ಕರಾವಳಿ

ಸ್ಪರ್ಶದ ಅನುಭವ ಕಡಿಮೆಯಾಗಿ ಕೈ,ಕಾಲು ಜುಮ್ ಹಿಡಿಯಲು ಕಾರಣ ಗೋತ್ತೆ..?

Pinterest LinkedIn Tumblr

ಕೈ ಕಾಲು ಜುಮ್ ಹಿಡಿಯುವುದು ಕೇವಲ ಕೆಲವು ನಿಮಿಷಗಳು ಮಾತ್ರ, ಆದರೆ ಇದರಿಂದ ಬಹಳ ಹಿಂಸೆಯಾಗುತ್ತದೆ. ಹೀಗೆ ಕೈ ಕಾಲುಗಳು ಜುಮ್ ಹಿಡಿಯಲು ಕಾರವೇನು ಗೊತ್ತಾ…? ದೀರ್ಘಕಾಲದ ವರೆಗೆ ಮಲಗುವ ಅಥವಾ ಕುಳಿತುಕೊಳ್ಳುವ ವಿಧಾನ ಸರಿಯಾಗಿಲ್ಲದಿದ್ದರೆ ನರಗಳಿಗೆ ಒತ್ತಡ ಹೆಚ್ಚಾಗಿ ಕೈ ಕಾಲುಗಳ ನರಗಳು ತಮ್ಮ ಸಾಮರ್ಥ್ಯ ಕಳೆದುಕೊಂಡು ಸ್ಪರ್ಶದ ಅನುಭವ ಕಡಿಮೆಯಾಗಿ ಜುಮ್ ಹಿಡಿಯುತ್ತವೆ.

* ಇದಕ್ಕೆ ನೀವು ಮಾಡಬೇಕಾಗಿರುವುದು ಇಷ್ಟೇ. ಒಂದು ಬಕೆಟ್ ನಲ್ಲಿ ಬಿಸಿನೀರಿನ ಜೊತೆ ಎರಡು ಸ್ಪನ್ ಎಪ್ಸಮ್ ಉಪ್ಪು ಹಾಕಿ ಕೆಲವು ನಿಮಿಷ ಕೈ ಕಾಲುಗಳನ್ನ ಇಡಿ.
* ವಾರಕ್ಕೊಮ್ಮೆ ಕೈ ಕಾಲುಗಳಿಗೆ ಉಗುರು ಬೆಚ್ಚಗಿನ ಎಳ್ಳಿನ ಎಣ್ಣೆಯಿಂದ ನಿಧಾನವಾಗಿ ಮಸಾಜ್ ಮಾಡಿ.
* ಕೆಲವು ದಿನಗಳವರೆಗೆ ಬೆಳಗ್ಗೆ ಒಂದು ಲೋಟ ಹಾಲಿಗೆ ಒಂದು ಚಮಚ ಅರಿಶಿನ ಹಾಕಿ ಕುಡಿಯಿರಿ.
* ಒಂದು ಚಮಚ ಚಕ್ಕೆಯ ಪುಡಿಯನ್ನ ಒಂದು ಚಮಚ ಜೇನುತುಪ್ಪ ಸೇರಿಸಿ ಬೆಳಗ್ಗೆ ಸೇವಿಸಿ.
* ವಿಟಮಿನ್ ಬಿ, ವಿಟಮಿನ್ ಬಿ6, ವಿಟಮಿನ್ ಬಿ12, ಹೆಚ್ಚಾಗಿರುವ ಆಹಾರಗಳನ್ನ ಸೇವಿಸಿ. ಕರಿದ ತಿಂಡಿಗಳನ್ನ ಕಡಿಮೆ ತಿನ್ನಿ.

Comments are closed.