ಕರಾವಳಿ

ಆಗಸ್ಟ್ 5 : ಹೆದ್ದಾರಿಯ ಅವ್ಯವಸ್ಥೆ ಖಂಡಿಸಿ ಹಾಗೂ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ “ತಲಪಾಡಿ ಚಲೋ” – ಪೂರ್ವಭಾವಿ ಸಭೆ

Pinterest LinkedIn Tumblr

ಮಂಗಳೂರು : ಪಂಪ್ ವೆಲ್ – ತೊಕ್ಕೊಟ್ಟು ಹಾಗೂ ತಲಪಾಡಿ ರಾಷ್ಟ್ರೀಯ ಹೆದ್ದಾರಿಯ ದುರವಸ್ಥೆಯ ವಿರುದ್ಧ ಹಾಗೂ ಸರ್ವಿಸ್ ರಸ್ತೆಗಳನ್ನು ತಕ್ಷಣ ಪೂರ್ಣಗೊಳಿಸಲು ಒತ್ತಾಯಿಸಿ ಮತ್ತು ಆಕ್ರಮ ಟೋಲ್ ಸಂಗ್ರಹ ಸ್ಥಗಿತಕ್ಕೆ ಆಗ್ರಹಿಸಿ ಡಿವೈಎಫ್‌ಐ ನೇತೃತ್ವದಲ್ಲಿ ಆಗಸ್ಟ್ ೫ರಂದು ತೊಕ್ಕೊಟ್ಟಿನಿಂದ ತಲಪಾಡಿಯವರೆಗೆ “ತಲಪಾಡಿ ಚಲೋ” ಕಾಲ್ನಡಿಗೆ ಜಾಥವನ್ನು ಹಮ್ಮಿಕೊಳ್ಳಲಾಗಿದ್ದು, ಇದರ ಬಗ್ಗೆ ಊರ ಪ್ರಮುಖರ ಸಭೆ ಶುಕ್ರವಾರ ತಲಪಾಡಿಯ ಕೆಸಿ ರೋಡ್ ನಲ್ಲಿ ನಡೆಯಿತು.

ಡಿವೈಎಫ್‌ಐ ಉಳ್ಳಾಲ ವಲಯ ಅಧ್ಯಕ್ಷರಾದ ಜೀವನ್ ರಾಜ್ ಕುತ್ತಾರ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಸಭೆಯಲ್ಲಿ ಕೆ.ಸಿ ರೋಡ್ DYFI ಮುಖಂಡರಾದ ಅಶ್ರಫ್ ಮಂಜ್ರಾಬಾದ್, ಕಾರ್ಮಿಕ‌ ಮುಖಂಡ ನಾರಾಯಣ ತಲಪಾಡಿ, ಪಂಜಳ ಮಸೀದಿಯ ಮಾಜಿ ಅಧ್ಯಕ್ಷರಾದ ಅಬ್ದುಲ್ ಖಾದರ್, ಸಾಮಾಜಿಕ ಮುಖಂಡರಾದ ಮುನ್ನೂರು ಮೂಸಬ್ಬ, ಅಬ್ದುಲ್ಲ ಕೈರಂಗಳ, ಹಮೀದ್ ಉಚ್ಚಿಲ್ ಕೆ.ಸಿ ನಗರ, ಮೊಹಿದ್ದಿನ್ ಉಚ್ಚಿಲ್ ಮುಂತಾದವರು ಉಪಸ್ಥಿತರಿದ್ದರು.

Comments are closed.