ಉಡುಪಿ: ಉಡುಪಿಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯೂ ಆದ ಜಿಲ್ಲಾ ಉಸ್ತುವಾರಿ ಮಂತ್ರಿ ಡಾ.ಜಯಮಾಲಾ ಸ್ವಾತಂತ್ರೋತ್ಸವ ಧ್ವಜಾರೋಹಣ ಮಾಡಿದರು.
ಇಲ್ಲಿನಬೀಡಿನಗುಡ್ಡೆಯ ರಂಗಮಂದಿರದಲ್ಲಿ 72 ನೇಸ್ವಾತಂತ್ರೋತ್ಸವ ಸಮಾರಂಭಹಮ್ಮಿಕೊಳ್ಳಲಾಗಿತ್ತು.ಬೆಳಿಗ್ಗೆ 9 ಗಂಟೆಗೆಧ್ವಜಾರೋಹಣ ಮಾಡಿದ ಸಚಿವರು ಬಳಿಕಸ್ವಾತಂತ್ರೋತ್ಸವ ಸಂದೇಶ ಭಾಷಣಮಾಡಿದರು.ಇದಕ್ಕೂ ಮುನ್ನ ಸಚಿವರು ಜಿಲ್ಲಾಡಳಿತ ಮತ್ತು ವಿವಿಧ ಶಾಲಾ ವಿದ್ಯಾರ್ಥಿಗಳಿಂದ ಗೌರವವಂದನೆ ಸ್ವೀಕರಿಸಿದರು. ಬಳಿಕ ಜಿಲ್ಲಾ ಪೊಲೀಸ್ ವತಿಯಿಂದ ಮತ್ತು ವಿದ್ಯಾರ್ಥಿಗಳಿಂದ ಆಕರ್ಷಕಪಥಸಂಚನ ನಡೆಯಿತು. ಕೊನೆಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸುವ ಕಾರ್ಯಕ್ರಮವಿತ್ತು.


ಸ್ವಾತಂತ್ರೋತ್ಸವ ಸಂದೇಶ ನೀಡಿದ ಸಚಿವೆ ಡಾ.ಜಯಮಾಲಾ , ಉಡುಪಿ ಜಿಲ್ಲೆಯಲ್ಲಿ ಬ್ರಹ್ಮಾವರ ,ಕಾಪು ,ಬೈಂದೂರು ಮತ್ತು ಹೆಬ್ರಿ ಎಂಬ ನಾಲ್ಕು ಹೊಸ ತಾಲೂಕು ರಚನೆಯಾಗಿದೆ. ಎಲ್ಲ ಇಲಾಖೆಗಳೂ ಕಾರ್ಯಾರಂಭ ಮಾಡಿವೆ. ಉಳಿದ 14 ಇಲಾಖೆಗಳು ಶೀಘ್ರ ಕಾರ್ಯನಿರ್ವಹಿಸಲು ಕ್ರಮ ಕೈಗೊಳ್ಳಲಾಗಿದೆ. ಎಲ್ಲ ನಾಲ್ಕು ಹೊಸ ತಾಲೂಕು ಕೇಂದ್ರಗಳಲ್ಲೂ ತಲಾ ಹತ್ತು ಕೋಟಿ ರೂ. ವೆಚ್ಚದಲ್ಲಿ ಮಿನಿ ವಿಧಾನಸೌಧ ನಿರ್ಮಾಣ ಮಾಡಲಾಗುವುದು ಎಂದರು.
ಈ ಸಂದರ್ಭ ಉಡುಪಿ ಶಾಸಕ ಕೆ. ರಘುಪತಿ ಭಟ್, ಜಿ.ಪಂ ಅಧ್ಯಕ್ಷ ದಿನಕರ ಬಾಬು, ಉಡುಪಿ ಡಿಸಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಎಸ್ಪಿ ಲಕ್ಷ್ಮಣ ನಿಂಬರ್ಗಿ ಇದ್ದರು.
Comments are closed.