ಕರಾವಳಿ

ಪಂಪವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ವಿಳಂಭ ವಿರುದ್ಧ ಯುವ ಜೆಡಿಎಸ್‌ನಿಂದ ಪ್ರತಿಭಟನೆ

Pinterest LinkedIn Tumblr

ಮಂಗಳೂರು : ಪಂಪವೆಲ್ ಹಾಗೂ ತೊಕ್ಕೊಟ್ಟು ಮೇಲ್ಸೇತುವೆ ಕಾಮಗಾರಿ ವಿಳಂಭವಾಗುತ್ತಿರುವ ವಿರುದ್ಧ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳದ ವತಿಯಿಂದ ಗುರುವಾರ ಪಂಪವೆಲ್ ವೃತ್ತದ ಬಳಿ ಬೃಹತ್ ಪ್ರತಿಭಟನೆ ನಡೆಯಿತು.

ಪ್ರತಿಭಟನೆಯ ನೇತ್ರತ್ವ ವಹಿಸಿದ್ದ ದಕ್ಷಿಣ ಕನ್ನಡ ಜಿಲ್ಲಾ ಯುವ ಜನತಾದಳ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ ಮಾತನಾಡಿ, ಜಿಲ್ಲೆಯ ಸಂಸದರು ಯಾವುದೇ ಅಭಿವೃದ್ಧಿ ಕೆಲಸವನ್ನು ಮಾಡದೆ ಕೇವಲ ಸುಳ್ಳು ಆಶ್ವಾಸನೆ ಮುಖಾಂತರ ಜನರಿಗೆ ಕಣ್ಣಿಗೆ ಮೋಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ರಾಷ್ಟ್ರೀಯ ಹೆದ್ದಾರಿ 7-8 ವರ್ಷಗಳಿಂದ ಕಾಮಗಾರಿ ನಡೆಯುತ್ತಿದ್ದು ಇಲ್ಲಿಯವರೆಗೂ ಕೂಡ ಪೂರ್ಣಗೊಳ್ಳದೇ ಅನೇಕ ಸಾವು ನೋವಿಗೆ ಕಾರಣವಾಗಿ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಜಿಲ್ಲಾಧ್ಯಕ್ಷ ಬಿ.ಮಹಮ್ಮದ್ ಕುಂಞ ವಿಟ್ಲ, ಈ ಮೇಲ್ಸೇತುವೆಯಿಂದ ಅನೇಕ ಸಾವುಗಳು ಸಂಭವಿಸಿದ್ದು ಇದಕ್ಕೆ ನೇರಹೊಣೆ ಇಲ್ಲಿಯ ಸಂಸದರು ಹಾಗೂ ಕೇಂದ್ರ ಸರ್ಕಾರ ಎಂದು ಆರೋಪಿಸಿದರು.

ಪ್ರತಿಭಟನೆ ಸಂದರ್ಭ ಯುವ ಜನತಾದಳದ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವಿರುದ್ಧ ಮತ್ತು ಸಂಸದರ ವಿರುದ್ಧ ಘೋಷಣೆಗಳನ್ನು ಕೂಗಿದರು.

ಜಿಲ್ಲಾ ಕಾರ್ಯಾಧ್ಯಕ್ಷ ರಾಮ್ ಗಣೇಶ್. ರಾಜ್ಯ ನಾಯಕರುಗಳಾದ ಗೋಪಾಲಕೃಷ್ಣ ಅತ್ತಾವರ. ಫೈಜಲ್. ಜಿಲ್ಲಾ ನಾಯಕರಾದ ಸುಮತಿ ಹೆಗ್ಡೆ.ರಮೇಶ್ ಎಸ್.ಸುಶೀಲ್ ನೋರೋನ. ಶ್ರೀ ನಾಥ್ ರೈ. ರತ್ನಾಕರ್ ಸುವರ್ಣ.ಲತ್ತಿಫ್.ಇಝಾ. ಜಿಲ್ಲಾ ಯುವ ಮಹಾ ಪ್ರಧಾನ ಕಾರ್ಯದರ್ಶಿ ಮಧುಸೂದನ್ ಗೌಡ. ಮಂಗಳೂರು ದಕ್ಷಿಣ ಯುವ ಅಧ್ಯಕ್ಷ ಮಹಮ್ಮದ್ ರಜಾಕ್. ಉತ್ತರ ಅಧ್ಯಕ್ಷ ರತೀಶ್ ಕರ್ಕೇರ. ಜಿಲ್ಲಾ ಯುವ ನಾಯಕರಾದ ಲಿಖಿತ್ ರಾಜ್. ಮಹಮ್ಮದ್ ಆಸೀಫ್. ಹಿತೇಶ್ ರೈ. ಫೈಜಲ್.ಭರತ್ ಹೆಗ್ಡೆ.ಕಿಶೋರ್ ಶೆಟ್ಟಿ.ಶರೀಫ್ ಪುತ್ತೂರು.ಸತ್ಯನಾರಯಣ.ಕಲೀಲ್.ಕಲದಂರ್.ಮುಸಾಪರ್.ಕಲದೀಪ್.ಅನೀಶ್.ಕೌಶಿಕ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Comments are closed.