ಕರಾವಳಿ

ಬಿಸಿ ಬಿಸಿ ಕಾಫಿಯಿಂದ ನಾಲಿಗೆ ಸುಟ್ಟುಬಿಟ್ಟದೆಯೇ.. ಇಲ್ಲಿದೆ ಅದಕ್ಕೆ ಸೂಕ್ತ ಪರಿಹಾರ..

Pinterest LinkedIn Tumblr

ಕಾಫಿ ಕುಡಿಯದವರು ಯಾರಿದ್ದಾರೆ ಹೇಳಿ? ದಿನದಲ್ಲಿ ಒಂದು ಬಾರಿಯಾದರೂ ನಾವು ಕಾಫಿ ಕುಡಿಯುತ್ತೇವೆ. ಬಿಸಿ ಬಿಸಿ ಕಾಫಿಯನ್ನು ನಿಧಾನವಾಗಿ ಒಂದೊಂದೇ ಸಿಪ್ ಕುಡಿಯುವುದರಲ್ಲಿರುವ ಮಜಾನೇ ಬೇರೆ. ಆದರೆ ಅದೇ ಬಿಸಿ ಬಿಸಿ ಕಾಫಿ ನಮ್ಮ ನಾಲಿಗೆ ಸುಟ್ಟುಬಿಟ್ಟರೆ? ಅಬ್ಬಬ್ಬಾ ಉರಿಯೋ ಉರಿ ಅಲ್ಲವೇ?

ಈ ಉರಿಯನ್ನು ಶಮನ ಮಾಡಲು ತಕ್ಷಣ ಅದೇನು ಮಾಡಬೇಕೆಂದು ತಿಳಿದುಕೊಳ್ಳೋಣ ಬನ್ನಿ;

ಸಕ್ಕರೆ :
ಬಾಯಿ ಸುಟ್ಟುಕೊಂಡರೆ ಒಂಚೂರು ಸಕ್ಕರೆ ಅಥವಾ ಕಲ್ಲು ಸಕ್ಕರೆ ಬಾಯಿಗೆ ಹಾಕಿ ಸ್ವಲ್ಪ ಹೊತ್ತು ಇಟ್ಟುಕೊಳ್ಳಿ.

ಪುದೀನಾ:
ಪುದೀನಾ ಎಲೆ ಎಂದರೆ ಒಗರು ಒಗರಾಗಿರುತ್ತದೆ. ಆದರೂ ಬಾಯಿ ಸುಟ್ಟುಕೊಂಡರೆ ಪುದೀನಾ ಎಲೆಗಳನ್ನು ಜಗಿಯಿರಿ.

ಜೇನುತುಪ್ಪ:
ಯಾವುದೇ ಸುಟ್ಟ ಗಾಯಕ್ಕೂ ಜೇನು ತುಪ್ಪ ಒಳ್ಳೆಯ ಮದ್ದು. ಹಾಗೆಯೇ ಬಾಯಿ ಸುಟ್ಟಿದ್ದರೂ ಜೇನು ತುಪ್ಪ ಸೇವಿಸಿ.

ಮಜ್ಜಿಗೆ:
ಬಾಯಿ ಸುಟ್ಟುಕೊಂಡ ತಕ್ಷಣ ಮಜ್ಜಿಗೆ ಕುಡಿಯಿರಿ.

ಅಲೋವೇರಾ:
ಅಲೋವೇರಾ ಬಾಯಿ ಉರಿ ಮತ್ತು ಸಂವೇದನೆ ಕಳೆದುಕೊಂಡಿದ್ದರೂ ಅದನ್ನು ಮರಳಿ ಪಡೆಯುವುದಕ್ಕೆ ಸಹಾಯ ಮಾಡುತ್ತದೆ.

Comments are closed.