ಹವಾ ನಿಯಂತ್ರಕವು (ಏರ್ ಕಂಡೀಷನರ್) ಆರಾಮ ಮತ್ತು ಸಂಪೂರ್ಣ ಐಷಾರಾಮಿಗೆ ಪರ್ಯಾಯ ಪದವಾಗಿದೆ. ಇತ್ತೀಚಿನ ದಿನಗಳಲ್ಲಿ ನಿಮ್ಮ ಮಲಗುವ ಕೋಣೆ, ವಾಸದ ಕೋಣೆ, ಕಚೇರಿ, ಚಲನಚಿತ್ರ ಮಂದಿರಗಳು, ಶೋ ರೂಮ್ಗಳು ಮತ್ತು ಇತರ ಎಲ್ಲ ಸ್ಥಳಗಳು ಹವಾನಿಯಂತ್ರಿತವಾಗಿವೆ. ಹವಾ ನಿಯಂತ್ರಕಗಳು ಈಗಿನ ಜನರ ಜೀವನದಲ್ಲಿ ಬಹಳ ಮುಖ್ಯವಾದ ಭಾಗವಾಗಿದೆ ಮತ್ತು ಅದನ್ನು ಖರೀದಿಸುವ ಹಾಗೂ ಸ್ಥಾಪಿಸುವ ಮೊದಲು ಯಾರು ಸಹ ಅದರ ಅನುಕೂಲ ಹಾಗೂ ಅನಾನುಕೂಲದ ಬಗ್ಗೆ ಯೋಚಿಸುವುದಿಲ್ಲ. ಆದರೆ ಈ ಐಷಾರಾಮಿ ವಸ್ತುವಿನ ಅಡ್ಡಪರಿಣಾಮಗಳ ಬಗ್ಗೆ ನಿಮಗೆ ತಿಳಿದಿದೆಯೇ.? ಈ ಹವಾ ನಿಯಂತ್ರಕಗಳು ಪರಿಸರಕ್ಕೆ ಹಾನಿಮಾಡುವುದನ್ನು ತಪ್ಪಿಸಿ ಹಾಗೂ ನಿಮ್ಮ ದೇಹಕ್ಕೆ ಆಗಬಹುದಾದಂತಹ ಅಡ್ಡಪರಿಣಾಮಗಳನ್ನೂ ಸಹ ತಪ್ಪಿಸಿ. ಹವಾ ನಿಯಂತ್ರಕದಿಂದ ನಿಮ್ಮ ದೇಹದ ಮೇಲೆ ಉಂಟಾಗಬಹುದಾದ ಅಡ್ಡ ಪರಿಣಾಮಗಳು ಇಲ್ಲಿವೆ ನೋಡಿ.
1. ನಿರ್ಜಲೀಕರಣ:
ನೀವು ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಂಡಾಗ ಸಾಮಾನ್ಯವಾಗಿ ನೀವು ನಿರ್ಜಲೀಕರಣಗೊಳ್ಳುತ್ತೀರಿ. ಏಕೆಂದರೆ ಇದು ಕೊಠಡಿಯಲ್ಲಿನ ಎಲ್ಲಾ ತೇವಾಂಶವನ್ನು ಹೀರಿಕೊಂಡು ಕೊಠಡಿಯನ್ನು ತಣ್ಣಗೆ ಹಾಗೂ ಒಣಗಿರುವಂತೆ ಮಾಡುತ್ತದೆ. ಶೀತದಿಂದಾಗಿ ನೀವು ನೀರನ್ನು ಕುಡಿಯುವುದಿಲ್ಲ ಇದರ ಪರಿಣಾಮವಾಗಿ ನಮ್ಮ ದೇಹ ನಿರ್ಜಲೀಕರಣಗೊಳ್ಳುತ್ತದೆ.
2. ತಲೆನೋವು:
ದೀರ್ಘಕಾಲದವರೆಗೆ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಳ್ಳುವುದು ತಲೆನೋವು ಬರುವುದಕ್ಕೆ ಕಾರಣವಾಗಬಹುದು. ನೀವು ಹವಾನಿಯಂತ್ರಿತ ಕೋಣೆಯನ್ನು ಚೆನ್ನಾಗಿ ನಿರ್ವಹಿಸದಿದ್ದರೆ, ನೀವು ಮೈಗ್ರೇನ್ಗೆ ಒಳಗಾಗುವಿರಿ. ಇದರ ಇನ್ನೊಂದು ಕಾರಣವೆಂದರೆ ನಿರ್ಜಲೀಕರಣ. ಹೌದು, ನಿರ್ಜಲೀಕರಣವು ಸಹ ತಲೆನೋವು ಬರುವುದಕ್ಕೆ ಒಂದು ಕಾರಣವಾಗಿದೆ, ಜನರು ಸಾಮಾನ್ಯವಾಗಿ ಇದನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ.
3. ಒಣ ಚರ್ಮ:
ದೀರ್ಘಕಾಲದವರೆಗೆ ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತುಕೊಳ್ಳುವುದರಿಂದ ಶುಷ್ಕ ಮತ್ತು ಮಂದ ಚರ್ಮಕ್ಕೆ ಕಾರಣವಾಗಬಹುದು. ಹವಾ ನಿಯಂತ್ರಕ ಕೊಠಡಿಯಲ್ಲಿನ ಎಲ್ಲಾ ತೇವಾಂಶವನ್ನು ಹೀರಿಕೊಳ್ಳುತ್ತದೆ. ಹಾಗಾಗಿ ನೀವು ಮಂದವಾದ, ಒಣ ಮತ್ತು ಒರಟಾದ ಚರ್ಮವನ್ನು ಹೊಂದುತ್ತೀರಿ.
4. ಅಲರ್ಜಿ:
ನಿಯಮಿತವಾಗಿ ಹವಾನಿಯಂತ್ರಕವನ್ನು ಸ್ವಚ್ಛಗೊಳಿಸದಿದ್ದರೆ ಅಲರ್ಜಿಗಳಿಗೆ ಕಾರಣವಾಗಬಹುದು. ಗಾಳಿಯು ಕೊಠಡಿಯಲ್ಲಿಯೇ ಶೇಖರಣೆಯಾಗಿ ಎಲ್ಲಾ ಧೂಳು ಮತ್ತು ಬ್ಯಾಕ್ಟೀರಿಯಾಗಳು ಇಡೀ ಕೋಣೆಯಲ್ಲಿ ಪ್ರಸಾರವಾಗುತ್ತವೆ ಹಾಗೂ ಚರ್ಮದ ಸೋಂಕು, ಅಲರ್ಜಿಗಳು, ಚರ್ಮ ಕೆಂಪಾಗುವಿಕೆ ಮತ್ತು ತುರಿಕೆಗೆ ಕಾರಣವಾಗಬಹುದು.
5. ಆಯಾಸ:
ಕೆಲಸದ ಸ್ಥಳದಲ್ಲಿ ತೀವ್ರತರವಾದ ಹವಾನಿಯಂತ್ರಕ ಕೊಠಡಿಗಳಲ್ಲಿ ಕೆಲಸ ಮಾಡುವ ಜನರು ಆಯಾಸ, ಉಸಿರಾಟದ ಸಮಸ್ಯೆ ಮತ್ತು ದೀರ್ಘಕಾಲದ ತಲೆನೋವನ್ನು ಅನುಭವಿಸುತ್ತಾರೆ. ಇದರ ಜೊತೆಗೆ ಶೀತ, ಕೆಮ್ಮು ಮತ್ತು ಜ್ವರಕ್ಕೆ ಒಳಗಾಗಬಹುದು.
Comments are closed.