ಕರಾವಳಿ

ಆರೋಗ್ಯಕ್ಕೆ ಸಹಕಾರಿಯಾದ ಬಿಳಿ ಈರುಳ್ಳಿ ಬಗ್ಗೆ ನಿಮಗೆಷ್ಟು ತಿಳಿದಿದೆ…?

Pinterest LinkedIn Tumblr

ಬಿಳಿ ಈರುಳ್ಳಿಯಲ್ಲಿ ಸಾಮಾನ್ಯ ಈರುಳ್ಳಿಯಲ್ಲಿರದ ಹಲವು ಪೋಷಕಾಂಶಗಳಿವೆ. ವಿಟಮಿನ್ ಸಿ, ಫ್ಲೇವನಾಯ್ಡ್ ಮತ್ತು ಫೈಟೋ ನ್ಯೂಟ್ರಿಯೆಂಟ್ ಗಳೆಂಬ ಪೋಷಕಾಂಶಗಳು ಬಿಳಿ ಈರುಳ್ಳಿಯಲ್ಲಿ ಬೇರಾವುದೇ ತರಕಾರಿಯಲ್ಲಿ ಲಭ್ಯವಾಗದಷ್ಟು ಆಗಾಧ ಪ್ರಮಾಣದಲ್ಲಿದೆ.

ಬಿಳಿ ಈರುಳ್ಳಿಯಲ್ಲಿ ಸಾಮಾನ್ಯ ಈರುಳ್ಳಿಯಲ್ಲಿರದ ಹಲವು ಪೋಷಕಾಂಶಗಳಿವೆ. ವಿಟಮಿನ್ ಸಿ, ಫ್ಲೇವನಾಯ್ಡ್ ಮತ್ತು ಫೈಟೋ ನ್ಯೂಟ್ರಿಯೆಂಟ್ ಗಳೆಂಬ ಪೋಷಕಾಂಶಗಳು ಬಿಳಿ ಈರುಳ್ಳಿಯಲ್ಲಿ ಬೇರಾವುದೇ ತರಕಾರಿಯಲ್ಲಿ ಲಭ್ಯವಾಗದಷ್ಟು ಆಗಾಧ ಪ್ರಮಾಣದಲ್ಲಿದೆ.

ಹೃದಯದ ಕ್ಷಮತೆಯನ್ನು ಹೆಚ್ಚಿಸುತ್ತದೆ
ಹೃದಯ ಇಡಿಯ ದೇಹಕ್ಕೆ ರಕ್ತ ಪೂರೈಸಲು ಸತತವಾಗಿ ಬಡಿಯುತ್ತಲೇ ಇರಬೇಕು. ಇದಕ್ಕಾಗಿ ಹೃದಯಕ್ಕೂ ರಕ್ತಪೂರೈಕೆಯ ಅಗತ್ಯವಿದೆ.ಈ ರಕ್ತನಾಳಗಳಲ್ಲಿ ಕೊಂಚವಾದರೂ ರಕ್ತ ಹೆಪ್ಪುಗಟ್ಟಲು ತೊಡಗಿದರೆ ನಿಧಾನವಾಗಿ ಹೃದಯಸ್ತಂಭನದ ಸಾಧ್ಯತೆಗಳು ಹೆಚ್ಚುತ್ತಾ ಹೋಗುತ್ತವೆ. ಬಿಳಿ ಈರುಳ್ಳಿಯ ನಿಯಮಿತ ಸೇವನೆಯಿಂದ ಈ ರಕ್ತ ಹೆಪ್ಪುಗಟ್ಟುವ ಸಾಧ್ಯತೆ ಕಡಿಮೆಯಾಗಿ ಹೃದಯದ ಕ್ಷಮತೆ ಹೆಚ್ಚುತ್ತದೆ, ತನ್ಮೂಲಕ ಆರೋಗ್ಯ ಉತ್ತಮಗೊಳ್ಳುತ್ತದೆ.

ವಿವಿಧ ಕ್ಯಾನ್ಸರ್ ಬರುವುದನ್ನು ತಡೆಯುತ್ತದೆ
ಬಿಳಿ ಈರುಳ್ಳಿಯಲ್ಲಿರುವ ಕ್ವೆರ್ಸೆಟಿನ್ (quercetin) ಎಂಬ ಪೋಷಕಾಂಶವು ಕ್ಯಾನ್ಸರ್ ಕಾರಕ ಕಣಗಳ ವಿರುದ್ಧ ಹೋರಾಡುವ ಗುಣ ಹೊಂದಿವೆ. ಬಿಳಿ ಈರುಳ್ಳಿಯನ್ನು ನಮ್ಮ ನಿತ್ಯದ ಅಹಾರಗಳ ಜೊತೆ ಸೇವಿಸುವುದರಿಂದ ದೇಹ ಕ್ಯಾನ್ಸರ್ ವಿರುದ್ಧ ಹೋರಾಡುವ ಶಕ್ತಿಯನ್ನು ಬೆಳೆಸಿಕೊಂಡು ಹಲವು ವಿಧದ ಕ್ಯಾನ್ಸರ್ ಬರುವುದರಿಂದ ತಡೆದಂತಾಗುತ್ತದೆ

ರಕ್ತದ ಗಾಢತೆಯನ್ನು ಕಡಿಮೆಗೊಳಿಸುತ್ತದೆ
ಮಾನವ ಸಂಬಂಧಗಳ ಗಾಢತೆಯನ್ನು ಬಿಂಬಿಸಿದರೂ ರಕ್ತ ಅತಿಹೆಚ್ಚು ಗಾಢವಾಗಿರುವುದು ಆರೋಗ್ಯಕ್ಕೆ ಮಾರಕ. ಗಾಢವಾಗಿರುವ ರಕ್ತವನ್ನು ದೇಹದ ತುದಿಯ ಭಾಗಗಳಿಗೆ ತಲುಪಿಸಲು ಹೃದಯಕ್ಕೆ ಹೆಚ್ಚಿನ ಒತ್ತಡ ನೀಡಬೇಕಾಗುತ್ತದೆ.

ಉರಿಯೂತ ವಿರೋಧಿ
ಗುಣ ಬಿಳಿ ಈರುಳ್ಳಿಯಲ್ಲಿ ಉತ್ತಮ ಪ್ರಮಾಣದಲ್ಲಿರುವ ಗಂಧಕ ಇದನ್ನೊಂದು ಉರಿಯೂತ ವಿರೋಧಿ (Anti-inflammatory) ಯನ್ನಾಗಿಸಿದೆ. ಇದು ದೇಹದ ಹಲವಾರು ತೊಂದರೆಗಳಿಂದ ರಕ್ಷಿಸುತ್ತದೆ. ವಿಶೇಷವಾಗಿ ಅಸ್ತಮಾ ರೋಗಿಗಳಿಗೆ ಬಿಳಿ ಈರುಳ್ಳಿಯ ಈ ಗುಣ ಹೆಚ್ಚು ಫಲಕಾರಿಯಾಗಿದೆ.

ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ಬಿಳಿ ಈರುಳ್ಳಿಯಲ್ಲಿರುವ ಆಗಾಧ ಪ್ರಮಾಣದ ವಿಟಮಿನ್ ಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ನೆರವಾಗುತ್ತದೆ. ಅಲ್ಲದೇ ದೇಹದಲ್ಲಿ ಅಲರ್ಜಿಕಾರಕ ಕಣಗಳಿದ್ದರೆ ಅದನ್ನು ತೊಡೆಯಲು ಬೆಂಬಲಿಸಿ ವಿವಿಧ ಅಲರ್ಜಿಗಳಿಂದ ರಕ್ಷಿಸುತ್ತದೆ.

ಜೀರ್ಣಶಕ್ತಿಯನ್ನು ಉತ್ತಮಗೊಳಿಸುತ್ತದೆ
ಬಿಳಿ ಈರುಳ್ಳಿಯಲ್ಲಿರುವ ವಿವಿಧ ಆಮ್ಲಗಳು ಜಠರರಸದೊಡನೆ ಮಿಳಿತಗೊಂಡ ಬಳಿಕ ಜೀರ್ಣಕ್ರಿಯೆ ಉತ್ತಮಗೊಳ್ಳುತ್ತದೆ. ಇದರಲ್ಲಿರುವ ಕರಗುವ ನಾರು ಕರುಳುಗಳ ಒಳಗೆ ಹುಣ್ಣುಗಳಾಗದಂತೆ ನೋಡಿಕೊಳ್ಳುತ್ತದೆ ಹಾಗೂ ದೊಡ್ಡಕರುಳಿನಿಂದ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೀರಿಕೊಳ್ಳಲು ನೆರವಾಗುತ್ತದೆ. ಪರಿಣಾಮವಾಗಿ ಅಲ್ಸರ್ (ಕರುಳಿನ ಹುಣ್ಣು) ಅತಿಸಾರ, ಅಮಶಂಕೆ ಮತ್ತು ಕರುಳಿನ ತೊಂದರೆಗಳಿಂದ ಮುಕ್ತಿ ದೊರಕುತ್ತದೆ.

ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸುತ್ತದೆ
ಟೆಕ್ಸಸ್ ವಿಶ್ವವಿದ್ಯಾಲಯದಲ್ಲಿ ನಡೆದ ಇತ್ತೀಚಿನ ಸಂಶೋಧನೆಗಳ ಪ್ರಕಾರ ಬಿಳಿ ಈರುಳ್ಳಿಯಲ್ಲಿ ಕ್ರೋಮಿಯಂ ಎಂಬ ಖನಿಜವಿದೆ. ಕ್ರೋಮಿಯಂ ಮತ್ತು ಗಂಧಕದ ಜೋಡಿ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಿಸಲು, ತನ್ಮೂಲಕ ಮಧುಮೇಹವನ್ನು ತಹಬಂದಿಗೆ ತರಲು ಸೂಕ್ತವಾದ ರುಸ್ತುಂಜೋಡಿಯಾಗಿದೆ.

ಮೂಳೆಗಳ ಸಾಂದ್ರತೆಯನ್ನು ಹೆಚ್ಚಿಸುತ್ತದೆ
ವಯಸ್ಸಾದಂತೆ ಮೂಳೆಗಳು ತಮ್ಮ ಸಾಂದ್ರತೆಯನ್ನು ಕಳೆದುಕೊಳ್ಳುತ್ತವೆ. ವಿಶೇಷವಾಗಿ ಮಹಿಳೆಯರಲ್ಲಿ ಈ ತೊಂದರೆ ಹೆಚ್ಚು. ತಮ್ಮ ಆಹಾರದಲ್ಲಿ ನಿಯಮಿತವಾಗಿ ಬಿಳಿ ಈರುಳ್ಳಿಯನ್ನು ಸೇವಿಸಿದವರಲ್ಲಿ ಮೂಳೆಸವೆತ, ಬೆನ್ನು ಬಾಗುವುದು, ಮೂಳೆಗಳು ಟೊಳ್ಳಾಗುವುದು ಅಥವಾ ಗಾಳಿಗುಳ್ಳೆಗಳು ತುಂಬಿಕೊಳ್ಳುವುದು (osteoporosis) ಮೊದಲಾದ ತೊಂದರೆಗಳಿಂದ

ಬಿಳಿ ಈರುಳ್ಳಿಯಲ್ಲಿರುವ ಫೋಲಿಕ್ ಆಮ್ಲಕ್ಕೆ ಬಂಜೆತನಕ್ಕೆ ಕಾರಣವಾಗುವ ಪರಿಸ್ಥಿತಿಯನ್ನು ಸುಧಾರಿಸುವ ಗುಣವಿದೆ. ಜೊತೆಗೇ ಬಿಳಿ ಈರುಳ್ಳಿಯಲ್ಲಿರುವ ಕಬ್ಬಿಣದ ಅಂಶ ಈ ಶಕ್ತಿಗೆ ಬೆಂಬಲ ನೀಡುತ್ತದೆ. ಪರಿಣಾಮವಾಗಿ ಮಹಿಳೆಯರಿಗೂ, ಪುರುಷರಿಗೂ ಬಂಜೆತನದಿಂದ ಮುಕ್ತಿ ದೊರಕುತ ಸಾಧ್ಯತೆ ದಟ್ಟವಾಗುತ್ತದೆ.

Comments are closed.