ಕುಂದಾಪುರ: ಉಡುಪಿ ಕರಾವಳಿ ಬೈಪಾಸ್ ಬಳಿ ನಿರ್ಮಾಣವಾಗುತ್ತಿರುವ ಅಂಡರ್ ಪಾಸ್ ಕಾಮಗಾರಿ ಒಂದು ತಿಂಗಳೊಳಗೆ ಹಾಗೂ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ತಲೆ ಎತ್ತಿದ ಪ್ಲೇ ಓವರ್ ಕೆಲಸ ಆರು ತಿಂಗಳೊಳಗೆ ಮುಗಿಸುವಂತೆ ಹೆದ್ದಾರಿ-66 ಚತುಷ್ಪದ ರಸ್ತೆ ಕಾಮಗಾರಿ ಗುತ್ತಿಗೆಪಡೆದ ನವಯುಗ ಕಂಪನಿಗೆ ಕುಂದಾಪುರ ಎಸಿ ಟಿ.ಭೂಬಾಲನ್ ತಾಕೀತು ಮಾಡಿದ್ದಾರೆ.
ಹೆದ್ದಾರಿ ವಿಸ್ತರಣೆ ಹಿನ್ನೆಲೆಯಲ್ಲಿ ಕುಂದಾಪುರ ಉಡುಪಿಯಲ್ಲಿ ನಿರ್ಮಿಮಾಣ ಆಗುತ್ತಿರುವ ಪ್ಲೇ ಓವರ್ ಹಾಗೂ ಅಂಡರ್ ಪಾಸ್ ಕಾಮಗಾರಿ ವಿಳಂಬದ ಹಿನ್ನೆಲೆಯಲ್ಲಿ ನವಯುಗ ಕಂಪನಗೆ ಎಸಿ ನೊಟೀಸ್ ಜಾರಿ ಮಾಡಿದ್ದರು. ಕಂಪನಿ ಇಂಜಿನಿಯರ್ ಹಾಗೂ ಅಧಿಕಾರಿಗಳು ತಮ್ಮ ವಕೀಲರ ಮೂಲಕ ಬುಧವಾರ ಎಸಿ ಕಚೇರಿಗೆ ಹಾಜರಾಗಿದ್ದು, ಕರಾವಳಿ ಅಂಡರ್ ಪಾಸ್ ರಸ್ತೆ ಒಂದು ತಿಂಗಳ ಒಳಗೆ ಮುಗಿಸುವ ಭರವಸೆ ನೀಡಿದ್ದು, ಕುಂದಾಪುರ ಪ್ಲೇ ಓವರ್ ಕೆಲಸ ಮುಗಿಸಲು ಒಂದು ವರ್ಷ ಕಾಲಾವಕಾಶ ಕೇಳಿದ್ದರು. ಎಸಿ 6 ತಿಂಗಳ ಒಳಗೆ ಕಾಮಗಾರಿ ಮುಗಿಸಲು ಸೂಚಿಸಿದ್ದಾರೆ.
ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಮೊದಲು ಅಂಡರ್ ಪಾಸ್ ನಿರ್ಮಿಸಲು ಉದ್ದೇಶಿಸಿದ್ದು, ನಂತರ ಪ್ಲೇ ಓವರ್ ನಿರ್ಮಾಣಕ್ಕೆ ನಿದರಿಸಿದ್ದರಿಂದ ಬದಲಾದ ಕಾಮಗಾರಿ ಅಪ್ರೂವೆಲ್ ಆಗಿ ಬರುವುದು ವಿಳಂಬವಾಯಿತು. ಕಳೆದ ಮೂರು ವರ್ಷದಿಂದ ಕಾಮಗಾರಿ ಭರದಿಂದ ನಡೆಸುತ್ತಿದ್ದು, ಮಳೆಗಾಲ ನಾಲ್ಕು ತಿಂಗಳು ಕಾಮಗಾರಿ ಮಾಡಲು ಸಮಸ್ಯೆ ಆಗುವುದರಿಂದ ಒಂದು ವರ್ಷದ ಅವಕಾಶ ನೀಡುವಂತೆ ಎಸಿಗೆ ಮನವಿ ಮಾಡಲಾಯಿತು. ಆದಕ್ಕೆ ಒಪ್ಪದ ಎಸಿ ಭೂಬಾಲನ್ ಕೇವಲ ಆರು ತಿಂಗಳು ಕಾಲವಕಾಶದಲ್ಲಿ ಕೆಲಸ ಮುಗಿಸಿಬೇಕು ಎಂದು ಹೇಳಿದ್ದಾರೆ.
Comments are closed.