ಕರಾವಳಿ

ಕಾರ್ಕಳದಲ್ಲಿ ಕತ್ತು ಸೀಳಿ ಮಹಿಳೆಯ ಬರ್ಬರ ಕೊಲೆ; ತನಿಖೆ ಚುರುಕು

Pinterest LinkedIn Tumblr

ಉಡುಪಿ: ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ಒಂಟಿ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಕತ್ತು ಸೀಳಿ ಬರ್ಬರವಾಗಿ ಹತ್ಯೆಗೈದಿದ್ದಾರೆ. ಉಡುಪಿಯ ಕುಕ್ಕುಂದೂರು ಅಯ್ಯಪ್ಪ ನಗರದ ನಿವಾಸಿ ಪ್ಲೋರಿನ್ ಮಚಾದೋ ಹತ್ಯೆಯಾದ ಮಹಿಳೆ.

ಹತ್ಯೆಯಾದ ಪ್ಲೋರಿನ್ ಮಚಾದೋ ಬಡ್ಡಿ ವ್ಯವಹಾರ ಮತ್ತು ಜಿಮ್ ನಡೆಸುತ್ತಿದ್ದರು ಎನ್ನಲಾಗಿದೆ. ತಮ್ಮ ಮಕ್ಕಳೊಂದಿಗೆ ಕಾರ್ಕಳದಲ್ಲಿ ವಾಸಿಸುತ್ತಿದ್ದ ಈಕೆ ನಿನ್ನೆ ರಾತ್ರಿ ಕೊಲೆಯಾಗಿದ್ದಾರೆ. ಮಹಿಳೆಯನ್ನು ಹತ್ಯೆಗೈದ ಕೊಲೆಗಡುಕರು ಮನೆಯಲ್ಲಿದ್ದ ದ್ವಿಚಕ್ರ ವಾಹನ ಮತ್ತು ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.

ಡಿಸೋಜಾ ತನ್ನ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದರು. ಆದ್ರೆ ನಿನ್ನೆಮಕ್ಕಳು ಮಾಳದಲ್ಲಿರುವ ತಂದೆಯ ಮನೆಗೆ ತೆರಳಿದ್ದ ಸಂರ್ದಭ ಕೃತ್ಯ ನಡೆದಿದ್ದು ಮನೆಯಲ್ಲಿ ಒಂಟಿಯಾಗಿದ್ದರು. ಇನ್ನೂ ಹತ್ಯೆಯಾದ ಪ್ಲೋರಿನ್ ಮಚಾದೋ ಕೆಲಸಕ್ಕಾಗಿ ವಿದೇಶಕ್ಕೆ ಒಂದು ವಾರದ ಬಳಿಕ ತೆರಳುವರಿದ್ದು ಇದಕ್ಕಾಗಿ ಸಿದ್ದತೆ ನಡೆಸುತ್ತಿದ್ದು ಈ ನಡುವೆ ಅವರ ಕೊಲೆಯಾಗಿದೆ.

ಘಟನಾ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು ವ್ಯಾವಹಾರಿಕ ಕಾರಣಕ್ಕೆ ಕೊಲೆ ನಡೆದಿರ ಬಹುವುದು ಎಂದು ಶಂಕಿಸಿದ್ದಾರೆ. ಈ ಸಂಬಂಧ ಕಾರ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನೂ ಪ್ರಕರಣದ ಸುತ್ತಾ ಸಾಕಷ್ಟು ಅನುಮಾನಗಳು ಸುಳಿಯುತ್ತಿದ್ದು ಪ್ಲೋರಿನ್ ಮಚಾದೋ ಅವರ ದೂರವಾಣಿ ಕರೆಗಳನ್ನು ಪೋಲಿಸರು ಪರಿಶೀಲನೆ ನಡೆಸುತ್ತಿದ್ದು ಕೊಲೆಯ ರಹಸ್ಯವನ್ನು ಬೇದಿಸಲು ಕಾರ್ಯಪ್ರವೃತ್ತರಾಗಿದ್ದಾರೆ.

Comments are closed.