ಕರಾವಳಿ

ಶಿರೂರು ಶ್ರೀ ಸಾವಿನ ತನಿಖೆಯಾಗಲಿ: ಪೊಲೀಸರಿಗೆ ದೂರು ನೀಡಿದ ಸಹೋದರ: ಮೂರು ದಿನ ಶಿರೂರು ಮಠ ಪೊಲೀಸ್ ವಶಕ್ಕೆ

Pinterest LinkedIn Tumblr

ಉಡುಪಿ: ಶಿರೂರು ಮಠವನ್ನು ಪೊಲೀಸರು ಜುಲೈ 19ರಿಂದ 21ರವರೆಗೆ ತಮ್ಮ ಸುಪರ್ದಿಗೆ ಪಡೆದಿದ್ದು, ಸಾರ್ವಜನಿಕರಿಗೆ ಮಠ ಪ್ರವೇಶಕ್ಕೆ ನಿಷೇಧಿಸಲಾಗಿದೆ. ಶಿರೂರು ಶ್ರೀಗಳಿಗೆ ವಿಷ ಪ್ರಾಶನ ಮಾಡಿಸಲಾಗಿದೆ ಎಂಬುದರ ಬಗ್ಗೆ ಅನುಮಾನಗಳು ವ್ಯಕ್ತವಾಗಿವೆ. ಈ ಹಿನ್ನೆಲೆಯಲ್ಲಿ ಶ್ರೀಗಳ ಪೂರ್ವಾಶ್ರಮದ ಸಹೋದರ ಲಾತವ್ಯ ಆಚಾರ್ಯರು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಆರೋಪಗಳು ಕೇಳಿಬರುತ್ತಿರುವ ಹಿನ್ನೆಲೆಯಲ್ಲಿ ಸಾಕ್ಷ್ಯಾಧಾರ ಪರಿಶೀಲನೆಗಾಗಿ ಪೊಲೀಸರು ಇಂದಿನಿಂದ ಮೂರು ದಿನಗಳ ಮಠದ ಪರಿಶೀಲನೆ ನಡೆಸಲಿದ್ದಾರೆ. ತನಿಖೆಗೆ ತೊಂದರೆ ಆಗದಿರಲಿ ಎಂಬ ಸಾರ್ವಜನಿಕರಿಗೆ ಮಠದ ಪ್ರವೇಶವನ್ನು ನಿರ್ಭಂಧಿಸಲಾಗಿದೆ ಎಂದು ಎಸ್.ಪಿ. ಲಕ್ಷ್ಮಣ್ ನಿಂಬರ್ಗಿ ಮಾಹಿತಿ ನೀಡಿದ್ದಾರೆ.

ಸಾಮೇಲ್ನೋಟಕ್ಕೆ ಶ್ರೀಗಳಿಗೆ ವಿಷಪ್ರಾಶನ ಆದಂತಹ ಸಂಶವಿರುವ ಬಗ್ಗೆ ಕೆಎಂಸಿಯ ವೈದ್ಯರು ಹೇಳಿದ ಹಿನ್ನೆಲೆಯಲ್ಲಿ ತನಿಖೆ ನಡೆಸಬೇಕು. ಇದೊಂದು ಅನುಮಾನಸ್ಪದವಾದ ಸಾವಾಗಿದ್ದು, ಹೀಗಾಗಿ ಈ ಸಾವಿಗೆ ನಿಖರ ಕಾರಣವೇನೆಂದು ನಮಗೆ ಪೊಲೀಸ್ ತನಿಖೆಯ ಮೂಲಕ ತಿಳೀದುಬರಬೇಕು ಅಂತ ದೂರಿನಲ್ಲಿ ಲಾತವ್ಯ ತಿಳಿಸಿದ್ದಾರೆ.

ಮಠವನ್ನು ಸುಪರ್ದಿಗೆ ಪಡೆಯುವ ಪೊಲಿಸರು ಸಾಕ್ಷ್ಯಾಧಾರಗಳನ್ನು ಕಲೆಹಾಕಲಿದ್ದಾರೆ. ಶ್ರೀಗಳ ಖಾಸಗಿ ಕೋಣೆಯ ಬೀಗವನ್ನು ಪಡೆಯಲಿದ್ದು ಅಲ್ಲಿಯೂ ತನಿಖೆ ನಡೆಯಲಿದೆ ಎನ್ನಲಾಗಿದೆ.

Comments are closed.