ಕರಾವಳಿ

ಶೀರೂರು ಶ್ರೀ ಸಾವು ಪ್ರಕರಣದಲ್ಲಿ ಯಾರನ್ನೂ ವಶಕ್ಕೆ ಪಡೆದಿಲ್ಲ, ತನಿಖೆ ನಡೆಯುತ್ತಿದೆ: ಉಡುಪಿ ಎಸ್ಪಿ

Pinterest LinkedIn Tumblr

ಉಡುಪಿ: ಶೀರೂರು ಸ್ವಾಮೀಜಿ ಸಂಶಯಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಾಮೀಜಿ ಸಹೋದರ ನೀಡಿದ ದೂರಿನನ್ವಯ ತನಿಖೆ ನಡೆಯುತ್ತಿದೆ ಎಂದು ಉಡುಪಿಯಲ್ಲಿ ಎಸ್ಪಿ ಲಕ್ಷ್ಮಣ್ ಬಿ. ನಿಂಬರಗಿ ಹೇಳಿದ್ದಾರೆ.

ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಸ್ವಾಮೀಜಿ ಪೂರ್ವಾಶ್ರಮದ ಸಹೋದರ ಲಾಥವ್ಯ ಆಚಾರ್ಯ ದೂರು ದಾಖಲಿಸಿದ ಹಿನ್ನೆಲೆ ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ. ಮರಣೋತ್ತರ ಪರೀಕ್ಷೆ, ಎಫ್ಎಸ್ಎಲ್ ವರದಿ ಬಳಿಕ ಏನಾಗುತ್ತೆ ನೋಡಬೇಕು. ಈವರೆಗೂ ಯಾರನ್ನೂ ವಶಕ್ಕೆ ಪಡೆದಿಲ್ಲ. ಸಿಆರ್ಪಿಸಿ 174c ಸೆಕ್ಷನ್ ಅನ್ವಯ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದೇವೆ. ತನಿಖೆಗೆ ಬೇಕಾದ ಜಾಗವನ್ನು ಮಾತ್ರ ನಮ್ಮ ಸುಪರ್ದಿಗೆ ಪಡೆದಿದ್ದೇವೆ

ದಿನನಿತ್ಯದ ಪೂಜೆ-ಪುನಸ್ಕಾರ ಹಾಗೂ ಅಲ್ಲೇ ಇದ್ದ ಸಿಬ್ಬಂದಿಗಳಿಗೆ ಯಾವುದೇ ತೊಂದರೆ ಇಲ್ಲ. ಮೂಲಮಠಕ್ಕೆ ಸಾರ್ವಜನಿಕರ ಪ್ರವೇಶವನ್ನು ನಿರ್ಬಂಧಿಸಿದ್ದೇವೆ ಎಂದು ಎಸ್ಪಿ ಹೇಳಿದ್ದಾರೆ.

Comments are closed.