ಕರಾವಳಿ

ಬಜೆಟ್ ಮಂಡನೆ ಯಶಸ್ವಿಯಾಗಿ ನಡೆಯಲು ಜೆಡಿಎಸ್‌ನಿಂದ ಶ್ರೀ ಕ್ಷೇತ್ರ ಕದ್ರಿಯಲ್ಲಿ ಏಕರುದ್ರಾಭಿಷೇಕ ಪೂಜೆ

Pinterest LinkedIn Tumblr

ಮಂಗಳೂರು. ಜುಲೈ.05 : ರಾಜ್ಯ ಸರಕಾರದ ಬಜೆಟ್ ಮಂಡನೆಯೂ ಯಾವುದೇ ಆತಂಕ, ಅಡೆತಡೆ. ಸಮಸ್ಯೆ ಇಲ್ಲದೆ. ರಾಜ್ಯದ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಯಶಸ್ವಿಯಾಗಿ ಮಂಡಿಸಲಿ ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಾತ್ಯತೀತ ಜನತಾದಳ ವತಿಯಿಂದ ಬುಧವಾರ ನಗರದ ಕದ್ರಿ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಸನ್ನಿಧಿಯಲ್ಲಿ ಏಕರುದ್ರಾಭಿಷೇಕ ಪೂಜೆಯನ್ನು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ವಸಂತ ಪೂಜಾರಿ ಹಾಗೂ ಜಿಲ್ಲೆಯ ನಾಯಕರ ಸಮ್ಮುಖದಲ್ಲಿ ನಡೆಸಲಾಯಿತು.

ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಚಿವ ಕೆ ಅಮರನಾಥ ಶೆಟ್ಟಿ ಅವರು, ರಾಜ್ಯದ ಬಡವರ, ರೈತರ ಪರ ಕಾಳಜಿಯುಳ್ಳ ಮುಖ್ಯಮಂತ್ರಿ ಎಂದರೆ ಅದು ಎಚ್ ಡಿ ಕುಮಾರಸ್ವಾಮಿ ಅವರು ಈ ನಿಟ್ಟಿನಲ್ಲಿ ಯಶಸ್ವಿಯಾಗಿ ಬಜೆಟ್ ಮಂಡನೆಯಾಗಲಿದೆ ಎಂದು ತಿಳಿಸಿದರು .

ರಾಜ್ಯ ಜೆಡಿಎಸ್ ಉಪಾಧ್ಯಕ್ಷ ಎಂ ಬಿ ಸದಾಶಿವ ಅವರು,ಮಾತನಾಡಿ ಸರ್ವ ಜಾತಿ. ಸರ್ವ ಧರ್ಮದ. ಬಜೆಟ್ ಮಂಡನೆಯಾಗಲಿದ್ದು.ರೈತರ. ಬಡವರ. ಶೋಷಿತರ. ದಿನ ದಲಿತರ ನಾಯಕನಾಗಿ ಮುಖ್ಯಮಂತ್ರಿಗಳು ಯಾವುದೇ ಆತಂಕವಿಲ್ಲದೆ ಬಜೆಟ್ ಮಂಡಿಸಲಿದ್ದಾರೆ ಎಂದು ತಿಳಿಸಿದರು.

ಜೆಡಿಎಸ್ ನಾಯಕರುಗಳಾದ ಜಿಲ್ಲಾ ಕಾರ್ಯಧ್ಯಕ್ಷ ರಾಮ್ ಗಣೇಶ್. ಜಿಲ್ಲಾ ವಕ್ತಾರ ಸುಶೀಲ್ ನೋರೋನ. ಗೋಪಾಲಕೃಷ್ಣ ಅತ್ತಾವರ.ಪುಷ್ಪರಾಜನ್. ಗಂಗಾಧರ್ ಉಳ್ಳಾಲ್. ದಿವಾಕರ್ ಶೆಟ್ಟಿ ತೋಡಾರ್.ಅಕ್ಷಿತ್ ಸುವರ್ಣ. ಅಜೀಜ್ ಕುದ್ರೋಳಿ.ಮುನೀರು ಮುಕ್ಕಚೇರಿ. ವೀಣಾ ಶೆಟ್ಟಿ. ಮಧುಸೂದನ ಗೌಡ. ಶಾಲಿನಿ. ಕವಿತಾ. ಶ್ರೀನಾಥ್ ರೈ ಹಾಗೂ ಇತರ ಜಿಲ್ಲಾ ನಾಯಕರುಗಳು ಈ ವೇಳೆ ಉಪಸ್ಥಿತರಿದ್ದರು.

Comments are closed.