮಂಗಳೂರು : ಮಂಗಳೂರಿನ ಕೊಡಿಯಾಲ್ ಬೈಲ್ ನಲ್ಲಿರುವ ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಚೇರಿಯಲ್ಲಿ ಬುಧವಾರ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು. ವಿಧಾನಸಭೆಯ ಮಾಜಿ ಉಪಸಭಾಧ್ಯಕ್ಷ ಯೋಗೀಶ್ ಭಟ್ ಧ್ವಜಾರೋಹಣಾಗೈದರು.

ಬಳಿಕ ಮಾತನಾಡಿದ ಅವರು ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ 18 ವಯಸ್ಸಿನ ಯುವ ಕ್ರಾಂತಿಕಾರಿಗಳಿಂದ ಹಿಡಿದು 60 ವರ್ಷದ ಹಿರಿಯರವರೆಗೆ ಬಹಳಷ್ಟು ಜನ ದೇಶಕ್ಕಾಗಿ ಪ್ರಾಣರ್ಪಣೆಗೈದಿದ್ದಾರೆ. ಇಂದು ಅವರೆಲ್ಲರನ್ನು ನೆನಪಿಸುವ ಅವಶ್ಯಕತೆ ಇದೆ.ಇಂದು ಭಾರತದ ಸ್ವಾತಂತ್ರ್ಯವನ್ನು ಕಾಪಾಡುವ ಮಹತ್ತರವಾದ ಜವಾಬ್ದಾರಿಗಳು ಪ್ರತಿಯೊಬ್ಬ ಪ್ರಜೆಯ ಮೇಲೆಯೂ ಇದೆ ಎಂದರು.

ಈ ಸಂದರ್ಭದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್, ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್, ಬಿಜೆಪಿ ಜಿಲ್ಲಾ ಉಪಾಧ್ಯಕ್ಷರಾದ ರವಿಶಂಕರ್ ಮಿಜಾರ್, ಪ್ರಧಾನ ಕಾರ್ಯದರ್ಶಿ ಪ್ರಭಾ ಮಾಲಿನಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಪೂಜಾ ಪೈ, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂಧ್ಯಾ ವೆಂಕಟೇಶ್, ಮನಪಾ ಸದಸ್ಯರಾದ ಸುಧೀರ್ ಶೆಟ್ಟಿ ಕಣ್ಣೂರು, ರಾಜೇಂದ್ರ ಕುಮಾರ್, ಪೂರ್ಣಿಮಾ, ರೂಪಾ ಡಿ ಬಂಗೇರ, ಜಿಲ್ಲಾ ಪ್ರಮುಖರಾದ ವಸಂತ ಜೆ ಪೂಜಾರಿ, ವಕ್ತಾರ ಸತೀಶ್ ಪ್ರಭು ಉಪಸ್ಥಿತರಿದ್ದರು. ಮನಪಾ ಮಾಜಿ ಸದಸ್ಯ ಭಾಸ್ಕರ್ ಚಂದ್ರ ಶೆಟ್ಟಿ ಸ್ವಾಗತಿಸಿದರು. ಜಗದೀಶ್ ಶೆಟ್ಟಿ ವಂದಿಸಿದರು.

Comments are closed.