ಕುಂದಾಪುರ: ಬೈಂದೂರು ತಾಲೂಕಿನ ಶಿರೂರು ಸಮೀಪದ ಹಳ್ಳವೊಂದರಲ್ಲಿ ಪತ್ತೆಯಾದ ಸಾವಿರಾರು ಪಡಿತರ ಚೀಟಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಹೇಳಿಕೆ ನೀಡಿದ್ದಾರೆ.

ಪಡಿತರ ಚೀಟಿ ವಶಕ್ಕೆ ಪಡೆದು, ತನಿಖೆ ನಡೆಸಲಾಗಿದೆ.ಬೈಂದೂರು ತಹಶಿಲ್ದಾರ್ ಕಚೇರಿಯಲ್ಲಿ ಕಾರ್ಡುಗಳ ಪರಿಶೀಲನೆ ನಡೆಸಿದ್ದು 2000 ರದ್ದಾದ ಪಡಿತರ ಚೀಟಿಗಳು ಪತ್ತೆಯಾಗಿದೆ. ಇವೆಲ್ಲವೂ ಹೊಸದಾಗಿ ನೀಡುವಾಗ ವಾಪಾಸ್ ಪಡೆದ ಪಡಿತರ ಚೀಟಿಗಳಾಗಿದೆ. ಆದರೇ ಈ ಪಡಿತರ ಚೀಟಿಗಳನ್ನು ವಿಲೇವಾರಿ ಮಾಡಿದ ರೀತಿ ತಪ್ಪಾಗಿದ್ದು ದಕ್ಷಿಣಕನ್ನಡ ಜಿಲ್ಲೆಯ ಆಹಾರ, ನಾಗರಿಕ ಸರಬರಾಜು & ಗ್ರಾಹಕ ವ್ಯವಹಾರಗಳ ಇಲಾಖೆಗೆ ನಿಯಮಾನುಸಾರ ಇದನ್ನು ವಿಲೆ ಮಾಡಲು ಸೂಚನೆ ನೀಡಲಾಗಿದೆ ಎಂದು ಉಡುಪಿ ಡಿಸಿ ಪ್ರಿಯಾಂಕ ಮಾಧ್ಯಮ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿರಿ:
ಬೈಂದೂರಿನಲ್ಲಿ ಪತ್ತೆಯಾಯ್ತು ಗೋಣಿ ಚೀಲದಲ್ಲಿದ್ದ ಬಂಟ್ವಾಳ ಕ್ಷೇತ್ರದ ಸಾವಿರಾರು ಪಡಿತರ ಚೀಟಿಗಳು!
Comments are closed.