ಕರಾವಳಿ

ಕುದ್ಮುಲ್ ರಂಗರಾವ್ ದಲಿತ ಸಮಾಜವನ್ನು ಕೈ ಹಿಡಿದು ಮೇಲಕ್ಕೆತ್ತಿದ ಮಹಾನ್ ಸಮಾಜ ಸುಧಾರಕ : ಶಾಸಕ ಕಾಮಾತ್

Pinterest LinkedIn Tumblr

ಮಂಗಳೂರು : ವಿದ್ಯೆಯಿಂದ ವಂಚಿತರಾಗಿದ್ದ ದಲಿತ ಸಮಾಜವನ್ನು ಕೈ ಹಿಡಿದು ಮೇಲಕ್ಕೆ ಎತ್ತಿದ ಕೀರ್ತಿ ಸಮಾಜ ಸುಧಾರಕ ಕುದ್ಮುಲ್ ರಂಗರಾವ್ ಅವರಿಗೆ ಸಲ್ಲುತ್ತದೆ ಎಂದು ಮಂಗಳೂರು ನಗರ ದಕ್ಷಿಣ ಶಾಸಕ ಡಿ ವೇದವ್ಯಾಸ ಕಾಮತ್ ಹೇಳಿದ್ದಾರೆ.

ಅವರು ಅತ್ತಾವರದ ಬಾಬುಗುಡ್ಡೆಯಲ್ಲಿರುವ ಕುದ್ಮುಲ್ ರಂಗರಾವ್ ಮೆಮೊರಿಯಲ್ ಟ್ರಸ್ಟ್ ಇದರ ವತಿಯಿಂದ ನಡೆದ ಕುದ್ಮುಲ್ ರಂಗರಾವ್ ಅವರ ಜನ್ಮ ದಿನಾಚರಣೆ ಕಾರ್‍ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.

ಪ್ರಗತಿಗೆ ವಿದ್ಯೆಯೇ ಮೂಲ. ಕಾಸರಗೋಡು ಜಿಲ್ಲೆಯ ಕುದ್ಮುಲ್ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದ ರಂಗರಾವ್ ಅವರ ಪ್ರಖ್ಯಾತಿ ದೇಶ ವಿದೇಶಗಳಿಗೂ ಪಸರಿಸಿ ಅಮೇರಿಕಾದ ಖ್ಯಾತ ಉದ್ಯಮಿ ಹೆನ್ರಿ ಪೋರ್‍ಡ್ , ಜಸ್ಟಿಸ್ ವಿಲ್ಬರ್‍ಟ್, ಡಾ|ಕಾರ್ನಾಡ್ ಮುಂತಾದ ಪ್ರಮುಖರು ಡಿಸಿ‌ಎಂ ಸಂಸ್ಥೆಯನ್ನು ಅಭಿನಂದಿಸುತ್ತಾರೆ ಎಂದರೆ ಆ ಕಾಲದಲ್ಲಿ ರಂಗರಾವ್ ಅವರ ಕಾರ್‍ಯಶೈಲಿ ಹೇಗಿತ್ತು ಮತ್ತು ಸಮಾಜ ಸುಧಾರಣೆ ಹೇಗಿತ್ತು ಎನ್ನುವುದನ್ನು ಚಿಂತಿಸಬಹುದು. ಕುದ್ಮುಲ್ ರಂಗರಾವ್ ಅವರು ನಡೆದ ಹಾದಿಯೇ ನಮ್ಮೆಲ್ಲರಿಗೂ ದಾರಿದೀಪ ಎಂದು ಶಾಸಕರು ಹೇಳಿದರು.

ಬಿ.‌ಆರ್ ಹೃದಯನಾಥ್, ಶ್ಯಾಮ ಕರ್‍ಕೆರಾ, ಶೈಲಜಾ, ಸುಧಾಕರ ಶೆಟ್ಟಿ, ರಘುವೀರ್ ಬಾಬುಗುಡ್ಡೆ, ಜೆಸಿಂತಾ, ಸುಜಾತ ಶೆಟ್ಟಿ, ಮೋಹನ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.

Comments are closed.