ಕರಾವಳಿ

ಯೆಯ್ಯಾಡಿ ಜಂಕ್ಷನ್‌ನಲ್ಲಿ ಕಾರಿಗೆ ಬೈಕ್ ಢಿಕ್ಕಿ : ಮಹಿಳೆ ಸೇರಿದಂತೆ ಇಬ್ಬರಿಗೆ ಗಾಯ

Pinterest LinkedIn Tumblr

ಮಂಗಳೂರು: ನಗರದ ಯೆಯ್ಯಾಡಿ ಜಂಕ್ಷನ್‌ನಲ್ಲಿ ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸೇರಿದಂತೆ ಇಬ್ಬರು ಗಾಯಗೊಂಡಿದ್ದಾರೆ.

ಬೈಕೊಂದು ಕಾರಿಗೆ ಢಿಕ್ಕಿ ಹೊಡೆದು ಉಂಟಾದ ಅಪಘಾತದಲ್ಲಿ ಬೈಕ್ ಸವಾರ ಮೂಸಾ ಮುನೀಲ್‌ ಮತ್ತು ಕಾರಿನಲ್ಲಿದ್ದ ಮಹಿಳೆ ದಯಾ ರೇಖಾ (49) ಅವರು ಗಾಯಗೊಂಡಿದ್ದಾರೆ. ಕಾರು ಚಾಲಕ ಸುರೇಶ್‌ ಭಂಡಾರಿ ಅಪಾಯದಿಂದ ಪಾರಾಗಿದ್ದಾರೆ. ಮೂಸಾ ಉಳ್ಳಾಲದ ನಿವಾಸಿಗಿದ್ದು, ವಿದ್ಯಾರ್ಥಿ ಎನ್ನಲಾಗಿದೆ.

ಬಂಟ್ವಾಳ ತಾಲೂಕು ಕಳ್ಳಿಗೆಯ ಸುರೇಶ್‌ ಭಂಡಾರಿ ಅವರು ಪತ್ನಿ ಜತೆ ಕಾರಿನಲ್ಲಿ ಯೆಯ್ನಾಡಿಯಲ್ಲಿರುವ ಅತ್ತೆ ಮನೆಗೆ ಹೊರಟಿದ್ದು, ಸಂಜೆ 4 ಗಂಟೆ ವೇಳೆಗೆ ಯೆಯ್ನಾಡಿ ಜಂಕ್ಷನ್‌ನಲ್ಲಿ ಬಲ ಬದಿಗೆ ತಿರುಗಿಸುತ್ತಿದ್ದಾಗ ಬೋಂದೆಲ್‌ ಕಡೆಯಿಂದ ಕೆಪಿಟಿ ಕಡೆಗೆ ಅತಿ ವೇಗದಲ್ಲಿ ಮೂಸಾ ಮುನೀಲ್‌ ಚಲಾಯಿಸಿಕೊಂಡು ಬಂದ ಬೈಕ್‌ ಕಾರಿನ ಬಾಗಿಲಿಗೆ ಢಿಕ್ಕಿ ಹೊಡೆದಿತ್ತು. ಪರಿಣಾಮ ಮೂಸಾ ಕಾರಿನ ಮೇಲ್ಗಡೆ ಎಸೆಯಲ್ಪಟ್ಟಿದ್ದರು.

ಮೂಸಾ ಮುನೀಲ್ ಹಾಗೂ ದಯಾ ರೇಖಾ ಅವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಈ ಬಗ್ಗೆ ಸಂಚಾರಿ ಪೂರ್ವ ಠಾಣಾ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Comments are closed.