ಕರಾವಳಿ

ಶೀರೂರು ಶ್ರೀ ಸಾವಿನ ಬಗ್ಗೆ ಮುಂದುವರಿದ ತನಿಖೆ; ಶ್ರೀಗಳ ಆಪ್ತರಾಗಿದ್ದ ಮಹಿಳೆ ಪೊಲೀಸ್ ವಶಕ್ಕೆ

Pinterest LinkedIn Tumblr

ಉಡುಪಿ: ಕಳೆದೆರಡು ದಿನಗಳ ಹಿಂದೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ವಿಧಿವಶರಾದ ಶೀರೂರು ಮಠದ ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳ ಸಾವಿನ ಕುರಿತಾದ ತನಿಖೆ ಮುಂದುವರಿದಿದ್ದು ಪ್ರಕರಣಕ್ಕೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಶೀರೂರು ಶ್ರೀಗಳ ದೇಹದಲ್ಲಿ ವಿಷದ ಅಂಶಗಳು ಪತ್ತೆಯಾಗಿತ್ತು. ಈ ಪ್ರಕರಣದ ಕುರಿತಾದಂತೆ ಹಲವಾರು ಸಂಶಯಗಳಿದ್ದು, ಸೂಕ್ತ ತನಿಖೆ ನಡೆಸಬೇಕೆಂದು ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯ ಹಿರಿಯಡ್ಕ ಪೊಲೀಸರಿಗೆ ದೂರು ನೀಡಿದ್ದು ಪ್ರಕರಣದ ಸಮಗ್ರ ತನಿಖೆಗೆ ಹಲವರು ಒತ್ತಾಯಿಸಿದ್ದರು.

ಇದೀಗ ಈ ಕುರಿತಾದಂತೆ ಹೊಸ ತಿರುವು ದೊರಕಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಬ್ರಹ್ಮಾವರ ಮೂಲದ ಮಹಿಳೆಯೋರ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೂಲತಃ ಶಿರಸಿಯವರಾದ ಓರ್ವ ಮಹಿಳೆಯು ಬ್ರಹ್ಮಾವರದಲ್ಲಿ ವಾಸವಿದ್ದು, ಪ್ರತೀ ಸೋಮವಾರದಂದು ಮೂಲಮಠಕ್ಕೆ ಆಗಮಿಸಿ ತಮ್ಮ ತಾಯಿಯೊಂದಿಗೆ ಬಂದು ಉಳಿಯುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಮಠದ ಉಸ್ತುವಾರಿಯನ್ನೂ ಅವರೇ ನೊಡಿಕೊಂಡು ಅಲ್ಲಿನ ಕೆಲಸಗಾರರಿಗೆ ಸಂಬಳವನ್ನೂ ವಿತರಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತಾದಂತೆ ಸಿಸಿಟಿವಿಯಲ್ಲೂ ಅವರು ಬಂದ ಕುರಿತು ದಾಖಲೆಗಳು ಲಭ್ಯವಾಗಿದೆ. ವಿಚಾರಣೆ ನಡೆಸಲಾಗುತ್ತಿರುವ ಮಹಿಳೆ ಶೀರೂರು ಲಕ್ಷ್ಮೀವರ ತೀರ್ಥ ಸ್ವಾಮೀಜಿಗಳಿಗೆ ಊಟ- ಉಪಹಾರ ತಂದುಕೊಡುತ್ತಿದ್ದರು. ಮಠದ ಆಪ್ತರೊಬ್ಬರ ಮೂಲಕ ಶ್ರೀಗಳಿಗೆ ಈ ಮಹಿಳೆಯ ಪರಿಚಯವಾಗಿತ್ತು.

ಸದ್ಯ ಈ ಬಗ್ಗೆ ತನಿಖೆ ನಡೆಯುತ್ತಿದೆ.

Comments are closed.