ಕರಾವಳಿ

ವಂಡ್ಸೆಯಲ್ಲಿ ಮತ್ತೆ ವಿಕೃತ ಚೋರನ ಉಪಟಳ; ತಡರಾತ್ರಿಯವರೆಗೂ ಗ್ರಾಮಸ್ಥರ ಹುಡುಕಾಟ!

Pinterest LinkedIn Tumblr

ಕುಂದಾಪುರ: ವಂಡ್ಸೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಡಕೆಕೂಡ್ಲು ಎಂಬಲ್ಲಿ ಮನೆಗೆ ವಿಕೃತ ಚೋರನೊಬ್ಬ ಮತ್ತೆ ನುಗ್ಗಿದ್ದಾನೆ.

ಈ ಭಾಗದಲ್ಲಿ ಕಳೆದ ಒಂದೆರಡು ತಿಂಗಳಲ್ಲಿ ಆರು ಮನೆಗಳಲ್ಲಿ ಕಳವು ಪ್ರಕರಣ ನಡೆದಿದ್ದು, ಮಹಿಳೆಯರ ಒಳಉಡುಪುಗಳನ್ನು ಮಾತ್ರ ಕಳವುಗೈಯಲಾಗಿದೆ. ಈ ಸಂಬಂಧ ಗ್ರಾಮಸ್ಥರು ಕೊಲ್ಲೂರು ಪೊಲೀಸ್ ಠಾಣೆ ಹಾಗೂ ಗ್ರಾಪಂಗೆ ದೂರು ನೀಡಿದ್ದಾರೆ. ಕಳವು ಕೃತ್ಯ ಒಬ್ಬನೇ ವ್ಯಕ್ತಿಯಿಂದ ನಡೆದಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ನಿಗಾ ವಹಿಸಿದ್ದು ಗ್ರಾಮಸ್ಥರ ವಿಶೇಷ ಸಭೆ ನಡೆಸಿದರೂ ಕೂಡ ಇಂದು ಮತ್ತೆ ಆತ ಮನೆಯೊಂದಕ್ಕೆ ನುಗ್ಗಿ ಒಂಟಿಯಾಗಿದ್ದ ಯುವತಿಗೆ ಬೆದರಿಸಿದ್ದಾನೆ.

ಸದ್ಯದಲ್ಲೇ ಆತನನ್ನು ಹಿಡಿಯಲು ಗ್ರಾಮಸ್ಥರು ಬಲೆ ಬೀಸಿದ್ದಾರೆ. ರಾತ್ರಿಯವರೆಗೂ ಆತನ ಹುಡುಕಾಟ ನಡೆದಿದೆ.

Comments are closed.