ಕರಾವಳಿ

ಶಕ್ತಿನಗರದ “ಪ್ರಕೃತಿ ಮಹಿಳಾ ಮಂಡಳಿ”ಯ ಕಾರ್ಯಚಟುವಟಿಕೆಗಳ ಬಗ್ಗೆ ಶಾಸಕ ವೇದವ್ಯಾಸ ಕಾಮತ್ ಮೆಚ್ಚುಗೆ

Pinterest LinkedIn Tumblr

ಮಂಗಳೂರು : ಶಕ್ತಿನಗರದ ಪ್ರಕೃತಿ ಮಹಿಳಾ ಮಂಡಳಿ ಇದರ ಆಶ್ರಯದಲ್ಲಿ ನಡೆದ ಆಟಿಡೊಂಜಿ ಕೂಟ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಉದ್ಘಾಟಿಸಿದರು.

ಈ ವೇಳೆ ಮಾತನಾಡಿದ ಶಾಸಕರು, ಕಳೆದ 24 ವರ್ಷಗಳಿಂದ ಪ್ರಕೃತಿ ಮಹಿಳಾ ಮಂಡಳಿ ಸಂಸ್ಥೆ ಸಾಮಾಜಿಕ ಕಳಕಳಿಯಿಂದ ತನ್ನನ್ನು ತಾನು ತೊಡಗಿಸಿಕೊಂಡು ಬಂದಿದೆ. ಮನೆಯ ಸಮಸ್ಯೆಯ ನಡುವೆ ಸಾಮಾಜಿಕವಾಗಿ ತೊಡಗಿಸಿಕೊಳ್ಳುವುದು ಸುಲಭದ ಮಾತಲ್ಲ. ಆದರೆ ಪ್ರಕೃತಿ ಮಹಿಳಾ ಮಂಡಳಿ ಸಂಸ್ಥೆ ತನ್ನ ಸಾಮಾಜಿಕ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿರುವುದಕ್ಕೆ ಹೆಮ್ಮೆಯಾಗುತ್ತದೆ ಎಂದು ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಹೆಣ್ಣು ಸಹನಾ ಮೂರ್ತಿ, ಮಮತಾ ಮೂರ್ತಿ, ಕರುಣಾ ಮೂರ್ತಿ ಎನ್ನುವ ಮಾತಿದೆ. ಹಾಗೆಯೇ ಧರ್ಮಕ್ಕೆ ಸಂಕಷ್ಟ ಬಂದಾಗ ವ್ಯಾಘ್ರವಾಹಿನಿಯಾಗಿ, ಶಸ್ತ್ರಧಾರಿಣಿಯಾಗಿ ದುಷ್ಟಸಂಹಾರ ಮಾಡಬಲ್ಲಳು ಎನ್ನುವುದನ್ನು ತಾಯಿ ದುರ್ಗಾದೇವಿಯ ಚರಿತ್ರೆಯಿಂದ ಅರಿಯಬಹುದು ಎಂದು ಹೇಳಿದರು.

ನಾವು ಭಾರತೀಯರು ಜಲ, ಭೂಮಿ, ಪ್ರಕೃತಿ ಮುಂತಾದವುಗಳನ್ನೆಲ್ಲಾ ಸ್ತ್ರೀ ಎನ್ನುವುದು ಇದೇ ಕಾರಣಕ್ಕಾಗಿ, ನಾವು ನಮ್ಮ ಮಣ್ಣ ಕಣಕಣದಲ್ಲಿಯೂ ತಾಯಿ ಭಾರತೀಯ ಪ್ರತಿರೂಪವನ್ನು ಕಾಣುತ್ತೇವೆ ಎಂದು ಹೇಳಿದ ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕೃತಿ ಮಹಿಳಾ ಮಂಡಳಿಗೆ ಮತ್ತಷ್ಟು ಸಮಾಜಮುಖಿ ಕಾರ್ಯದಲ್ಲಿ ಭಾಗವಹಿಸುವ ಶಕ್ತಿ ಭಗವಂತ ನೀಡಲಿ ಎಂದು ಹಾರೈಸಿದರು.

ಸಭೆಯಲ್ಲಿ ಅಖಿಲಾ ಆಳ್ವ, ಪ್ರವೀಣ್ ಕಂದಾವರ, ವಿಜಯಲಕ್ಷ್ಮಿ ಬಿ ಶೆಟ್ಟಿ, ಚಂಚಲ ತೇಜೋಮಯ, ದೇವಕಿ ಅಚ್ಚುತ, ಪ್ರೇಮಾ ಕುಮಾರಿ, ಸುಮತಿ ಯಾದವ್, ದೇವಾನಂದ, ಆಶಾಲತಾ, ಮೀರಾ ಕರ್ಕೇರಾ, ಪ್ರಸಾದ್, ಶಕಿಲಾ ಕಾವಾ, ಸುಮನಾ ಶರಣ್, ತಿಲೋತ್ತಮ ಮತ್ತು ಪ್ರಕೃತಿ ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Comments are closed.