ಕರಾವಳಿ

ಹಲಸು ತಿಂದ್ರೆ ಏಡ್ಸ್ ಬರೋದಿಲ್ಲವಂತೆ: ಶಾಸಕ ರಘುಪತಿ ಭಟ್ರ ಹೇಳಿಕೆ ಫುಲ್ ವೈರಲ್!

Pinterest LinkedIn Tumblr

ಉಡುಪಿ: ಉಡುಪಿಯ ಶಾಸಕ ರಘುಪತಿ ಭಟ್ ನೀಡಿದ ಹೇಳಿಕೆಯೊಂದು ಸದ್ಯ ಟ್ರೋಲ್ ಆಗಿದೆ. ಹಲಸಿನ ಹಣ್ಣು ತಿಂದರೇ ಏಡ್ಸ್ ಬರಲ್ಲ ಅಂತ ರಘುಪತಿ ಭಟ್ರು ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಇದು ಸದ್ಯ ಸಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಕೂಡ ಆಗಿದೆ.

ಉಡುಪಿಯ ಪುಷ್ಪ ಹರಾಜು ಕೇಂದ್ರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾದ ಜಿಲ್ಲಾ ಮಟ್ಟದ ಹಲಸು ಮೇಳದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ಹಲಸಿನ ಹಣ್ಣು ತಿಂದರೆ ಮದುಮೇಹ ನಿಯಂತ್ರಣ ಸಾಧ್ಯ. ಅಷ್ಟೇ ಅಲ್ಲ ಹಲಸಿನ ತಿನ್ನುವುದರಿಂದ ಏಡ್ಸ್ ಖಾಯಿಲೆ ಸೊಂಕುವುದಿಲ್ಲ ಅಂತಾ ಹೇಳಿದ್ದಾರೆ. ಬಳಿಕ ಮುಂದುವರೆಸಿದ ಅವರು ಹೀಗಂತ ಕೇಳಿ ತಿಳಿದಿದ್ದೇನೆ. ಇಂತಹ ಕೆಲವು ರೂಮರ್‍ಸ್ ಗಳಿಂದ ಕೆಲವು ವಿಚಾರಕ್ಕೆ ಹೆಚ್ಚು ಮಾನ್ಯತೆ ಸಿಗುತ್ತೆ ಎಂದರು.

ಶಾಸಕರ ಈ ಹೇಳಿಕೆ ಈಗ ಸಾಮಾಜಿಕ ಜಾಲ ತಾಣದಲ್ಲಿ ಬಾರೀ ವೈರಲ್ ಆಗಿದ್ದು ಹಾಸ್ಯಾಸ್ಪದವಾಗಿದೆ.

Comments are closed.