ಕರಾವಳಿ

ಬೈಂದೂರಿನ ಉಪ್ಪುಂದದಲ್ಲಿ ಇಲೆಕ್ಟ್ರಿಕಲ್ ಅಂಗಡಿಗೆ ಬೆಂಕಿ: 15 ಲಕ್ಷಕ್ಕೂ ಅಧಿಕ ನಷ್ಟ

Pinterest LinkedIn Tumblr

ಕುಂದಾಪುರ: ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಇಲೆಕ್ಟ್ರಿಕಲ್ ಅಂಗಡಿಯಲ್ಲಿ ಬೆಂಕಿ ಆಕಸ್ಮಿಕವಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ನಷ್ಟವಾದ ಘಟನೆ ನಡೆದಿದೆ.

ರಾಷ್ಟ್ರೀಯ ಹೆದ್ದಾರಿ ಸಮೀಪವೇ ಇದ್ದ ಈ ಆನೆಗಣಪತಿ ಇಲೆಕ್ಟ್ರಿಕಲ್ ಅಂಗಡಿ ಸುರೇಶ್ ಪೂಜಾರಿ ಎನ್ನುವರಿಗೆ ಸೇರಿದ್ದಾಗಿದ್ದು ಬೆಳಿಗ್ಗೆ ಕಾಣಿಸಿಕೊಂಡ ಬೆಂಕಿಯ ಕೆನ್ನಾಲಿಗೆಗೆ ಹತ್ತಿರವಿದ್ದ ಅಂಗಡಿಗಳಿಗೂ ಬೆಂಕಿ ವ್ಯಾಪಿಸಿದೆ. ಇಲೆಕ್ಟ್ರಿಕಲ್ ಅಂಗಡಿಯಲ್ಲಿದ್ದ ಎಲ್ಲ ವಸ್ತುಗಳು ಸುಟ್ಟು ಕರಕಲಾಗಿದ್ದು ಹದಿನೈದು ಲಕ್ಷಕ್ಕೂ ಅಧಿಕ ಅಂದಾಜು ನಷ್ಟ ಸಂಭವಿಸಿದೆ. ಶಾರ್ಟ್ ಸರ್ಕ್ಯುಟ್ ನಿಂದ ಬೆಂಕಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಸ್ಥಳಕ್ಕೆ ಕುಂದಾಪುರ ಅಗ್ನಿಶಾಮಕ ದಳ ದೌಡಾಯಿಸಿ ಸ್ಥಳೀಯರ ಸಹಕಾರದಿಂದ ಬೆಂಕಿ ನಂದಿಸುವ ಕಾರ್ಯಚರಣೆ ಮಾಡಿದ ಬಳಿಕ ಬೆಂಕಿ ಹತೋಟಿಗೆ ಬಂದಿದೆ.

Comments are closed.