ಕರಾವಳಿ

ಕುಂದಾಪುರ: ಚಲಿಸುತ್ತಿರುವ ರೈಲಿಗೆ ಸಿಲುಕಿ ಯುವಕನ ಕೈ ಕಟ್

Pinterest LinkedIn Tumblr

ಕುಂದಾಪುರ: ಚಲಿಸುತ್ತಿರುವ ರೈಲಿಗೆ ಸಿಲುಕಿ ಯುವಕನೋರ್ವನ ಎಡಗೈ ತುಂಡಾದ ಘಟನೆ ಗಂಗೊಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ನಾಡಾ ಮಾರ್ಕೇಟ್ ಬಳಿಯಲ್ಲಿ ನಡೆದಿದೆ.

ಬಂಟ್ವಾಡಿ ಸಮೀಪದ ಸಾಲಾಡಿ ನಿವಾಸಿ ರೋಶನ್ ಶೆಟ್ಟಿ(23) ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇಂದು ಮಧ್ಯಾಹ್ನ ರೋಶನ್ ರೈಲ್ವೇ ಹಳಿಯ ಸಮೀಪದಲ್ಲಿರುವಾಗ ರೈಲು ಬರುತ್ತಿರುವುದು ಗಮನಿಸದಿಲ್ಲದಿರುವುದು ಘಟನೆಗೆ ಕಾರಣ ಎನ್ನಲಾಗಿದೆ. ಕೊನೆ ಕ್ಷಣದಲ್ಲಿ ರೋಶನ್ ತಪ್ಪಿಸಿಕೊಳ್ಳಲು ಯತ್ನಿಸಿದರಾದರೂ ರೈಲಿನ ರಭಸಕ್ಕೆ ಎಡಗೈ ತುಂಡಾಗಿ ಬಿದ್ದಿದೆ. ಇನ್ನು ಘಟನೆಯಲ್ಲಿ ರೋಶನ್ ತಲೆ ಭಾಗಕ್ಕೂ ಗಂಭೀರ ಗಾಯಗಳಾಗಿದ್ದರಿಂದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ.

ರೋಶನ್ ಬೆಳಗಾವಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಕಳೆದ ಹದಿನೈದು ದಿನಗಳ‌ ಹಿಂದೆ ಊರಿಗೆ ಮರಳಿದ್ದರು ಎನ್ನಲಾಗಿದೆ.

Comments are closed.