ಕರಾವಳಿ

ಚಂದ್ರಗ್ರಹಣ ಹಿನ್ನೆಲೆ: ಕೊಲ್ಲೂರು, ಆನೆಗುಡ್ಡೆ ದೇವಸ್ಥಾನದಲ್ಲಿ ಪೂಜೆ, ಅನ್ನಪ್ರಸಾದ ವ್ಯವಸ್ಥೆಯಲ್ಲಿ ಬದಲಾವಣೆ

Pinterest LinkedIn Tumblr

ಕುಂದಾಪುರ: ಸಂಪೂರ್ಣ ಚಂದ್ರಗ್ರಹಣದ ಹಿನ್ನೆಲೆ ಕುಂದಾಪುರ ತಾಲೂಕಿನ ಪ್ರಸಿದ್ಧ ದೇವಸ್ಥಾನಗಳಲ್ಲಿ ಪೂಜಾ ಕೈಂಕರ್ಯಗಳು, ಅನ್ನಪ್ರಸಾದ ಊಟದಲ್ಲಿ ಬದಲಾವಣೆಗಳು ನಡೆಯಲಿದೆ.

ಕೊಲ್ಲೂರು ಮೂಕಾಂಬಿಕೆ ಸನ್ನಿಧಿ….
ಪ್ರಸಿದ್ಧ ದೇವಸ್ಥಾನವಾದ ಕೊಲ್ಲೂರು ಶ್ರೀ ಮೂಕಾಂಬಿಕೆ ಕ್ಷೇತ್ರದಲ್ಲಿ ಬೆಳಿಗ್ಗೆನಿಂದಲೂ ಎಂದಿನಂತೆ ಪೂಜಾಕೈಂಕರ್ಯಗಳು ನಡೆಯಲಿದ್ದು ಮದ್ಯಾಹ್ನ ಅನ್ನಪ್ರಸಾದ ಸೇವೆಯೂ ಇದೆ. ಆದರೇ ರಾತ್ರಿ ಅನ್ನ ಸಂತರ್ಪಣೆ ಇಲ್ಲ. ಬದಲಾಗಿ ಸಂಜೆ 7.30 ರ ಒಳಗಾಗಿ ಲಘು ಉಪಹಾರ ವ್ಯವಸ್ಥೆ ಮಾಡಲಾಗಿದೆ. ಇನ್ನು ಧಾರ್ಮಿಕ ಸೇವೆಗಳು ಎಂದಿನಂತೆ ನಡೆಯಲಿದೆ. ಗ್ರಹಣ ಸ್ಪರ್ಷ ಕಾಲದಿಂದ ಬಿಡುವಿನಕಾಲದವರೆಗೂ ದೇವಸ್ಥಾನ ತೆರದಿರಲಿದ್ದು ಪೂಜೆ, ಜಪ-ತಪಗಳು, ಅಭಿಷೇಕ ನಡೆಯಲಿದೆ. ಗ್ರಹಣ ಬಿಡುವಿನ ಬಳಿಕ ವಿಶೇಷ ಪೂಜೆ, ಆರತಿ ನಡೆಯಲಿದೆ.

ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನ..
ಬೆಳಿಗ್ಗೆ ಪ್ರಾಥಃಕಾಲದಲ್ಲಿ ದೇವಸ್ಥಾನದಲ್ಲಿ ಪೂಜೆ ಆರಂಭಗೊಳ್ಳಲಿದೆ. ನಿತ್ಯ ಮಧ್ಯಾಹ್ನ 12.45ಕ್ಕೆ ನಡೆಯುವ ಮಹಾಪೂಜೆ ಕಾರ್ಯವು 11 ಗಂಟೆಗೆ ನಡೆಯಲಿದೆ. ನಿತ್ಯ 2.30 ರವರೆಗೆ ನಡೆಯುವ ಮಧ್ಯಾಹ್ನದ ಅನ್ನ ಪ್ರಸಾದವು ನಾಳೆ ದಿನ 1 ಗಂಟೆಗೆ ಮುಕ್ತಾಯಗೊಳ್ಳಲಿದೆ. ಮಧ್ಯಾಹ್ನದ ಬಳಿಕ ದೇವಸ್ಥಾನದಲ್ಲಿ ಯಾವುದೇ ಸೇವಾ ಕಾರ್ಯ ನಡೆಯುವುದಿಲ್ಲ. ಬದಲಾಗಿ ಬರುವ ಭಕ್ತರಿಗೆ ಕೇವಲ ತೀರ್ಥ, ಪ್ರಸಾದ ನೀಡಲಾಗುತ್ತೆ. ರಾತ್ರಿ 8.30 ಕ್ಕೆ ನಡೆಯುವ ರಾತ್ರಿ ಪೂಜೆ 6 ಗಂಟೆಗೆ ನಡೆಯಲಿದ್ದು ಮೂರ್ತಿಯ ಅಲಂಕಾರವಿರುವುದಿಲ್ಲ. ಇನ್ನು ಗ್ರಹಣ ಕಾಲದಿಂದ ಗ್ರಹಣ ಬಿಡುವಿನ ವೇಳೆಯ ತನಕ ದೇವಸ್ಥಾನ ತೆರೆದಿದ್ದು ಪೂಜಾಕೈಂಕರ್ಯ ನಡೆಯಲಿದೆ.

ಕೋಟೇಶ್ವರ ಕೋಟಿಲಿಂಗೇಶ್ವರ ದೇವಸ್ಥಾನ..
ಪ್ರಸಿದ್ಧ ಕೋಟೇಶ್ವರ ಶ್ರೀ ಕೋಟಿಲಿಂಗೇಶ್ವರ ದೇವಸ್ಥಾನದಲ್ಲಿ ಬೆಳಿಗ್ಗೆನಿಂದ ಸಂಜೆಯವರೆಗೂ ನಿತ್ಯದಂತೆ ಪೂಜೆ, ಸೇವೆಗಳು ನಡೆಯಲಿದೆ. ಗ್ರಹಣ ಸ್ಪರ್ಷ ಕಾಲದಿಂದ ಗ್ರಹಣ ಬಿಡುವಿನ ತನಕ ದೇವಸ್ಥಾನ ತೆರದಿದ್ದು ಪೂಜೆ, ಅಭಿಷೇಕ ನಡೆಯಲಿದೆ. ಗ್ರಹಣ ಬಿಡುವಿನ ಬಳಿಕ ವಿಶೇಷ ಪೂಜೆ ನಡೆಯುತ್ತೆ. ಗ್ರಹಣ ಬಿಡುವಿನ ಬಳಿಕ ದೇವಸ್ಥಾನದ ಕೋಟಿತೀರ್ಥ ಪುಷ್ಕರಣಿಯಲ್ಲಿ ಭಕ್ತರು ಸ್ನಾನ ಮಾಡಿ ದೇವರ ದರ್ಶನ ಪಡೆಯುವುದು ಪ್ರತಿ ಗ್ರಹಣದ ಸಂದರ್ಭ ಭಕ್ತರು ಆಚರಿಸುವ ಪದ್ದತಿ.

Comments are closed.