ಕರಾವಳಿ

ಉಳ್ಳಾಲ ರೈಲ್ವೇ ನಿಲ್ದಾಣದ ಹಳೇ ಕ್ಯಾಂಟೀನ್ ಕಟ್ಟಡದ ಮೇಲ್ಛಾವಣಿ ಕುಸಿತ

Pinterest LinkedIn Tumblr

ಉಳ್ಳಾಲ, ಜುಲೈ. 13: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ಮಂಗಳೂರು ಹೊರವಲಯದ ಉಳ್ಳಾಲ ಹಳೇ ರೈಲ್ವೇ ನಿಲ್ದಾಣದ ಕ್ಯಾಂಟೀನ್ ಕಟ್ಟಡದ ಮೇಲ್ಛಾವಣಿ ಕುಸಿದಿದೆ.

ಸಂಪೂರ್ಣ ಶಿಥಿಲಗೊಂಡ ಪರಿಣಾಮ ಶುಕ್ರವಾರ ಸಂಜೆ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದೆ.ಈ ವೇಳೆ ಸ್ಥಳದಲ್ಲಿ ಯಾರೂ ಇಲ್ಲದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

ಈ ಕಟ್ಟಡವು ಶಿಥಿಲಗೊಂಡಿದ್ದ ಹಿನ್ನೆಲೆಯಲ್ಲಿ ಹೊಸ ನಿಲ್ದಾಣವನ್ನು ನಿರ್ಮಿಸಲಾಗಿತ್ತು. ನಿಲ್ದಾಣದ ಚಟುವಟಿಕೆಗಳೆಲ್ಲವೂ ಹೊಸ ನಿಲ್ದಾಣದಲ್ಲಿಯೇ ನಡೆಯುತ್ತಿದ್ದವು. ಇತ್ತೀಚಿನವರೆಗೆ ಈ ಕಟ್ಟದಲ್ಲಿ  ಕ್ಯಾಂಟೀನೊಂದು ಕಾರ್ಯಾಚರಿಸುತ್ತಿದ್ದು, ಇತ್ತೀಚೆಗೆ ಇದು ಕೂಡ ಹೊಸ ನಿಲ್ದಾಣಕ್ಕೆ ಸ್ಥಳಾಂತರಗೊಂಡಿತ್ತು. ಇಂದು ಸುರಿದ ಭಾರೀ ಗಾಳಿಮಳೆಗೆ ಶಿಥಿಲಗೊಂಡಿದ್ದ ಈ ಕಟ್ಟಡದ ಮೇಲ್ಛಾವಣಿ ಕುಸಿದು ಬಿದ್ದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Comments are closed.