ಕರಾವಳಿ

ತೊಕ್ಕೊಟು ಓವರ್ ಬ್ರಿಜ್ ಬಳಿ ಕಾರು ಅಪಘಾತ :ಬಳ್ಳಾಲ್‌ಭಾಗ್‌ನ ಮೂವರು ಯುವಕರಿಗೆ ಗಾಯ

Pinterest LinkedIn Tumblr

ಮಂಗಳೂರು : ಉಳ್ಳಾಲ ಠಾಣಾ ವ್ಯಾಪ್ತಿಯ ತೊಕ್ಕೊಟು ಓವರ್ ಬ್ರಿಜ್ ಬಳಿ ನಡೆದ ಕಾರು ಅಪಘಾತದಲ್ಲಿ ಮೂವರು ಯುವಕರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬುಧವಾರ ತಡರಾತ್ರಿ ಸಂಭವಿಸಿದೆ.

ಅಪಘಾತದಲ್ಲಿ ಗಾಯಗೊಂಡ ಯುವಕರನ್ನು ನಗರದ ಬಳ್ಳಾಲ್‌ಭಾಗ್ ನಿವಾಸಿಗಳಾದ ವಿನಿತ್ (21) ಆತನ ಸಹೋದರ ವಿನಿಶ್ (18) ಹಾಗೂ ಕಾರು ಚಾಲನೆ ಮಾಡುತ್ತಿದ್ದ ಜೋಯಲ್ ಎಂದು ಗುರುತಿಸಲಾಗಿದೆ.

ಈ ಯುವಕರು ಮದೂರು ನಲ್ಲಿ ನಡೆದ ಮೆಹಂದಿ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಕಾರಿನಲ್ಲಿ ಬಳ್ಳಾಲ್‌ಭಾಗ್‌ಗೆ ಹಿಂತಿರುಗುತ್ತಿದ್ದಾಗ ತೊಕ್ಕೊಟ್ಟು ನಿರ್ಮಾಣ ಹಂತದ ಸೇತುವೆಯ ಅಡಿಯಲ್ಲಿ ಅಡ್ಡ ಬಂದ ಬೈಕ್ ಒಂದನ್ನು ತಪ್ಪಿಸಲು ಯತ್ನಿಸಿದ ಸಂದರ್ಭ ಕಾರು ಚಾಲಕನ ನಿಯಂತ್ರಣ ತಪ್ಪಿ ಅಲ್ಲೆ ಪಕ್ಕದಲ್ಲಿ ಕಾಮಗಾರಿಗೆ ಬಳಸಲು ತಂದಿದ್ದ ಕಾಂಕ್ರೀಟ್ ಸ್ಲ್ಯಾಬ್‌ಗೆ ಬಡಿದಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಈ ಬಗ್ಗೆ ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.

Comments are closed.